ಲಂಡನ್[ಜೂ.02]: ಭಾರತ ವಿರುದ್ಧ ಜೂ.5ರಂದು ಬಹು ನಿರೀಕ್ಷಿತ ಪಂದ್ಯವನ್ನಾಡಲಿರುವ ದಕ್ಷಿಣ ಆಫ್ರಿಕಾ, ಪಂದ್ಯಕ್ಕೂ ಮುನ್ನ ಮೈಂಡ್‌ಗೇಮ್ ಆರಂಭಿಸಿದೆ. ತಂಡದ ತಾರಾ ವೇಗದ ಬೌಲರ್ ಕಗಿಸೋ ರಬಾಡ, ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕಿದ್ದಾರೆ. 

ಐಪಿಎಲ್ ವೇಳೆ ನಡೆದ ಪ್ರಸಂಗವೊಂದನ್ನು ಉಲ್ಲೇಖಿಸಿ ‘ಕೊಹ್ಲಿ ಅಪ್ರಬುದ್ಧ’ ಎಂದಿದ್ದಾರೆ. ಖಾಸಗಿ ಕ್ರಿಕೆಟ್ ವೆಬ್‌ಸೈಟ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಬಾಡ, ‘ವಿರಾಟ್ ಒಂದು
ಬೌಂಡರಿ ಬಾರಿಸಿದರೆ ಅನಗತ್ಯ ಪದಗಳನ್ನು ಬಳಸುತ್ತಾರೆ. ಆದರೆ ನಾವು ತಿರುಗಿಸಿ ಏನಾದರು ಅಂದರೆ ಅವರಿಗೆ ಸಿಟ್ಟು ಬರುತ್ತದೆ. ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಅವರ ವರ್ತನೆ ಅಪ್ರಬುದ್ಧ ಎನಿಸುತ್ತದೆ. ಅವರೊಬ್ಬ ಶ್ರೇಷ್ಠ ಆಟಗಾರ, ಆದರೆ ಎದುರಾಳಿ ತಿರುಗೇಟು ನೀಡಿದಾಗ ಸಹಿಸಿಕೊಳ್ಳುವ ಶಕ್ತಿ ಇಲ್ಲ’ ಎಂದಿದ್ದಾರೆ. 

ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇದೀಗ ಜೂನ್ 02ರಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದ್ದು, ಆ ಬಳಿಕ ಜೂನ್ 05ರಂದು ಭಾರತ ವಿರುದ್ಧ ಕಣಕ್ಕಿಳಿಯಲಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...