ಸೌಥಾಂಪ್ಟನ್(ಜೂ.05): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಭಿಯಾನ ಆರಂಭಗೊಂಡಿದೆ. ಒಂದೆಡೆ ಬಲಿಷ್ಠ ತಂಡಗಳು ನೀರಸ ಪ್ರದರ್ಶನ ನೀಡಿದರೆ, ಮತ್ತೊಂದೆಡೆ ದುರ್ಬಲ ಎನಿಸಿಕೊಂಡಿರುವ ತಂಡಗಳು ಅಚ್ಚರಿ ಫಲಿತಾಂಶ ನೀಡುತ್ತಿದೆ. ಇದರ ಬೆನ್ನಲ್ಲೇ ಸೆಮಿಫೈನಲ್ ಪ್ರವೇಶಿಸೋ ತಂಡಗಳು ಯಾವುದು ಅನ್ನೋ ಕುತೂಹಲ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಐಸಿಸಿ ಭಾರತದ ಅಭಿಮಾನಿಯಂತೆ ವರ್ತಿಸುತ್ತಿದೆ-ಕ್ರಿಕೆಟ್ ಸಂಸ್ಥೆ ಕಾಲೆಳೆದ ಟ್ವಿಟರಿಗರು!

ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಇದೀಗ ಸೆಮಿಫೈನಲ್ ಎಂಟ್ರಿ ಕೊಡೋ ತಂಡಗಳು ಯಾವುದು ಅನ್ನೋದರ ಭವಿಷ್ಯ ನುಡಿದಿದ್ದಾರೆ. ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಇದರ ಜೊತೆಗೆ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸೆಮೀಸ್ ಪ್ರವೇಶಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ: ಕೊನೆಗೂ ಕತ್ರಿನಾ ಕೈಫ್ ಭೇಟಿಯಾದ ಮೊಹಮ್ಮದ್ ಕೈಫ್!

ಸೆಮಿಫೈನಲ್ ಮಾತ್ರವಲ್ಲ, ಈ ಬಾರಿಯ ಸರಣಿ ಶ್ರೇಷ್ಠ ಪ್ರಶಸ್ತಿ ಕುರಿತು ಭವಿಷ್ಯ ಹೇಳಿದ್ದಾರೆ. ಆಸಿಸ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 2019ರ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವ ಎಲ್ಲಾ ಸಾಧ್ಯತೆಗಳಿವೆ ಎಂದಿದ್ದಾರೆ.