ಮುಂಬೈ(ಜೂ.05): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ಚರ್ಚೆಯಾಗಿದ್ದಾರೆ. ಅದರಲ್ಲೂ ಕೈಫ್ ಸರ್‌ನೇಮ್ ಟ್ವಿಟರಿಗರ ಕುತೂಹಲಕ್ಕೆ ಕಾರಣವಾಗಿದೆ. ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ಮೊಹಮ್ಮದ್ ಕೈಫ್ ಇಬ್ಬರೂ ಒಂದೇ ಸರ್‌ನೇಮ್ ಹೀಗಾಗಿ, ಟ್ವಿಟರಿಗರಿಗೆ ಆಹಾರವಾಗಿದ್ದರು. ಸುದೀರ್ಘ ವರ್ಷಗಳ ಬಳಿಕ ಕೊನೆಗೂ ಮೊಹಮ್ಮದ್ ಕೈಫ್ ಹಾಗೂ ಕತ್ರಿನಾ ಕೈಫ್ ಭೇಟಿಯಾಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಟೀಂ ಇಂಡಿಯಾ ಹೆಜ್ಜೆಗುರುತು

ಕತ್ರಿನಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಮೊಹಮ್ಮದ್ ಕೈಫ್, ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ, ಗೆಳೆತನ ಹೊರತುಪಡಿಸಿ ಎಂದು ಟ್ವೀಟ್ ಮಾಡಿದ್ದಾರೆ. ಕೈಫ್ ಟ್ವೀಟ್‌ಗೆ ಕೆಲವರು ಮೊಹಮ್ಮದ್ ಕತ್ರಿನಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

 

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್!

ವಿಶ್ವಕಪ್ ಟೂರ್ನಿ ಹಾಗೂ ಟೀಂ ಇಂಡಿಯಾ ಮಾತುಕತೆಯಲ್ಲಿ ಭಾಗವಹಿಸಿದ್ದ ವೇಳೆ ಮೊಹಮ್ಮದ್ ಕೈಫ್ ಹಾಗೂ ಕತ್ರಿನಾ ಕೈಫ್ ಭೇಟಿಯಾಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೈಫ್ ಭೇಟಿ ಸದ್ದು ಮಾಡುತ್ತಿದೆ.