ದುಬೈ(ಜೂ.05): ವಿಶ್ವಕಪ್ ಟೂರ್ನಿ ಕಾವೇರುತ್ತಿದ್ದಂತೆ ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದೆ. ಇದೀಗ ವಿರಾಟ್ ಕೊಹ್ಲಿಯನ್ನು ರಾಜನಂತೆ ಚಿತ್ರಿಸಿದ ಪೋಸ್ಟ್ ಹಾಕಿದ್ದಾರೆ. ಇಂಗ್ಲೆಂಡ್ ರಾಜನಂತಿರುವ ಫೋಟೋ ಹಾಕಲಾಗಿದೆ. ಈ ಪೋಸ್ಟ್‌ಗೆ ಟ್ವಿಟರಿಗರು ಐಸಿಸಿ ಕಾಲೆಳೆದಿದ್ದಾರೆ. 

 

 

ಐಸಿಸಿ ಕ್ರಿಕೆಟ್ ಸಂಸ್ಥೆ ಟೀಂ ಇಂಡಿಯಾ ಅಭಿಮಾನಿಯಂತೆ ವರ್ತಿಸುತ್ತಿದೆ ಎಂದು ಟ್ವಿಟರಿಗರು ಗರಂ ಆಗಿದ್ದಾರೆ. 10 ತಂಡಗಳು ಹೋರಾಟ ನಡೆಸುತ್ತಿದೆ. ಆದರೆ ನಾಯಕ ವಿರಾಟ್ ಕೊಹ್ಲಿ ಫೋಟೋ ಮಾತ್ರ ಹಾಕಿರುವುದು ಸರಿಯಲ್ಲ. ಇದರಿಂದ ಇತರ 9 ತಂಡಗಳು ಕಡೆಗಣಿಸಿದಂತೆ ಎಂದಿದ್ದಾರೆ. ಇಷ್ಟೇ ಅಲ್ಲ ಐಸಿಸಿ ಸಂಸ್ಥೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ್ದಾರೆ.