ಲಂಡನ್[ಜೂ.03]: ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಜತೆಗಿನ ಫೋನ್ ಸಂಭಾಷಣೆ ಬಳಿಕ 2007ರಲ್ಲಿ ನಿವೃತ್ತಿ ಪಡೆಯಬೇಕೆಂಬ ತನ್ನ ನಿರ್ಧಾರದಿಂದ ಹಿಂದೆ ಸರಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ತಿಳಿಸಿದ್ದಾರೆ.

2007ರ ಏಕದಿನ ವಿಶ್ವಕಪ್‌ನಲ್ಲಿ ತಂಡದ ಕಳಪೆ ಪ್ರದರ್ಶನ ಬಳಿಕ ನಿವೃತ್ತಿಯಾಗಲು ಯೋಚಿಸಿದ್ದೆ. ‘2007ರ ವಿಶ್ವಕಪ್'ನಲ್ಲಿ ಸೋತರೆ ಏನಾಯಿತು. 2011ರ ವಿಶ್ವಕಪ್‌ನ ಫೈನಲ್ ಮುಂಬೈನಲ್ಲಿ ನಡೆಯಲಿದೆ. ಮನಮೋಹಕ ವಿಶ್ವಕಪ್ ಅನ್ನು ನಿನ್ನ ಕೈಯಲ್ಲಿ ಹಿಡಿದಿರುವಂತೆ ಒಮ್ಮೆ ಊಹಿಸಿಕೊಂಡು ನೋಡು’ ಎಂದು ನನ್ನ ಸಹೋದರ ಅಜಿತ್ ಕಿವಿಮಾತು ಹೇಳಿದ್ದರು. 

ವಿಶ್ವಕಪ್ 2019: ಕೊಹ್ಲಿ-ತೆಂಡುಲ್ಕರ್ ನಡುವಿನ ಅಪರೂಪದ ಕೋ ಇನ್ಸಿಡೆನ್ಸ್‌ಳಿವು

‘ಇದಾದ ಬಳಿಕ ನಾನು ನನ್ನ ಫಾರ್ಮ್‌ಹೌಸ್‌ಗೆ ತೆರಳಿದ್ದೆ. ಈ ವೇಳೆ ರಿಚರ್ಡ್ಸ್ ಅವರಿಂದ ಕರೆ ಬಂತು. ಅವರು ನಿನ್ನಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಇದೆ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಅವರೊಂದಿಗೆ 45 ನಿಮಿಷಗಳ ಕಾಲ ಮಾತನಾಡಿದೆ. ಇದಾದ ಬಳಿಕ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದೆ’ ಎಂದು ಸಚಿನ್ ಹೇಳಿದ್ದಾರೆ. 

ಕೊಹ್ಲಿ ಏಕಾಂಗಿಯಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದ ತೆಂಡುಲ್ಕರ್

2011ರಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ವಿಶ್ವಕಪ್ ಅನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್’ಗೆ ಅರ್ಪಿಸಿತ್ತು. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...