ನವದೆಹಲಿ[ಮೇ.23]: ತಂಡದ ಎಲ್ಲಾ ಆಟಗಾರರ ಸಹಕಾರವಿಲ್ಲದೇ ಭಾರತದ ನಾಯಕ ವಿರಾಟ್ ಕೊಹ್ಲಿ ಏಕಾಂಗಿಯಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಸ್ಟರ್ ಬಾಸ್ಟರ್ ಸಚಿನ್ ತೆಂಡುಲ್ಕರ್ ಕಿವಿಮಾತು ಹೇಳಿದ್ದಾರೆ.

ಆಲ್ ದಿ ಬೆಸ್ಟ್ ಟೀಂ ಇಂಡಿಯಾ; ಇಂಗ್ಲೆಂಡ್ ತಲುಪಿದ ವಿರಾಟ್ ಪಡೆ

‘ತಂಡದ ಇತರೆ ಆಟಗಾರರ ಸಲಹೆ ಪಡೆಯದೇ ಏಕಾಂಗಿಯಾಗಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ನಿರ್ಣಾಯಕ ಹಂತಗಳಲ್ಲಿ ಇತರರ ಸಲಹೆ ಪಡೆಯಬೇಕು. ಇಲ್ಲವಾದರೆ, ನಿರಾಸೆ ಕಾದಿರಲಿದೆ’ ಎಂದಿದ್ದಾರೆ. ತಂಡದಲ್ಲಿ 4ನೇ ಕ್ರಮಾಂಕದ ಬ್ಯಾಟ್ಸ್ ಮನ್ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ ಎಂದು ಸಚಿನ್ ಅಭಿಪ್ರಾಯಿಸಿದ್ದಾರೆ.

ಇಲ್ಲಿದೆ ನೋಡಿ ವಿಶ್ವಕಪ್ ಟೂರ್ನಿಗೆ ರೆಡಿಯಾದ 10 ತಂಡಗಳ ಸಂಪೂರ್ಣ ಪಟ್ಟಿ

ಬುಧವಾರವಷ್ಟೇ ಇಂಗ್ಲೆಂಡ್’ಗೆ ಕಾಲಿಟ್ಟಿರುವ ವಿರಾಟ್ ಪಡೆ ಎರಡು ಅಭ್ಯಾಸ ಪಂದ್ಯಗಳ ಬಳಿಕ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.