ಸೌಥಾಂಪ್ಟನ್(ಜೂ.04): ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಲು ಸಜ್ಜಾಗಿರುವ ಟೀಂ ಇಂಡಿಯಾಗ ಇದೀಗ ಮಾಧ್ಯಮದ ಕೆಂಗಣ್ಣಿಗೆ ಗುರಿಯಾಗಿದೆ. ಸೌತ್ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲು ಆಯೋಜಿಸಿದ್ದ ಟೀಂ ಇಂಡಿಯಾ ಸುದ್ದಿಗೋಷ್ಠಿಗೆ ಪತ್ರಕರ್ತರು ಬಹಿಷ್ಕಾರ ಹಾಕಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಬೌಲಿಂಗ್ ಟ್ರೋಲ್ ಮಾಡಿದ ಬುಮ್ರಾ...!

ಪಂದ್ಯಕ್ಕೂ ಮೊದಲು ನಾಯಕ, ಕೋಚ್ ಅಥವಾ ಹಿರಿಯ ಆಟಗಾರರ ಜೊತೆ ಮಾಧ್ಯಮ ಪ್ರಶ್ನೋತ್ತರ ಏರ್ಪಡಿಸಲಾಗುತ್ತೆ. ಈ ಸಂಪ್ರದಾಯದಂತೆ ಟೀಂ ಇಂಡಿಯಾಗೂ ಸುದ್ಧಿಗೋಷ್ಠಿ ಆಯೋಜಿಸಲಾಗಿತ್ತು. ಆದರೆ ಈ ಸುದ್ದಿಗೋಷ್ಠಿಗೆ ಹಿರಿಯ ಕ್ರಿಕೆಟಿಗರಾಗಲಿ, ನಾಯಕ, ಕೋಚ್ ಆಗಲಿ ಅಥವಾ ತಂಡದ ಸದಸ್ಯನಾಗಲಿ ಪಾಲ್ಗೊಂಡಿಲ್ಲ. ಇದರ ಬದಲು ನೆಟ್ ಬೌಲರ್‌ಗಳನ್ನು ಸುದ್ಧಿಗೋಷ್ಠಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಧೋನಿ ರೀತಿ ಸ್ಟಂಪಿಂಗ್ ಮಾಡಿದ ಬಟ್ಲರ್!

ಖಲೀಲ್ ಅಹಮ್ಮದ್, ಅವೇಶ್ ಖಾನ್ ಹಾಗೂ ದೀಪಕ್ ಚಹಾರ್ ಸುದ್ದಿಗೋಷ್ಠಿಗೆ ಆಗಮಿಸಿದ್ದಾರೆ. ಹಿರಿಯ ಆಟಗಾರ, ನಾಯಕನ್ನು ನಿರೀಕ್ಷಿಸಿದ್ದ ಮಾಧ್ಯಮಕ್ಕೆ ತೀವ್ರ ನಿರಾಸೆಯಾಗಿದೆ. ಹೀಗಾಗಿ ಪತ್ರಕರ್ತರು ಟೀಂ ಇಂಡಿಯಾ ಸುದ್ದಿಗೋಷ್ಠಿ ಬಹಿಷ್ಕರಿಸಿದ್ದಾರೆ. 2015ರಲ್ಲಿ ನಾಯಕ ಧೋನಿ ಬಹುತೇಕ ಎಲ್ಲಾ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಬಾರಿ ನೆಟ್ ಬೌಲರ್‌ಗಳನ್ನು ಕಳುಹಿಸಿ ಬೇಜಾವಾಹ್ದಾರಿ ತೋರಿದ್ದಾರೆ ಎಂದು ಮಾಧ್ಯಮ ಆರೋಪಿಸಿದೆ.