ನಾಟಿಂಗ್‌ಹ್ಯಾಮ್(ಜೂ.03): ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ  ನಡುವಿನ ಲೀಗ್ ಪಂದ್ಯ ಭಾರಿ ಸದ್ದು ಮಾಡಿದೆ. ಭರ್ಜರಿ ಬ್ಯಾಟಿಂಗ್ ಮೂಲಕ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ಮಿಂಚಿದರೆ, ಇತ್ತ ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಅದ್ಬುತ ಸ್ಟಂಪಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಮೊದಲ 20 ಪಂದ್ಯಗಳು ಎಲ್ಲಿ..? ಯಾವಾಗ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

36 ರನ್ ಸಿಡಿಸಿ ಪಾಕ್ ತಂಡಕ್ಕೆ ಆಸರೆಯಾಗಿದ್ದ ಫಕಾರ್ ಜಮಾನ್, ಮೊಯಿನ್ ಆಲಿ ಆಫ್ ಬ್ರೇಕ್ ಎಸೆತವನ್ನು ಡ್ರೈವ್ ಮಾಡಲು ಹೋಗಿ ಸ್ಟಂಪ್ ಔಟ್ ಆದರು. ಕ್ಷಣಾರ್ಧದಲ್ಲಿ ಬಾಲ್ ಪಡೆದು ಕೀಪರ್ ಜೋಸ್ ಬಟ್ಲರ್ ಸ್ಟಂಪ್ ಮಾಡಿದರು. ಧೋನಿ ಶೈಲಿಯಲ್ಲೇ ಸ್ಟಂಪ್ ಮಾಡಿ ಬಟ್ಲರ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

 

 

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಭಾರತದ ಪಯಣ - ಭವಿಷ್ಯ ನುಡಿದ ಬ್ರೆಂಡನ್ ಮೆಕ್ಕಲಂ!

ಪಾಕ್ ಆರಂಭಿಕರಾದ ಫಕಾರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ಶತಕದ ಜೊತೆಯಾಟದತ್ತ ಮುನ್ನಗ್ಗುತ್ತಿದ್ದರು. ಇದೇ ವೇಳೆ ಬಟ್ಲರ್ ಸ್ಟಂಪಿಂಗ್ ಮೂಲಕ ಆರಂಭಿಕರನ್ನು ಬೇರ್ಪಡಿಸಿದರು. ಈ ಮೂಲಕ ಇಂಗ್ಲೆಂಡ್ ಮೊದಲ ವಿಕೆಟ್ ಸಂಭ್ರಮ ಆಚರಿಸಿತು.