ನಾಟಿಂಗ್‌ಹ್ಯಾಮ್(ಜೂ.04): ಗೆಲುವಿನೊಂದಿಗೆ ವಿಶ್ವಕಪ್ ಟೂರ್ನಿ ಆರಂಭಿಸಿದ ಇಂಗ್ಲೆಂಡ್‌ಗೆ ಪಾಕಿಸ್ತಾನ ವಿರುದ್ಧದ ಪಂದ್ಯ ತೀವ್ರ ಹಿನ್ನಡೆಯಾಗಿದೆ. ಪಾಕ್ ವಿರುದ್ದ ಸೊಪ್ಪಿಕೊಂಡಿರುವ ಇಂಗ್ಲೆಂಡ್ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಇಂಗ್ಲೆಂಡ್ ತಂಡದ ಜೇಸನ್ ರಾಯ್ ಹಾಗೂ ಜೋಫ್ರಾ ಆರ್ಚರ್‌ಗೆ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ವಿಶ್ವಕಪ್ 2019: ಜಸ್ಪ್ರೀತ್ ಬುಮ್ರಾಗೆ ಡೋಪ್ ಟೆಸ್ಟ್!

ಅನುಚಿತ ವರ್ತನೆ ತೋರಿದ ಕಾರಣ ಜೋಫ್ರಾ ಆರ್ಚರ್ ಹಾಗೂ ಜೇಸನ್ ರಾಯ್‌ಗೆ ಪಂದ್ಯದ ಶೇಕಡಾ 15 ರಷ್ಟು ದಂಡ ಪಾವತಿಸಲು ಸೂಚಿಸಲಾಗಿದೆ. ಪಾಕಿಸ್ತಾನ ಬ್ಯಾಟಿಂಗ್ ವೇಳೆ 14ನೇ ಓವರ್‌ನಲ್ಲಿ ಜೇಸನ್ ರಾಯ್ ಪ್ರತಿಕ್ರಿಯೆಗೆ ಅಂಪೈರ್ ದಂಡ ವಿಧಿಸಿದ್ದಾರೆ. ಇತ್ತ ಆರ್ಚರ್ 27ನೇ ಓವರ್‌ನಲ್ಲಿ ಅನುಚಿತ ವರ್ತನೆ ತೋರಿದ ಕಾರಣ ದಂಡ ಹಾಕಲಾಗಿದೆ.

ಇದನ್ನೂ ಓದಿ: ವಾಸೀಂ ಅಕ್ರಂಗೆ ಫರ್ಫೆಕ್ಟ್ Birthday ಗಿಫ್ಟ್ ಕೊಟ್ಟ ಪಾಕಿಸ್ತಾನ

ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕೆ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್‌ಗೂ ದಂಡ ವಿಧಿಸಲಾಗಿದೆ. ಪಂದ್ಯದ ಶೇಕಡಾ 20 ರಷ್ಟು ದಂಡ ವಿದಿಸಲಾಗಿದೆ. ಇನ್ನು ಪಾಕ್ ತಂಡದ ಎಲ್ಲಾ ಸದಸ್ಯರಿಗೆ ಶೇಕಡಾ 10 ರಷ್ಟು ದಂಡ ಹಾಕಲಾಗಿದೆ.