ಸೌಥಾಂಪ್ಟನ್(ಜೂ.04): ಸೌತ್ಆಫ್ರಿಕಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಭ್ಯಾಸ ನಡೆಸುತ್ತಿದೆ. ಇದರ ಬೆನ್ನಲ್ಲೇ ಐಸಿಸಿ  ಡೋಪ್ ಕಂಟ್ರೋಲ್ ಅಧಿಕಾರಿಗಳು ಸದ್ದಿಲ್ಲದೆ ಡೋಪಿಂಗ್ ಟೆಸ್ಟ್ ನಡೆಸುತ್ತಿದ್ದಾರೆ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾನನ್ನು ಅಧಿಕಾರಿಗಳು ಡೋಪ್ ಟೆಸ್ಟ್‌ಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಸುದ್ಧಿಗೋಷ್ಠಿಗೆ ಬಹಿಷ್ಕಾರ

ಟೀಂ ಇಂಡಿಯಾದ ನೆಟ್ ಪ್ರಾಕ್ಟೀಸ್ ವೇಳೆ ಅಧಿಕಾರಿಗಳು ಬುಮ್ರಾಗೆ ಡೋಪ್ ಟೆಸ್ಟ್ ಮಾಡಿದ್ದಾರೆ. 2 ವಿಭಾಗದಲ್ಲಿ ಡೋಪ್ ಟೆಸ್ಟ್ ನಡೆಸಲಾಗಿದೆ. ರಕ್ತ ಪರೀಕ್ಷೆ ಹಾಗೂ ಮೂತ್ರ ಪರೀಕ್ಷೆ ಮೂಲಕ ಡೋಪ್ ಟೆಸ್ಟ್ ನಡೆಸಲಾಗಿದೆ. ಐಸಿಸಿ ನಿಯಮದ ಪ್ರಕಾರ ಎಲ್ಲಾ ಕ್ರಿಕೆಟಿಗರನ್ನು ಡೋಪ್ ಟೆಸ್ಟ್‌ಗೆ ಒಳಪಡಬೇಕು. ಸದ್ಯ ಐಸಿಸಿ ಸದ್ದಿಲ್ಲದೆ ಕೆಲ ಆಟಗಾರರನ್ನು ಡೋಪ್ ಟೆಸ್ಟ್‌ಗೆ ಒಳಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಬೌಲಿಂಗ್ ಟ್ರೋಲ್ ಮಾಡಿದ ಬುಮ್ರಾ...!

ಜೂನ್ 5 ರಂದು ಭಾರತ- ಸೌತ್ಆಫ್ರಿಕಾ ಹೋರಾಟ ನಡೆಸಲಿದೆ. ಈ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಜರ್ನಿ ಆರಂಭವಾಗಲಿದೆ. ಜೂನ್ 9 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಆಡಲಿದೆ. ಇನ್ನ ಜೂನ್ 16 ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ.