ದುಬೈ(ಜೂ.08): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಎಂ.ಎಸ್.ಧೋನಿ ಕೀಪಿಂಗ್ ಗ್ಲೌಸ್ ಭಾರಿ ವಿವಾದ ಸೃಷ್ಟಿಸಿದೆ. ಧೋನಿ ಭಾರತೀಯ ಸೇನೆಯ ಬಲಿದಾನ ಚಿಹ್ನೆ ಇರೋ ಗ್ಲೌಸ್ ಬಳಸಿದ್ದಾರೆ. ಧೋನಿ ಗ್ಲೌಸ್ ಬದಲಿಸಲು ಐಸಿಸಿ ಸೂಚನೆ ನೀಡಿದ ಬೆನ್ನಲ್ಲೇ ಬಿಸಿಸಿಐ ಅಖಾಡಕ್ಕೆ ಇಳಿದಿತ್ತು. ಇದೀಗ ಬಿಸಿಸಿಐ ಮನವಿಯನ್ನು ತಿರಸ್ಕರಿಸಿರುವ ಐಸಿಸಿ, ಗ್ಲೌಸ್ ಮೇಲಿನ ಚಿಹ್ನೆ ತೆಗೆಯಲು ಸೂಚಿಸಿದೆ.

ಇದನ್ನೂ ಓದಿ: ಧೋನಿ ಗ್ಲೌಸಲ್ಲಿ IA ಚಿಹ್ನೆಗೆ ICC ವಿರೋಧ: ಪಾಕ್‌ಗಿಲ್ಲದ ನಿಯಮ ನಮಗ್ಯಾಕೆ?

ಗ್ಲೌಸ್ ವಿವಾದ ತಾರಕಕ್ಕೇರುತ್ತಿದ್ದಂತೆ ಬಿಸಿಸಿಐ ಧೋನಿ ಬೆಂಬಲಕ್ಕೆ ನಿಂತಿತ್ತು. ಐಸಿಸಿಗೆ ಪತ್ರ ಬರೆದು ಮನವಿ ಮಾಡಿದ ಬಿಸಿಸಿಐ ಧೋನಿಗೆ ಅನುಮತಿ ನೀಡಲು ಕೋರಿತ್ತು. ಆದರೆ ಬಿಸಿಸಿಐ ಉತ್ತರದಿಂದ ತೃಪ್ತಿಗೊಳ್ಳದ ಐಸಿಸಿ, ನಿಯಮ ಉಲಲ್ಲಂಘಿಸಲು ಸಾಧ್ಯವಿಲ್ಲ. ವೈಯುಕ್ತಿಕ ಸಂದೇಶ, ಹಿತಾಸಕ್ತಿಗಳಿಗೆ ಅವಕಾಶವಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಗ್ಲೌಸ್ ವಿವಾದ- ಎಂ.ಎಸ್.ಧೋನಿ ಬೆಂಬಲಕ್ಕೆ ನಿಂತ BCCIನಿಂದ ICCಗೆ ಪತ್ರ!

ಧೋನಿ ಗ್ಲೌಸ್ ಬದಲಿಸುವ ಅವಶ್ಯಕತೆ ಇಲ್ಲ. ಆದರೆ ಚಿಹ್ನೆಗೆ ಟೇಪ್ ಅಂಟಿಸಿ ಬಳಸಬಹುದು ಎಂದಿದೆ. ಐಸಿಸಿ ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟಗಾರ, ಕೋಚ್ ತಮ್ಮ ಉಡುಪು, ಬ್ಯಾಟ್, ವಿಕೆಟ್ ಅಥವಾ ಯಾವುದೇ ಕ್ರಿಕೆಟ್ ಸಂಬಂಧಿತ ವಸ್ತುಗಳ ಮೇಲೆ ವೈಯುಕ್ತಿ ಸಂದೇಶ, ರಾಜಕೀಯ, ಧಾರ್ಮಿಕ, ಜನಾಂಗೀಯ ಸಂಬಂಧಿಸಿದ ಸಂದೇಶಗಳನ್ನು, ಲೋಗೋ ಅಥವಾ ಚಿತ್ರಗಳನ್ನು ಹಾಕುವಂತಿಲ್ಲ.