ಲಂಡನ್(ಜೂ.07): ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಎಂ.ಎಸ್.ಧೋನಿ ಬಳಸಿದ ಕೀಪಿಂಗ್ ಗ್ಲೌಸ್ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸೇನೆಯ ಬಲಿದಾನದ ಚಿಹ್ನೆ ಬಳಸಿರುವ ಗ್ಲೌಸ್ ಬದಲಿಸುವಂತೆ ಐಸಿಸಿ ಸೂಚಿಸಿದ ಬೆನ್ನಲ್ಲೇ, ಎಲ್ಲರೂ ಧೋನಿ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಬಿಸಿಸಿಐ ಕೂಡ ಧೋನಿಗೆ ಸಪೂರ್ಟ್ ನೀಡಿದ್ದು, ಗ್ಲೌಸ್ ಬದಲಿಸ ಬೇಕಿಲ್ಲ ಎಂದಿದೆ.

ಇದನ್ನೂ ಓದಿ: ಧೋನಿ ಗ್ಲೌಸ್‌ನಲ್ಲಿ ಸೇನೆ ಲಾಂಛನ-ಟ್ವಿಟರಿಗರಿಂದ ಸಲ್ಯೂಟ್!

ಬಿಸಿಸಿಐ ಹಾಗೂ ಎಂ.ಎಸ್.ಧೋನಿ ಗ್ಲೌಸ್ ಕುರಿತು ಐಸಿಸಿಗೆ ವಿವರಣೆ ನೀಡಿದ್ದಾರೆ. ಧೋನಿ ಧರಿಸಿದ ಗ್ಲೌಸ್, ಧಾರ್ಮಿಕ, ರಾಜಕೀಯ ಅಥವಾ ಯಾವುದೇ ಜನಾಂಗಿಯ ನಿಂದನೆಗೆ ಒಳಪಡುತ್ತಿಲ್ಲ. ಇದು ಬಲಿದಾನದ ಚಿಹ್ನೆ ಎಂದು ಐಸಿಸಿಗೆ ವಿವರಣೆ ನೀಡಿದೆ. ಇದೀಗ ಈ ಪ್ರಕರಣ ಸುಖಾಂತ್ಯ ಕಾಣುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಧೋನಿ ಗ್ಲೌಸಲ್ಲಿ IA ಚಿಹ್ನೆಗೆ ICC ವಿರೋಧ: ಪಾಕ್‌ಗಿಲ್ಲದ ನಿಯಮ ನಮಗ್ಯಾಕೆ?

ಬಿಸಿಸಿಐ ಈಗಾಗಲೇ ಧೋನಿ ಗ್ಲೌಸ್ ಬಳಕೆ ಮಾಡಲು ಐಸಿಸಿಗೆ ಪತ್ರ ಬರೆದಿದೆ. ಧೋನಿ ಬಳಸಿರುವ ಗ್ಲೌಸ್ ಮೇಲಿನ ಸೇನೆ ಚಿಹ್ನೆ ಯಾರನ್ನೂ ಪ್ರಚೋದಿಸುವಂತಿಲ್ಲ. ಇದರಲ್ಲಿ ವಾಣಿಜ್ಯ ಉದ್ದೇಶವೂ ಇಲ್ಲ. ಹೀಗಾಗಿ ಐಸಿಸಿ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು ಎಂದು ಬಿಸಿಸಿಐ COA ವಿನೋದ್ ರೈ ಹೇಳಿದ್ದಾರೆ.