ಲಂಡನ್‌(ಜೂ.08): ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ಯಾಟಿಂಗ್‌ ಕೋಚ್‌ ಮೈಕಲ್‌ ಹಸ್ಸಿ, ನಾಯಕ ಎಂ.ಎಸ್‌.ಧೋನಿಯ ಯಶಸ್ಸಿನ ಮಂತ್ರವನ್ನು ಆಸ್ಪ್ರೇಲಿಯಾ ತಂಡದೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ. ಭಾನುವಾರ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು ವಿಶ್ವಕಪ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಆಸ್ಪ್ರೇಲಿಯಾದ ಕೋಚ್‌ಗಳೊಂದಿಗೆ ಚರ್ಚೆ ನಡೆಸಿಲ್ಲ ಎಂದು ಮಾಜಿ ಕ್ರಿಕೆಟಿಗ ಹಸ್ಸಿ ಹೇಳಿದ್ದಾರೆ. 

ಇದನ್ನೂ ಓದಿ: ವಿಶ್ವಕಪ್ 2019: ಸಂಕಷ್ಟದಲ್ಲಿ ಆಫ್ಘಾನಿಸ್ತಾನ- ಸ್ಟಾರ್ ಕ್ರಿಕೆಟಿಗ ಔಟ್!

‘ಧೋನಿ ಆಟ ಹಾಗೂ ನಾಯಕತ್ವದಲ್ಲಿ ಹೇಳಿಕೊಳ್ಳುವ ದೌರ್ಬಲ್ಯಗಳೇನೂ ಇಲ್ಲ. ಒಂದು ವೇಳೆ ಇದ್ದಿದ್ದರೂ ಅದನ್ನು ಆಸ್ಪ್ರೇಲಿಯಾ ತಂಡಕ್ಕೆ ನಾನು ಹೇಳುತ್ತಿರಲಿಲ್ಲ. ಧೋನಿಯ ಯಶಸ್ಸಿನ ರಹಸ್ಯವನ್ನೂ ನಾನು ಬಹಿರಂಗಗೊಳಿಸುವುದಿಲ್ಲ’ ಎಂದು ಹಸ್ಸಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟ!

ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಜೂನ್ 9 ರಂದು ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.