ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಅಫ್ಘಾನಿಸ್ತಾನಕ್ಕೆ ಗೆಲುವು ಸಿಗದಿದ್ದರೂ, ಅದ್ಬುತ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ 3ನೇ ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗಿದ್ದ ಅಫ್ಘಾನ್ ತಂಡಕ್ಕೆ ಸಂಕಷ್ಟ ಎದುರಾಗಿದೆ. 

ಟೌನ್‌ಟನ್(ಜೂ.07): ವಿಶ್ವಕಪ್ ಟೂರ್ನಿ ಆರಂಭಿಕ 2 ಪಂದ್ಯದಲ್ಲಿ ಮುಗ್ಗರಿಸಿರುವ ಆಫ್ಘಾನಿಸ್ತಾನ ಇದೀಗ 3ನೇ ಪಂದ್ಯಕ್ಕೆ ಸಜ್ಜಾಗಿದೆ. ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೂ ಮುನ್ನ ಅಫ್ಘಾನಿಸ್ತಾನ ತಂಡಕ್ಕೆ ಆಘಾತ ಎದುರಾಗಿದೆ. ಕಿವೀಸ್ ಮಣಿಸಲು ಸಜ್ಜಾಗಿದ್ದ ಅಫ್ಘಾನಿಸ್ತಾನ ತಂಡಕ್ಕೆ ಇದೀಗ ಇಂಜುರಿ ಸಮಸ್ಯೆ ಕಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಗೆಳತಿ ಜೊತೆ ತೆರಳಿದ ಮುಂಬೈ ಕ್ರಿಕೆಟಿಗನ ಕೊಲೆ!

ಅಫ್ಘಾನ್ ತಂಡದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶೆಹಝಾದ್ ಮೊಣಕಾಲು ನೋವಿನಿಂದ ಟೂರ್ನಿಯಿಂದ ಹೊರಬಿದಿದ್ದಾರೆ. ಶೆಹಝಾದ್‌ಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ವಿಶ್ವಕಪ್ ಟೂರ್ನಿಯಿಂದಲೇ ಶೆಹಝಾದ್ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟ!

ಶೆಹಝಾದ್ ಬದಲು ಅಫ್ಘಾನಿಸ್ತಾನ ಅಂಡರ್ 19 ತಂಡದ ಯುವ ಕ್ರಿಕೆಟಿಗ ಇಕ್ರಂ ಅಲಿ ಖಿಲ್‌ಗೆ ಬುಲಾವ್ ನೀಡಲಾಗಿದೆ. ಆದರೆ ಶೆಹಝಾದ್ ತಂಡದಿಂದ ಹೊರಬಿದ್ದಿರುವುದು ಅಫ್ಘಾನ್ ತಂಡದ ಆತಂಕ ಹೆಚ್ಚಿಸಿದೆ.