ಮುಂಬೈ(ಜೂ.07): ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಬಿಸಿಸಿಐ ಅಳೆದು ತೂಗಿ ತಂಡದ ವೇಳಾಪಟ್ಟಿ ಸಿದ್ಧಪಡಿಸುತ್ತಿದೆ. ಈಗಾಗಲೇ ಭಾರತದ ತವರಿನ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸರಣಿ ವೇಳಾಪಟ್ಟಿ ಪ್ರಕಟಿಸಿದೆ. 

ಇದನ್ನೂ ಓದಿ: 2019-20: ಟೀಂ ಇಂಡಿಯಾ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ!

2020ರ ಆರಂಭದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. 5 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಸರಣಿ ಪಂದ್ಯಕ್ಕಾಗಿ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದೇ ಮೊದಲ ಬಾರಿಗೆ 5 ಟಿ20 ಪಂದ್ಯದ ಸರಣಿ ಆಯೋಜಿಸಲಾಗಿದೆ.

ಭಾರತ-ನ್ಯೂಜಿಲೆಂಡ್ ಸರಣಿ -2020

ಜನವರಿ 24: 1ನೇ T20 - ಆಕ್ಲೆಂಡ್
ಜನವರಿ 26: 2ನೇ T20 - ಆಕ್ಲೆಂಡ್
ಜನವರಿ 29: 3ನೇ T20 - ಹ್ಯಾಮಿಲ್ಟನ್
ಜನವರಿ 31: 4ನೇ T20 - ವೆಲ್ಲಿಂಗ್ಟನ್
ಜನವರಿ 2: 5ನೇ T20 - ತೌರಂಗ

ಫೆಬ್ರವರಿ 5: 1ನೇ ಏಕದಿನ - ಹ್ಯಾಮಿಲ್ಟನ್
ಫೆಬ್ರವರಿ 8: 2ನೇ ಏಕದಿನ - ಆಕ್ಲೆಂಡ್
ಫೆಬ್ರವರಿ 11: 3ನೇ ಏಕದಿನ - ತೌರಂಗ

ಫೆಬ್ರವರಿ 21-25: 1ನೇ ಟೆಸ್ಟ್ - ವೆಲ್ಲಿಂಗ್ಟನ್
ಫೆಬ್ರವರಿ 29-ಮಾರ್ಚ್ 4: 2ನೇ ಟೆಸ್ಟ್ - ಕ್ರೈಸ್ಟ್ ಚರ್ಚ್