ಟೆನಿಸ್ ದಿಗ್ಗಜ ರೋಜರ್ ಫೆಡರರ್ ತಮ್ಮ ವೃತ್ತಿ ಜೀವನದ 101 ನೇ ಪ್ರಶಸ್ತಿ ಜಯಿಸಿದ್ದಾರೆ. ಮಿಯಾಮಿ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ಜಾನ್ ಇಸ್ನೇರ್ ವಿರುದ್ಧ ಫೆಡರರ್ ಭರ್ಜರಿ ಜಯ ಸಾಧಿಸಿದ್ದಾರೆ.
10 ಮೀ. ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾರತೀಯರು ಚಿನ್ನದ ಪದಕ ಕ್ಲೀನ್ ಸ್ವೀಪ್ ಮಾಡಿದರು. ಪುರುಷರ ವಿಭಾಗದಲ್ಲಿ ದಿವ್ಯಾಂಶ್ ಸಿಂಗ್ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ಎಲಾವೆನಿಲ್ ವಲರಿವನ್ ಸ್ವರ್ಣಕ್ಕೆ ಮುತ್ತಿಟ್ಟರು.
ಬರೋಬ್ಬರಿ 17 ತಿಂಗಳುಗಳ ಬಳಿಕ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಪಟು ಕಿದಂಬಿ ಶ್ರೀಕಾಂತ್’ಗೆ ನಿರಾಸೆ ಎದುರಾಗಿದೆ, ಮಾಜಿ ನಂ.1 ಪಟು ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತರಾದರು.
ಅತಿ ಹೆಚ್ಚು ಬಹುಮಾನ ಮೊತ್ತ ಗಳಿಸಿದ ಆಟಗಾರ್ತಿಯರ ಪೈಕಿ ಸೈನಾ 2ನೇ ಸ್ಥಾನ ಪಡೆದಿದ್ದಾರೆ. ಈ ವರ್ಷ ಇಂಡೋನೇಷ್ಯಾ ಮಾಸ್ಟರ್ಸ್ ಟೂರ್ನಿ ಗೆದ್ದ ಸೈನಾ, ಮಲೇಷ್ಯಾ ಮಾಸ್ಟರ್ಸ್’ನಲ್ಲಿ ಸೆಮಿಫೈನಲ್, ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್ ಟೂರ್ನಿಯ ಫೈನಲ್ಗೆ ಫೆಡರರ್ ಪ್ರವೇಶ ಪಡೆದಿದ್ದಾರೆ. ಸ್ವಿಸ್ ದೊರೆ ಫೆಡರರ್ ಪಾಲಿಗಿದು 50ನೇ ಎಟಿಪಿ ಮಾಸ್ಟರ್ಸ್ ಫೈನಲ್ ಆಗಿದೆ.
ಇಂಡಿಯಾ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಚೀನಾದ ಹುವಾಂಗ್ ಯುಕ್ಸಿಯಾಂಗ್ ವಿರುದ್ಧ 14-21, 21-16, 21-19 ಗೇಮ್ಗಳಲ್ಲಿ ರೋಚಕ ಗೆಲುವು ಸಾಧಿಸಿ, ಶ್ರೀಕಾಂತ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.
ಅಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗಿದೆ. ಪೆನಾಲ್ಟಿ ಶೂಟೌಟ್’ನಲ್ಲಿ ಕೊರಿಯಾ ಎದುರು ಭಾರತ ಶರಣಾಗಿದೆ.
29 ವರ್ಷದ ಕ್ವಿಟೋವಾ 2011 ಹಾಗೂ 2014ರಲ್ಲಿ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಗಾಯದ ಬಳಿಕ ಮತ್ತೆ ಟೆನಿಸ್’ಗೆ ಕಮ್’ಬ್ಯಾಕ್ ಮಾಡಿದ್ದ ಕ್ವಿಟೋವಾ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಕಳೆದ 3 ತಿಂಗಳುಗಳಿಂದ ಖಾಲಿ ಇದ್ದ ಹುದ್ದೆಗೆ ಆಸ್ಪ್ರೇಲಿಯಾದ ಮಾಜಿ ಆಟಗಾರನ ಹೆಸರನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಹಾಗೂ ಹಾಕಿ ಇಂಡಿಯಾ ಅಂತಿಮಗೊಳಿಸಿದೆ. ರೀಡ್ ಹೆಸರನ್ನು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದು, ಈ ವಾರದ ಕೊನೆಯಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್’ಗಳಿಂದ ಮಣಿಸುವುದರ ಜತೆಗೆ ಸತತ ಎರಡು ಜಯದೊಂದಿಗೆ ಧೋನಿ ಪಡೆ ಅಗ್ರಸ್ಥಾನಕ್ಕೇರಿದೆ.