10 ಮೀ. ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾರತೀಯರು ಚಿನ್ನದ ಪದಕ ಕ್ಲೀನ್ ಸ್ವೀಪ್ ಮಾಡಿದರು. ಪುರುಷರ ವಿಭಾಗದಲ್ಲಿ ದಿವ್ಯಾಂಶ್ ಸಿಂಗ್ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ಎಲಾವೆನಿಲ್ ವಲರಿವನ್ ಸ್ವರ್ಣಕ್ಕೆ ಮುತ್ತಿಟ್ಟರು.
ನವದೆಹಲಿ(ಏ.01): ತೈಪೆಯಲ್ಲಿ ನಡೆಯುತ್ತಿರುವ ಏಷ್ಯನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಶೂಟರ್‌ಗಳ ಪ್ರಾಬಲ್ಯ ಮುಂದುವರಿದಿದೆ.
ಭಾನುವಾರ ನಡೆದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾರತೀಯರು ಚಿನ್ನದ ಪದಕ ಕ್ಲೀನ್ ಸ್ವೀಪ್ ಮಾಡಿದರು. ಪುರುಷರ ವಿಭಾಗದಲ್ಲಿ ದಿವ್ಯಾಂಶ್ ಸಿಂಗ್ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ಎಲಾವೆನಿಲ್ ವಲರಿವನ್ ಸ್ವರ್ಣಕ್ಕೆ ಮುತ್ತಿಟ್ಟರು.
ಪುರುಷ ಹಾಗೂ ಮಹಿಳಾ ತಂಡ ವಿಭಾಗದಲ್ಲೂ ಭಾರತ ಚಿನ್ನ ಜಯಿಸಿತು. 12 ಚಿನ್ನ, 4 ಬೆಳ್ಳಿ, 2 ಕಂಚಿನೊಂದಿಗೆ ಒಟ್ಟು 18 ಪದಕ ಗೆದ್ದಿರುವ ಭಾರತ, ಕೂಟದ ಅಂತಿಮ ದಿನವಾದ ಸೋಮವಾರ ಮತ್ತಷ್ಟು ಪದಕಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ.
