Asianet Suvarna News Asianet Suvarna News

ಪ್ರೊ ಕಬಡ್ಡಿ: 'ಸೇಲ್' ಆಗದ ಕಾಶಿಲಿಂಗ್ ಅಡಿಕೆ

ಮೊದಲ ದಿನ ಹರಾಜಾಗದೆ ಉಳಿದಿದ್ದ ‘ಬಿ’ ದರ್ಜೆ ಆಟಗಾರರನ್ನೂ ಇದರಲ್ಲಿ ಸೇರಿಸಲಾಗಿತ್ತು. ಪ್ರತಿ ತಂಡಕ್ಕೆ 5 ಆಟಗಾರರ ಹೆಸರನ್ನು ಸೂಚಿಸುವ ಅವಕಾಶವಿತ್ತು. ಇದರಲ್ಲಿ ಬಹಳ ಅಚ್ಚರಿಗೆ ಕಾರಣವಾಗಿದ್ದು, ತಾರಾ ರೈಡರ್ ಕಾಶಿಲಿಂಗ್ ಅಡಕೆ ಹೆಸರನ್ನು ಯಾವ ತಂಡವೂ ಸೂಚಿಸದೆ ಇದ್ದಿದ್ದು. 

Kashiling Adake remain unsold in Pro Kabaddi Auction 2019
Author
Mumbai, First Published Apr 10, 2019, 5:08 PM IST

ಬೆಂಗಳೂರು ಬುಲ್ಸ್ ತಂಡ ಪ್ರತಿನಿಧಿಸಿದ್ದ ಸ್ಟಾರ್ ಆಲ್ರೌಂಡರ್ ಕಾಶಿಲಿಂಗ್ ಅಡಿಕೆಯನ್ನು ಖರೀದಿಸದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಆರನೇ ಆವೃತ್ತಿಯ ಬೆಂಗಳೂರು ಬುಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ತನ್ನದೇ ಆದ ಕಾಣಿಕೆ ನೀಡಿದ್ದ ಅಡಿಕೆ ಮುಂಬರುವ ಪ್ರೊ ಕಬಡ್ಡಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಪ್ರೊ ಕಬಡ್ಡಿ ಹರಾಜಿನಲ್ಲಿ ಕನ್ನಡಿಗರಿಗೆ ಶಾಕ್..!

2ನೇ ದಿನವಾದ ಮಂಗಳವಾರ ಮೊದಲು ‘ಸಿ’ ಹಾಗೂ ‘ಡಿ’ ದರ್ಜೆ ಆಟಗಾರರನ್ನು ಹರಾಜು ಹಾಕಲಾಯಿತು. ಬಳಿಕ ಹರಾಜಾಗದೆ ಉಳಿದ ಆಟಗಾರರ ಪೈಕಿ ಫ್ರಾಂಚೈಸಿಗಳು ಖರೀದಿಸಲು ಇಚ್ಛಿಸುವ ಆಟಗಾರರನ್ನು ಮರು ಹರಾಜು ನಡೆಸಲಾಯಿತು. ಮೊದಲ ದಿನ ಹರಾಜಾಗದೆ ಉಳಿದಿದ್ದ ‘ಬಿ’ ದರ್ಜೆ ಆಟಗಾರರನ್ನೂ ಇದರಲ್ಲಿ ಸೇರಿಸಲಾಗಿತ್ತು. ಪ್ರತಿ ತಂಡಕ್ಕೆ 5 ಆಟಗಾರರ ಹೆಸರನ್ನು ಸೂಚಿಸುವ ಅವಕಾಶವಿತ್ತು.

ಇದರಲ್ಲಿ ಬಹಳ ಅಚ್ಚರಿಗೆ ಕಾರಣವಾಗಿದ್ದು, ತಾರಾ ರೈಡರ್ ಕಾಶಿಲಿಂಗ್ ಅಡಕೆ ಹೆಸರನ್ನು ಯಾವ ತಂಡವೂ ಸೂಚಿಸದೆ ಇದ್ದಿದ್ದು. ಕಳೆದ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ಕಾಶಿಲಿಂಗ್ ಪ್ರೊ ಕಬಡ್ಡಿಯಿಂದ ಹೊರಬಿದ್ದಿದ್ದಾರೆ. ಇವರ ಜತೆ ಮಹೇಂದ್ರ ರಜಪೂತ್, ನಿತಿನ್ ಮದನೆ ಸೇರಿ ಇನ್ನೂ ಕೆಲ ತಾರಾ ಆಟಗಾರರು ಬಿಕರಿಯಾಗದೆ ಉಳಿದರು. 

ತಮ್ಮನಿಗೆ ₹1.45 ಕೋಟಿ, ಅಣ್ಣನಿಗೆ ₹10 ಲಕ್ಷ!

ಮೊದಲ ದಿನ ಬರೋಬ್ಬರಿ ₹1.45 ಕೋಟಿಗೆ ತೆಲುಗು ಟೈಟಾನ್ಸ್ ಪಾಲಾಗಿ, ಪ್ರೊ ಕಬಡ್ಡಿ ಇತಿಹಾಸದ 2ನೇ ದುಬಾರಿ ಆಟಗಾರ ಎನ್ನುವ ದಾಖಲೆ ಬರೆದಿದ್ದ ಸಿದ್ಧಾರ್ಥ್ ದೇಸಾಯಿಯ ಹಿರಿಯ ಸಹೋದರ ಸೂರಜ್ ದೇಸಾಯಿ 2ನೇ ದಿನ ಕೇವಲ ₹10 ಲಕ್ಷಕ್ಕೆ ಬಿಕರಿಯಾದರು. ಮೊದಲ ದಿನ ಬಿಕರಿಯಾಗದೆ ಉಳಿದಿದ್ದ ಅವರನ್ನು ತೆಲುಗು ಟೈಟಾನ್ಸ್ ಮೂಲಬೆಲೆಗೆ ಖರೀದಿಸಿತು. 7ನೇ ಆವೃತ್ತಿಯಲ್ಲಿ ಸಹೋರರಿಬ್ಬರೂ ಒಂದೇ ತಂಡದಲ್ಲಿ ಆಡಲಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios