ಕೌಲಾಲಂಪುರ: ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶ್ರೀಕಾಂತ್ ಸೋಲಿನೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ. 

ಮಲೇಷ್ಯಾ ಓಪನ್‌: ಕ್ವಾರ್ಟರ್‌ ಫೈನಲ್‌’ಗೆ ಲಗ್ಗೆಯಿಟ್ಟ ಶ್ರೀಕಾಂತ್‌

ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌, ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ಸ್‌ ಚಾಂಪಿಯನ್‌ ಚೀನಾದ ಚೆನ್‌ ಲಾಂಗ್‌ ವಿರುದ್ಧ 18-21, 19-21 ಗೇಮ್‌ಗಳಲ್ಲಿ ಪರಾಭವಗೊಂಡು ಹೊರಬಿದ್ದರು. ಈ ಋುತುವಿನಲ್ಲಿ ಮೊದಲ ಪ್ರಶಸ್ತಿ ಜಯಿಸುವ ಶ್ರೀಕಾಂತ್‌ ಕನಸಿಗೆ ಮತ್ತೆ ಪೆಟ್ಟು ಬಿದ್ದಂತಾಗಿದೆ. 

ಶುಕ್ರವಾರ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಶ್ರೀಕಾಂತ್‌ 16-11ರ ಮುನ್ನಡೆ ಹೊಂದಿದ್ದರು, 2ನೇ ಗೇಮ್‌ನಲ್ಲಿ 7-11ರಿಂದ ಹಿಂದಿದ್ದರೂ ಪುಟಿದೆದ್ದು 19-19ರಲ್ಲಿ ಸಮಬಲ ಸಾಧಿಸಿದರು. ಆದರೂ ಪಂದ್ಯ ಜಯಿಸಲು ಸಾಧ್ಯವಾಗಲಿಲ್ಲ.