World Brain Tumour Day 2022: ಮಾರಣಾಂತಿಕ ಮೆದುಳಿನ ಗೆಡ್ಡೆಯ ಸಮಸ್ಯೆಗೆ ಕಾರಣವೇನು ?
ಇವತ್ತು ವರ್ಲ್ಡ್ ಬ್ರೈನ್ ಟ್ಯೂಮರ್ ಡೇ (World Brain Tumour Day). ವಿಶ್ವಾದ್ಯಂತ ಲಕ್ಷಾಂತರ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಮೆದುಳಿನ ಗೆಡ್ಡೆ ಸಮಸ್ಯೆಗೆ ಕಾರಣವಾಗೋದೇನು, ಇದರ ರೋಗ ಲಕ್ಷಣಗಳೇನು (Symptoms) ಎಂಬುದನ್ನು ತಿಳಿದುಕೊಳ್ಳೋಣ. ಮಾತ್ರವಲ್ಲ, ವರ್ಲ್ಡ್ ಬ್ರೈನ್ ಟ್ಯೂಮರ್ ಡೇ ಇತಿಹಾಸ (History), ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
ಬ್ರೈನ್ ಟ್ಯೂಮರ್ (Brain tumor) ಬಗ್ಗೆ ಜಾಗೃತಿ (Awareness) ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 8ರಂದು ವಿಶ್ವ ಮೆದುಳಿನ ಗೆಡ್ಡೆ ದಿನವನ್ನು ಆಚರಿಸಲಾಗುತ್ತದೆ. ಬ್ರೈನ್ ಟ್ಯೂಮರ್, ಮೆದುಳಿನಲ್ಲಿನ ಅಸಹಜ ಜೀವಕೋಶಗಳ ಸಮೂಹ ಅಥವಾ ಬೆಳವಣಿಗೆಯಾಗಿದೆ. ನ್ಯಾಶನಲ್ ಹೆಲ್ತ್ ಪೋರ್ಟಲ್ ಪ್ರಕಾರ, ಪ್ರಪಂಚದಾದ್ಯಂತ ಪ್ರತಿದಿನ 500ಕ್ಕೂ ಹೆಚ್ಚು ಹೊಸ ಪ್ರಕರಣಗಳು ಮೆದುಳಿನ ಗೆಡ್ಡೆಯೊಂದಿಗೆ ರೋಗನಿರ್ಣಯ ಮಾಡಲ್ಪಡುತ್ತವೆ. ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಕ್ಯಾನ್ಸರ್ ರಿಜಿಸ್ಟ್ರೀಸ್ (IARC) ಪ್ರಕಾರ, ಭಾರತದಲ್ಲಿ (India) ಪ್ರತಿ ವರ್ಷ 28,000ಕ್ಕೂ ಹೆಚ್ಚು ಮೆದುಳಿನ ಗೆಡ್ಡೆಯ ಪ್ರಕರಣಗಳು ವರದಿಯಾಗುತ್ತವೆ.
ಬ್ರೈನ್ ಟ್ಯೂಮರ್ ರೋಗ ಲಕ್ಷಣಗಳು
ಮೆದುಳಿನ ಗೆಡ್ಡೆಯನ್ನು ಹೊಂದಿರುವ ಕೆಲವು ಜನರು ಯಾವುದೇ ರೋಗಲಕ್ಷಣಗಳನ್ನು (Symptoms) ಅನುಭವಿಸುವುದಿಲ್ಲ, ವಿಶೇಷವಾಗಿ ಇದು ತುಂಬಾ ಚಿಕ್ಕದಾಗಿದ್ದರೆ, ದೇಹದಲ್ಲಿ ಯಾವುದೇ ರೋಗ ಲಕ್ಷಣ ಕಂಡುಬರುವುದಿಲ್ಲ. ಉಳಿದಂತೆ ಮೆದುಳಿನ ಗೆಡ್ಡೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಗೆಡ್ಡೆಯ ಸ್ಥಳ, ಗಾತ್ರ ಮತ್ತು ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತವೆ. ಹೆಚ್ಚು ತಲೆನೋವು, ನಿಮ್ಮ ದೇಹದ ಒಂದು ಭಾಗ ಅಥವಾ ಒಂದು ಭಾಗದಲ್ಲಿ ದೌರ್ಬಲ್ಯ ಅಥವಾ ಪಾರ್ಶ್ವವಾಯು, ತಲೆ ಸುತ್ತುವಿಕೆ, ದೃಷ್ಟಿ ಸಮಸ್ಯೆ, ಕಿವಿ ಕೇಳದಂತಾಗುವುದು, ವಾಕರಿಕೆ ಅಥವಾ ವಾಂತಿ, ಗೊಂದಲ, ದೇಹ ಮರಗಟ್ಟಿದ ಅನುಭವ ಮೊದಲಾದ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.
ಕೋವಿಡ್ ಸೋಂಕು ತಗುಲಿದ ನಾಲ್ಕು ತಿಂಗಳ ಬಳಿಕ ರೋಗಿಗಳಲ್ಲಿ ಮಾನಸಿಕ ಸಮಸ್ಯೆ!
ಬ್ರೈನ್ ಟ್ಯೂಮರ್‌ಗೆ ಕಾರಣವಾಗೋದೇನು ?
ಜೀವಕೋಶದ ಕ್ರೋಮೋಸೋಮ್‌ಗಳ ಮೇಲೆ ಕೆಲವು ಜೀನ್‌ಗಳು ಹಾನಿಗೊಳಗಾದಾಗ ಮತ್ತು ಇನ್ನು ಮುಂದೆ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಮೆದುಳಿನ ಗೆಡ್ಡೆಗಳು ಬೆಳವಣಿಗೆಯಾಗುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಮೆದುಳಿನ ಜೀವಕೋಶದ ಡಿಎನ್‌ಎ ಬದಲಾದಾಗ, ಅದು ನಿಮ್ಮ ಮೆದುಳಿನ ಜೀವಕೋಶಗಳಿಗೆ ಹೊಸ ಸೂಚನೆಗಳನ್ನು ನೀಡುತ್ತದೆ. ನಿಮ್ಮ ದೇಹವು ಅಸಹಜ ಮೆದುಳಿನ ಕೋಶಗಳನ್ನು ಅಭಿವೃದ್ಧಿಪಡಿಸುತ್ತದೆ, ಅದು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುತ್ತದೆ ಮತ್ತು ಗುಣಿಸುತ್ತದೆ ಮತ್ತು ಕೆಲವೊಮ್ಮೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ಬದುಕುತ್ತದೆ. ಅದು ಸಂಭವಿಸಿದಾಗ, ಅಸಹಜ ಜೀವಕೋಶಗಳ ನಿರಂತರವಾಗಿ ಬೆಳೆಯುತ್ತಿರುವ ಗುಂಪು ನಿಮ್ಮ ಮೆದುಳಿನಲ್ಲಿ ಜಾಗವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
ಎಲ್ಲಾ ಕ್ಯಾನ್ಸರ್‌ಗಳ (Cancer) ಸುಮಾರು 5 ರಿಂದ 10 ಪ್ರತಿಶತದಷ್ಟು ಅನುವಂಶಿಕವಾಗಿದೆ. ಕೆಲಸದ ವಾತಾವರಣದಲ್ಲಿ ನೀವು ಕಂಡುಕೊಳ್ಳಬಹುದಾದಂತಹ ಕೆಲವು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ನಿಮ್ಮ ಮೆದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ವಿಕಿರಣಕ್ಕೆ ಒಡ್ಡಿಕೊಂಡ ಜನರು ಮೆದುಳಿನ ಗೆಡ್ಡೆಗಳ ಅಪಾಯವನ್ನು ಹೆಚ್ಚಿಸುತ್ತಾರೆ. ಮೊಬೈಲ್ ಫೋನ್ (Mobile), ಟ್ಯಾಬ್ಲೆಟ್‌ಗಳಂತಹ ಹಲವಾರು ಗ್ಯಾಜೆಟ್‌ಗಳು ಮೆದುಳಿನ ಗೆಡ್ಡೆಗಳಿಗೆ ಕಾರಣವಾಗುತ್ತವೆ.
ವಿಶ್ವ ಆಹಾರ ಸುರಕ್ಷತಾ ದಿನ: ಯಾಕೆ ಆಚರಿಸಲಾಗುತ್ತೆ
ವಿಶ್ವ ಬ್ರೈನ್ ಟ್ಯೂಮರ್ ದಿನದ ಇತಿಹಾಸ
ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಮೊದಲ ಬಾರಿಗೆ ಜೂನ್ 8,2000ರಂದು ಜರ್ಮನಿಯ ಬ್ರೈನ್ ಟ್ಯೂಮರ್ ಅಸೋಸಿಯೇಷನ್ ಆಚರಿಸಿತು. ಬ್ರೈನ್ ಟ್ಯೂಮರ್ ರೋಗಿಗಳನ್ನು (Patients) ಬೆಂಬಲಿಸಲು ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಇದನ್ನು 1998 ರಲ್ಲಿ ಸ್ಥಾಪಿಸಲಾಯಿತು ಮತ್ತು 14ರಾಷ್ಟ್ರಗಳಿಂದ 500 ನೋಂದಾಯಿತ ಸದಸ್ಯರನ್ನು ಈ ಅಸೋಸಿಯೇಷನ್ ಹೊಂದಿದೆ. ಟ್ಯೂಮರ್ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಬೆಂಬಲವನ್ನು ನೀಡುವುದು ಮತ್ತು ಹಣವನ್ನು ಸಂಗ್ರಹಿಸುವುದು ಇದರ ಉದ್ದೇಶವಾಗಿತ್ತು. ಮೆದುಳಿನ ಗೆಡ್ಡೆಗಳಿಗೆ ಕೆಲವು ಪರಿಣಾಮಕಾರಿ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ಅಸೋಸಿಯೇಷನ್ ವಿಶೇಷವಾಗಿ ನ್ಯೂರೋ-ಆಂಕೊಲಾಜಿಯಲ್ಲಿ ವಿಜ್ಞಾನ ಮತ್ತು ಸಂಶೋಧನೆಯನ್ನು ಪ್ರತಿಪಾದಿಸುತ್ತದೆ.
ವಿಶ್ವ ಬ್ರೈನ್ ಟ್ಯೂಮರ್ ದಿನದ ಮಹತ್ವ
ಮಾರಣಾಂತಿಕ ಮೆದುಳಿನ ಗೆಡ್ಡೆ ಜರ್ಮನಿಯಲ್ಲಿ ಅತ್ಯಂತ ಸಾಮಾನ್ಯವಾಗಿದೆ. ಏಕೆಂದರೆ ಸುಮಾರು 8,000 ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಿಭಿನ್ನ ಅಭಿಯಾನಗಳು, ಘಟನೆಗಳು, ಸೆಮಿನಾರ್‌ಗಳು ಮತ್ತು ವಿಷಯದ ಸುತ್ತಲಿನ ಚರ್ಚೆಗಳ ಮೂಲಕ ಮೆದುಳಿನ ಗೆಡ್ಡೆಯ ಬಗ್ಗೆ ಪ್ರಮುಖ ಸಂಗತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ಭಾರತ ಸರ್ಕಾರವು ರೋಗವನ್ನು ತಡೆಗಟ್ಟಲು, ಪರೀಕ್ಷಿಸಲು, ರೋಗನಿರ್ಣಯ ಮಾಡಲು ಮತ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮವನ್ನು ಪರಿಚಯಿಸಿದೆ.