Asianet Suvarna News Asianet Suvarna News

Blood Donor Day: ರಕ್ತದಾನಿ ದಿನದ ಆಚರಣೆ ಎಂದು? ರಕ್ತ ನೀಡಿದ್ರೇನು ಲಾಭ?

ರಕ್ತದಾನವನ್ನು ಮಹಾ ದಾನಗಳಲ್ಲಿ ಒಂದು. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಅಗತ್ಯವಿದೆ. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಯೋದು, ಮಾತ್ರವಲ್ಲದೆ ನಮ್ಮ ಜೀವಕ್ಕೂ ರಕ್ಷಣೆ ಸಿಗುತ್ತದೆ. ರಕ್ತದಾನಕ್ಕೆಂದು ಶುಭದಿನವಿದೆ. ಅದ್ರ ಇತಿಹಾಸ, ಮಹತ್ವದ ವಿವರ ಇಲ್ಲಿದೆ. 
 

World Blood Donor Day History And Significance roo
Author
First Published Jun 12, 2023, 2:23 PM IST

ನಮ್ಮ ದೇಹ ಮೂಳೆ, ಮಾಂಸಗಳಿಂದ ಕೂಡಿದೆ. ಇವು ಸರಿಯಾಗಿ ಕೆಲಸ ಮಾಡ್ಬೇಕೆಂದ್ರೆ ರಕ್ತ ಬೇಕು. ದೇಹದಲ್ಲಿ ಅಗತ್ಯವಿರುವಷ್ಟು ರಕ್ತವಿಲ್ಲ ಎಂದಾಗ ಜೀವಕ್ಕೆ ಅಪಾಯ ಉಂಟಾಗುತ್ತದೆ. ದೇಹಕ್ಕೆ ರಕ್ತದ ಅಗತ್ಯವಿದ್ದಾಗ ಸಕಾಲದಲ್ಲಿ ರಕ್ತ ಪೂರೈಕೆಯಾದ್ರೆ ವ್ಯಕ್ತಿಯ ಪ್ರಾಣ ಉಳಿಯುತ್ತದೆ. ಒಂದ್ವೇಳೆ ಸರಿಯಾದ ಸಮಯಕ್ಕೆ ರಕ್ತ ಸಿಗದೆ ಹೋದ್ರೆ ಪ್ರಾಣಕ್ಕೆ ಹಾನಿಯುಂಟಾಗುತ್ತದೆ.  

ನಮ್ಮಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಅದ್ರಲ್ಲಿ ರಕ್ತದಾನ (Blood Donation) ಕೂಡ ಸೇರಿದೆ. ರಕ್ತ ದಾನವನ್ನು ಜೀವದಾನವೆಂದು ನಂಬಲಾಗಿದೆ. ರಕ್ತದಾನದ ಮೂಲಕ ಅನೇಕರ ಜೀವ (Life) ಉಳಿಸಬಹುದು. ರಕ್ತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ. ಆರೋಗ್ಯವಂತ ವ್ಯಕ್ತಿಗೆ ರಕ್ತ ನೀಡುವಂತೆ ಪ್ರೋತ್ಸಾಹಿಸಬೇಕಿದೆ. ರಕ್ತದಾನವನ್ನು ಉತ್ತೇಜಿಸುವ ಮತ್ತು ರಕ್ತದಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಪ್ರತಿ ವರ್ಷ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಆರೋಗ್ಯವಂತ ಜನರಿಗೆ ರಕ್ತ ನೀಡುವಂತೆ ಪ್ರೇರೇಪಿಸಲಾಗುತ್ತದೆ. ರಕ್ತದ ಕೊರತೆಯಿಂದ ಯಾವುದೇ ರೋಗಿ ಸಾಯಬಾರದು ಎನ್ನುವ ಉದ್ದೇಶದಿಂದ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ. ರಕ್ತದಾನಿಗಳ ದಿನವನ್ನು ಯಾವಾಗ ಆಚರಣೆ ಮಾಡಲಾಗುತ್ತೆ ಹಾಗೆ ಅದರ ಇತಿಹಾಸವೇನು ಎಂಬುದನ್ನು ನಾವಿಂದು ಹೇಳ್ತೇವೆ.

Health Tips: ರಕ್ತನಾಳಗಳಲ್ಲಿ ಕೊಬ್ಬು ಹೆಚ್ತಾ ಇದ್ಯಾ? ಕಾಲುಗಳಲ್ಲಿ ಗೊತ್ತಾಗುತ್ತೆ ಅಲಕ್ಷ್ಯ ಬೇಡ

ವಿಶ್ವ ರಕ್ತದಾನಿಗಳ ದಿನವನ್ನು ಎಂದು ಆಚರಿಸಲಾಗುತ್ತದೆ? : ವಿಶ್ವ ರಕ್ತದಾನಿಗಳ ದಿನವನ್ನು ಪ್ರತಿ ವರ್ಷ ಜೂನ್ 14 ರಂದು ಆಚರಿಸಲಾಗುತ್ತದೆ. ರಕ್ತದಾನಿ ಎಂದರೆ ತನ್ನ ರಕ್ತವನ್ನು ಅಗತ್ಯವಿರುವವರಿಗೆ ದಾನ ಮಾಡುವ ವ್ಯಕ್ತಿ.

 ರಕ್ತದಾನಿ ದಿನ ಶುರುವಾಗಿದ್ದು ಯಾವಾಗ? : ವಿಶ್ವ ಆರೋಗ್ಯ ಸಂಸ್ಥೆ 2004 ರಲ್ಲಿ ಮೊದಲ ಬಾರಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲು ಪ್ರಾರಂಭಿಸಿತು. ಅಂದಿನಿಂದ ಪ್ರತಿ ವರ್ಷ ಜೂನ್ 14 ರಂದು ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.

ಜೂನ್ 14ರಂದು ರಕ್ತದಾನಿ ದಿನ ಆಚರಣೆ ಹಿಂದಿದೆ ಈ ಕಾರಣ :  ಜೂನ್ 14ರಂದು ರಕ್ತದಾನಿ ದಿನ ಆಚರಣೆ ಕಾರಣ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್. ಅವರು ರಕ್ತದ ಗುಂಪನ್ನು ಕಂಡು ಹಿಡಿದ ವಿಜ್ಞಾನಿ. ಕಾರ್ಲ್ ಲ್ಯಾಂಡ್ ಸ್ಟೈನರ್, ರಕ್ತದ ಗುಂಪು ಕಂಡು ಹಿಡಿದ ಹಿನ್ನಲೆಯಲ್ಲಿ 1930ರಲ್ಲಿ ನೋಬಲ್ ಪ್ರಶಸ್ತಿ ಪಡೆದಿದ್ದರು. ಜೂನ್ 14, ಕಾರ್ಲ್ ಲ್ಯಾಂಡ್ ಸ್ಟೈನರ್ ಹುಟ್ಟುಹಬ್ಬ. ಹಾಗಾಗಿ ಈ ದಿನವನ್ನು ಅವರಿಗೆ ಸಮರ್ಪಿಸಲಾಗಿದೆ. ಅವರ ಹುಟ್ಟುಹಬ್ಬವನ್ನು ರಕ್ತದಾನಿ ದಿನವಾಗಿ ಆಚರಣೆ ಮಾಡಲಾಗ್ತಿದೆ. 

Blood cancer: ಈ ಸಣ್ಣಪುಟ್ಟ ಲಕ್ಷಣಗಳನ್ನು ನಿರ್ಲಕ್ಷಿಸದಿರಿ, ಇದು ಬ್ಲಡ್‌ ಕ್ಯಾನ್ಸರ್‌ ಆಗಿರಬಹುದು!

ವಿಶ್ವ ರಕ್ತದಾನಿ ದಿನದ ಮಹತ್ವ : ವಿವಿಧ ಅಪಾಯಕಾರಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಜೀವನವನ್ನು ನೀಡುವ ಗುರಿಯನ್ನು ವಿಶ್ವ ರಕ್ತದಾನಿ ದಿನ ಹೊಂದಿದೆ. ಈ ದಿನದಂದು ಪ್ರತಿ ದೇಶದ ಪುರುಷರು, ಮಹಿಳೆಯರು ಮತ್ತು ಸ್ವಯಂಸೇವಕರು ಅಗತ್ಯವಿರುವವರಿಗೆ ರಕ್ತ ಮತ್ತು ಪ್ಲಾಸ್ಮಾವನ್ನು ದಾನ ಮಾಡುತ್ತಾರೆ.  

ವಿಶ್ವ ರಕ್ತದಾನಿ ದಿನದ ಈ ವರ್ಷದ ಥೀಮ್ ಏನು? : ಪ್ರತಿ ವರ್ಷ ಒಂದೊಂದು ಥೀಮ್ ನಡಿ ರಕ್ತದಾನ ಮಾಡಲಾಗುತ್ತದೆ. ಈ ಬಾರಿ ರಕ್ತ ನೀಡಿ, ಪ್ಲಾಸ್ಮಾ ನೀಡಿ, ಜೀವವನ್ನು ಹಂಚಿ, ಆಗಾಗ ಹಂಚಿರಿ ಎಂಬ ಥೀಮ್ ಅಡಿ ರಕ್ತದಾನಿ ದಿನವನ್ನು ಆಚರಣೆ ಮಾಡಲಾಗ್ತಿದೆ. 

ರಕ್ತದಾನದಿಂದಾಗುವ ಲಾಭ : ರಕ್ತದಾನ ಮಾಡುವುದ್ರಿಂದ ದಾನಿಗಳಿಗೂ ಅನೇಕ ಲಾಭವಿದೆ. ಅನೇಕರು ರಕ್ತ ದಾನ ಮಾಡಿದ್ರೆ ದೇಹ ದುರ್ಬಲವಾಗುತ್ತದೆ ಎಂದು ಭಾವಿಸ್ತಾರೆ. ಇದು ತಪ್ಪು. ಆಗಾಗಾ ರಕ್ತದಾನ ಮಾಡುವುದ್ರಿಂದ ರಕ್ತದಾನಿಯ ಹೃದಯದ ಆರೋಗ್ಯ ಸುಧಾರಿಸುತ್ತದೆ. ತೂಕವನ್ನು ನಿಯಂತ್ರಣದಲ್ಲಿಡಬಹುದು. ಕ್ಯಾನ್ಸರ್‌ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ರಕ್ತದಾನವು ನಿಮ್ಮ ದೇಹದ ಮೇಲೆ ಮಾತ್ರವಲ್ಲದೆ ನಿಮ್ಮ ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ರಕ್ತದಾನಿ ಒಂದು ರಕ್ತದಾನದ ನಂತ್ರ ಮೂರು ತಿಂಗಳು ರಕ್ತದಾನ ಮಾಡಬಾರದು. 
 

Follow Us:
Download App:
  • android
  • ios