Asianet Suvarna News Asianet Suvarna News

ವಿಪರೀತ ಕೆಲಸ ಮಾಡ್ತೀರಾ? ಖುಷಿಯಾಗಿ ಮಾಡಿಲ್ಲವೆಂದರೆ ಹಾರ್ಟ್ ಅಟ್ಯಾಕ್ ಆಗೋದು ಗ್ಯಾರಂಟಿ!

ಸಣ್ಣ ಸಣ್ಣ ವಿಷ್ಯಕ್ಕೂ ನಮಗೆ ಟೆನ್ಷನ್ ಆಗ್ತಿರುತ್ತೆ. ಆದ್ರೆ ಅದು ನಮಗೆ ತಿಳಿಯೋದೇ ಇಲ್ಲ. ನಮ್ಮ ಆರೋಗ್ಯವನ್ನು ಈ ಒತ್ತಡ ಹಾಳು ಮಾಡ್ತಿದೆ ಎಂಬ ಕಟುಸತ್ಯ ಕೂಡ ನಮ್ಮ ಗಮನಕ್ಕೆ ಬಂದಿರೋದಿಲ್ಲ. ನಿಮ್ಮೆಲ್ಲ ರೋಗಕ್ಕೆ ಕಾರಣ ನಿಮ್ಮ ಸ್ಟ್ರೆಸ್ ಎಂದಾಗ್ಲೇ ನಾವು ಟೆನ್ಷನ್ ಮಾಡ್ಕೊಳ್ತಿದ್ವಾ ಎಂಬ ಪ್ರಶ್ನೆ ಬರುತ್ತೆ. 
 

Working Too Hard Impacting Your Heart Health roo
Author
First Published Oct 19, 2023, 3:11 PM IST

ಮುಂದುವರೆದ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳು, ಅಭಿವೃದ್ಧಿಗಳನ್ನು ನಾವು ಕಾಣುತ್ತೇವೆ. ಅಭಿವೃದ್ಧಿ ಹೆಚ್ಚಾದಂತೆ ಜನರ ಕೆಲಸ ಹಾಗೂ ಜವಾಬ್ದಾರಿಗಳು ಕೂಡ ಹೆಚ್ಚುತ್ತವೆ. ಜವಾಬ್ದಾರಿ ಹೆಚ್ಚಾದಾಗ ಹೆಚ್ಚಿನ ಕೆಲಸ, ಟೆನ್ಶನ್, ಒತ್ತಡ ಇದ್ದೇ ಇರುತ್ತೆ. ಇತ್ತೀಚೆಗೆ ಬಹುತೇಕ ಮಂದಿ ವರ್ಕ್ ಪ್ರೆಶರ್ ನಿಂದ ಬಳಲುತ್ತಿದ್ದಾರೆ. ಇನ್ನೂ ಕೆಲವರು ಕೆಲಸದಲ್ಲೇ ತಲ್ಲೀನರಾಗಿ ವರ್ಕೋಹಾಲಿಕ್ ಆಗಿಬಿಡುತ್ತಾರೆ. ಈ ರೀತಿಯ ಕೆಲಸದ ಟೆನ್ಶನ್ ನಿಂದಲೇ ಅನೇಕ ರೋಗಗಳು ಮನುಷ್ಯರನ್ನು ಬಾಧಿಸುತ್ತಿದೆ. 

ದಿನ ಬೆಳಗಾದರೆ ಟೆನ್ಶನ್ (Tension) ನಿಂದಲೇ ಕಚೇರಿಗೆ ಹೋಗುವ ಅನೇಕರನ್ನು ನಾವು ನೋಡುತ್ತೇವೆ. ಕೆಲವರಿಗೆ ಮನೆಯ ಜಂಜಾಟದ ಜೊತೆಗೆ ಕೆಲಸದ ಒತ್ತಡವೂ ಇರುತ್ತೆ. ಈ ರೀತಿಯ ಒತ್ತಡದಿಂದ ವಿವಿಧ ರೀತಿಯ ಆರೋಗ್ಯ (Health) ಸಮಸ್ಯೆಗಳು ಉಂಟಾಗುತ್ತದೆ. ಮೆದುಳಿನ ಮೇಲೆ ಹಾಗೂ ಮನಸ್ಸಿನ ಮೇಲೆ ಬೀಳುವ ಹೆಚ್ಚಿನ ಒತ್ತಡ ಪಾರ್ಶ್ವವಾಯು (Paralysis) ಮತ್ತು ಬೊಜ್ಜಿನಂತಹ ತೊಂದರೆಗೆ ಕಾರಣವಾಗುತ್ತದೆ. ಕಾರ್ಡಿಯೋವಾಸ್ಕುಲರ್ ಕ್ವಾಲಿಟಿ ಆ್ಯಂಡ್  ಔಟ್ ಕಮ್ಸ್ ಎಂಬ ಜರ್ನಲ್ ನಲ್ಲಿ ಪ್ರಕಟವಾದ ಹೊಸ ಸಂಶೋಧನೆ, ಹೆಚ್ಚಿನ ಒತ್ತಡವು ಪುರುಷರಲ್ಲಿ ಹೃದ್ರೋಗದ ಸಮಸ್ಯೆಯನ್ನು ದ್ವಿಗುಣಗೊಳಿಸುತ್ತದೆ. ಇದರಿಂದ ಹೃದಯಾಘಾತ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದಿದೆ.

ಮಲಗುವ ಸಮಯ ತಡವಾದಷ್ಟು ಹೃದ್ರೋಗ ಸಾಧ್ಯತೆ ಹೆಚ್ಚು?

ಕೆಲಸದ ಟೆನ್ಶನ್ ನಿಂದ ಹೆಚ್ಚುತ್ತಿದೆ ಹೃದಯದ ಖಾಯಿಲೆ :  ಸಂಶೋಧಕರು 2000 ದಿಂದ 2018ರ ತನಕ ಅಂದರೆ ಸತತ 18 ವರ್ಷಗಳ ಕಾಲ ಸುಮಾರು 6,465 ವೈಟ್ ಕಾಲರ್ ಜಾಬ್ ಹೊಂದಿರುವ ಕೆಲಸಗಾರರ ಮೇಲೆ ಅಧ್ಯಯನ ನಡೆಸಿದರು. ಅವರ ಕೆಲಸದ ಒತ್ತಡ ಮತ್ತು ಅವರ ಆರೋಗ್ಯದಲ್ಲಾಗುವ ಬದಲಾವಣೆಗಳನ್ನು ಗಮನಿಸಲಾಯ್ತು. ಈ ಅಧ್ಯಯನದಿಂದ ಕೆಲಸದ ಒತ್ತಡದಿಂದ ಹೃದ್ರೋಗದ ಘಟನೆಗಳು ಹೆಚ್ಚುತ್ತಿರುವುದು ತಿಳಿದುಬಂತು.
ಸಂಶೋಧಕರು ಮೊದಲು ಕೆಲಸಗಾರರ ಮೇಲಿನ ಕೆಲಸದ ಒತ್ತಡ ಎಷ್ಟಿದೆ ಎನ್ನುವುದನ್ನು ಗಮನಿಸಿದರು. ಕೆಲವು ಜಾಬ್ ಹೋಲ್ಡರ್ಸ್ ಮೇಲೆ ಹೆಚ್ಚಿನ ಕೆಲಸದ ಒತ್ತಡವಿರುತ್ತದೆ. ಇಂತಹವರಿಗೆ ತಮ್ಮ ಕೆಲಸದ ಮೇಲೆ ಕಡಿಮೆ ನಿಯಂತ್ರಣವಿರುತ್ತದೆ. ಇದರ ಹೊರತಾಗಿ ವ್ಯಕ್ತಿಯ ಸಂಬಳ, ಭಡ್ತಿ, ಉದ್ಯೋಗ ಸ್ಥಿರತೆ ಮುಂತಾದ ವಿಷಯಗಳಲ್ಲಿ ಇರುವ ಒತ್ತಡಗಳನ್ನು ಕೂಡ ಸಂಶೋಧಕರು ಪರಿಗಣಿಸಿದ್ದಾರೆ.

ಯಾಕೋ ಮೂಡಿಲ್ಲ ಅಂತ ಕೂರಬೇಡಿ, ಈ ಫುಡ್ ಬೇಗ ಬೇಗ ತಿನ್ಬಿಡಿ!

ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಿರುವವರಲ್ಲಿ ಹೃದಯದ ಖಾಯಿಲೆಯ ಅಪಾಯವು ಪ್ರತಿಶತ 49ರಷ್ಟು ಹೆಚ್ಚಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಇನ್ನು ಕೆಲಸದ ಒತ್ತಡದ ಜೊತೆಗೆ ಸಂಬಳ, ಭಡ್ತಿಗಳಲ್ಲಿ ಸಮಸ್ಯೆಯನ್ನು ಹೊಂದಿರುವವರಿಗೆ ಶೇ 103ರಷ್ಟು ಹೃದಯದ ಖಾಯಿಲೆಯ ಅಪಾಯವಿದೆ ಎನ್ನಲಾಗಿದೆ. ಈ ರೀತಿಯ ಹೆಚ್ಚಿನ ಮಾನಸಿಕ ಒತ್ತಡದಿಂದ Congenital Heart Disease (CHD) ಉಂಟಾಗುವ ಸಾಧ್ಯತೆ ಅಧಿಕವಾಗಿದೆ.

ಕೆಲಸದ ಒತ್ತಡವನ್ನು ಕಡಿಮೆಮಾಡಲು ಹೀಗೆ ಮಾಡಿ : ಕೆಲಸದ ಟೆನ್ಶನ್ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಒತ್ತಡವನ್ನು ಕಡಿಮೆ ಮಾಡಲು ದೇಹಕ್ಕೆ ವಿಶ್ರಾಂತಿ ನೀಡುವಂತಹ, ಶರೀರವನ್ನು ಸುಸ್ಥಿತಿಯಲ್ಲಿಡುವಂತಹ ಕೆಲವು ವ್ಯಾಯಾಮಗಳನ್ನು ಮಾಡಬೇಕು. ಸ್ನಾಯುಗಳು ಹಿಗ್ಗುವಂತೆ ಮಾಡಿ ಹಾಗೂ ಪ್ರತಿನಿತ್ಯ ವಾಕಿಂಗ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಸಾಧ್ಯವಾದಷ್ಟು ನಿಮ್ಮ ಸುತ್ತ ಮುತ್ತ ದೊಡ್ಡ ಶಬ್ದವಿರದಂತೆ ನೋಡಿಕೊಳ್ಳಿ. ಅದರ ಬದಲಾಗಿ ಮನಸ್ಸಿಗೆ ಹಿತವೆನಿಸುವ ಸಂಗೀತ ಕೇಳಿ. ಹೆಚ್ಚು ಹೆಚ್ಚು ಸಕಾರಾತ್ಮಕ ಚಿಂತನೆಗಳನ್ನು ಮಾಡುವುದರಿಂದ ಮನಸ್ಸಿನ ಒತ್ತಡ ಹಾಗೂ ಟೆನ್ಶನ್ ಗಳು ದೂರವಾಗುತ್ತವೆ. ವರ್ಕ್ ಪ್ರೆಶರ್ ಎಷ್ಟೇ ಇದ್ದರೂ ನಮ್ಮ ಕೆಲವು ಒಳ್ಳೆಯ ಅಭ್ಯಾಸ ಹಾಗೂ ಚಿಂತನೆಗಳಿಂದ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಇದರಿಂದ ಅನೇಕ ರೀತಿಯ ಮಾನಸಿಕ ಹಾಗೂ ಹೃದಯದ ತೊಂದರೆಗಳನ್ನು ದೂರಮಾಡಬಹುದು.

Follow Us:
Download App:
  • android
  • ios