ಯಾಕೋ ಮೂಡಿಲ್ಲ ಅಂತ ಕೂರಬೇಡಿ, ಈ ಫುಡ್ ಬೇಗ ಬೇಗ ತಿನ್ಬಿಡಿ!
ಎಲ್ಲದಕ್ಕೂ ಮೂಡ್ ಕಾರಣ ಎನ್ನುವ ಜನರು ಇಡೀ ದಿನ ಮೂಡ್ ಇಲ್ಲ ಎನ್ನುವ ಮೂಡ್ ನಲ್ಲಿ ಇರ್ತಾರೆ. ಏನೇ ಹೊಸ ಕೆಲಸ ಮಾಡಿದ್ರೂ ನಿಮ್ಮ ಮೂಡ್ ಫ್ರೆಶ್ ಆಗಿಲ್ಲ ಎಂದಾದ್ರೆ ಈ ಆಹಾರ ಸೇವನೆ ಮಾಡಿ.
ನನಗ್ಯಾಕೋ ಮೂಡಿಲ್ಲ… ಏನ್ ಮಾಡೋಕೂ ಮನಸ್ಸಿಲ್ಲ. ಎಲ್ಲರ ಬಾಯಲ್ಲಿ ಒಮ್ಮೆಯಾದ್ರೂ ಬರುವ ಮಾತಿದು. ಈಗಿನ ಯುವಜನತೆ ಬಾಯಿಂದ ಪ್ರತಿ ದಿನ ನೀವಿದನ್ನು ಕೇಳ್ಬಹುದು. ಊಟ ಮಾಡೋಕೆ ಮೂಡ್ ಇಲ್ಲ, ಓದೋಕೆ ಮೂಡ್ ಇಲ್ಲ ಕೊನೆಗೆ ಸ್ನಾನ ಮಾಡೋಕೂ ಮೂಡ್ ಇಲ್ಲ ಎನ್ನುವ ಜನರೇ ಹೆಚ್ಚು. ಯಾವಾಗ ಈ ಮೂಡ್ ಹಾಳಾಗುತ್ತೆ ಅನ್ನೋದೇ ತಿಳಿಯೋದಿಲ್ಲ. ಹೇಳದೆ, ಕೇಳದೆ ಬರುವ ಖಾಯಿಲೆ ಇದು. ಈಗಷ್ಟೇ ಲವಲವಿಕೆಯಿಂದ ಇದ್ದ ಜನರು ಕೆಲವೇ ಸಮಯದಲ್ಲಿ ಬದಲಾಗ್ತಾರೆ.
ಚಿಕ್ಕ ಮಕ್ಕಳ ಬಾಯಿಂದ ಕೂಡ ನೀವು ಈ ಮೂಡ್ (Mood) ಹಾಳಾಗಿದೆ ಎನ್ನುವ ಮಾತನ್ನು ಕೇಳ್ಬಹುದು. ಕೆಲಸ, ಓದಿನ ಒತ್ತಡ, ಅನಾರೋಗ್ಯಕರ ಜೀವನಶೈಲಿ (lifestyle), ಹೊಟ್ಟೆ – ಮನಸ್ಸನ್ನು ಹಾಳು ಮಾಡುವ ಆಹಾರವೇ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ನಿಮಗೂ ಮೂಡ್ ಇಲ್ಲ ಎನ್ನಿಸಿದ್ರೆ ಸುಮ್ಮನೆ ಕೂರಬೇಡಿ. ನಿಮ್ಮ ಆಹಾರದಲ್ಲಿ ಬದಲಾವಣೆ ತನ್ನಿ. ತಕ್ಷಣ ನೀವು ಫ್ರೆಶ್ (Fresh) ಆಗೋದಲ್ಲದೆ ಮೂಡ್ ಗೆ ಬರ್ತಿರಾ. ನಾವಿಂದು ಮೂಡ್ ಹಾಳಾಗೋಕೆ ಕಾರಣವೇನು ಹಾಗೇ ಅದನ್ನು ಸರಿಪಡಿಸೋದು ಹೇಗೆ ಎಂಬುದನ್ನು ಹೇಳ್ತೇವೆ.
ಸೆಕ್ಸ್ ಟೈಂನಲ್ಲಿ ಬೇಗ ಸುಸ್ತಾಗುತ್ತಾ? ಲೈಂಗಿಕ ಶಕ್ತಿ ಹೆಚ್ಚಿಸಲು ಇವನ್ನು ತಿನ್ನಿ ಸಾಕು
ಸಿರೊಟೋನಿನ್ ಕೊರತೆಯಿಂದ ಮೂಡ್ ಹಾಳಾಗುತ್ತೆ : ಕೆಟ್ಟುಹೋದ ಮೂಡನ್ನು ಸರಿಮಾಡಲು ಕೆಲವರು ಧ್ಯಾನ, ಸಾಂಗ್ ಕೇಳೋದು, ವಾಕಿಂಗ್, ಮೊಬೈಲ್ ವೀಕ್ಷಣೆ ಮುಂತಾದ ಕೆಲವು ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ. ಇವೆಲ್ಲವುಗಳಿಗಿಂತ ಸಿರೊಟೋನಿನ್ ನಿಂದ ಕೂಡಿರುವ ಆಹಾರಗಳು ನಮ್ಮ ಮೂಡ್ ಅನ್ನು ಫ್ರೆಶ್ ಆಗಿಸುತ್ತವೆ. ಸಿರೊಟೋನಿನ್ ನಮ್ಮ ಮನಸ್ಥಿತಿಯನ್ನು ನಿಯಂತ್ರಿಸುವ ಮತ್ತು ನಿದ್ದೆಗೆ ಸಹಾಯಮಾಡುವ ಹಾರ್ಮೋನ್ ಆಗಿದೆ. ಸಿರೊಟೋನಿನ್ ಕೊರತೆಯಿಂದಾಗಿ ಮೂಡ್ ಸ್ವಿಂಗ್, ಆತಂಕ ಮತ್ತು ಖಿನ್ನತೆ ಉಂಟಾಗುತ್ತದೆ. ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವನ್ನು ಹೊಂದಿರುವ ಆಹಾರಗಳು ಸಿರೊಟೋನಿನ್ ಅನ್ನು ಹೆಚ್ಚಿಸುತ್ತವೆ. ಆದ್ದರಿಂದ ಸಿರೊಟೋನಿನ್ ಹೊಂದಿರುವ ಆಹಾರಗಳು ಮನಸ್ಥಿತಿಯನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ. ಅಂತಹ ಕೆಲವು ಆಹಾರಗಳು ಇಲ್ಲಿವೆ.
ದಿನಾ ನೆನಸಿದ ಗೋಡಂಬಿ ತಿನ್ನಿ, ಕೂದಲು, ಚರ್ಮ ಎಷ್ಟು ಚೆಂದ ಆಗುತ್ತೆ ಗೊತ್ತಾ?
ಮೊಟ್ಟೆ (Egg) : ಮೊಟ್ಟೆಯನ್ನು ಅನೇಕ ಮಂದಿ ತಮ್ಮ ಆಹಾರದಲ್ಲಿ ಅಳವಡಿಸಿಕೊಂಡಿದ್ದಾರೆ. ಅನೇಕ ಪೌಷ್ಠಿಕಾಂಶಗಳನ್ನು ಹೊಂದಿರುವ ಮೊಟ್ಟೆ ಸಿರೊಟೋನಿನ್ ಅನ್ನು ಹೆಚ್ಚಿಸುವ ಟ್ರಿಪ್ಟೊಫಾನ್ ಅನ್ನು ಹೊಂದಿದೆ. ಇದರ ಸೇವನೆಯಿಂದ ಮೆದುಳಿನಲ್ಲಿ ಸಿರೊಟೋನಿನ್ ಹರಿವು ಹೆಚ್ಚಾಗಿ ಮೂಡ್ ಚೆನ್ನಾಗಿರುತ್ತೆ ಮತ್ತು ನಿದ್ದೆಯೂ ಚೆನ್ನಾಗಿ ಬರುತ್ತೆ. ದಿನವೊಂದಕ್ಕೆ 1-2 ಮೊಟ್ಟೆಯನ್ನು ಸೇವಿಸುವುದರಿಂದ ಡಿಪ್ರೆಶನ್ ಕಡಿಮೆಯಾಗುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ.
ಅನಾನಸ್ (Pineapple) : ಅನಾನಸ್ ಅಥವಾ ಪೈನಾಪಲ್ ಸಿರೊಟೋನಿನ್ ಆಗರವಾಗಿದೆ. ಇದರ ಸೇವನೆಯಿಂದ ಮೆದುಳಿನಲ್ಲಿ ಸಿರೊಟೋನಿನ್ ಮಟ್ಟ ಹೆಚ್ಚುತ್ತದೆ. ಅನಾನಸ್ ಹಣ್ಣನ್ನು ಬೇಯಿಸಿದರೆ ಅದರಲ್ಲಿ ಸಿರೊಟೋನಿನ್ ಅಂಶ ಕಡಿಮೆಯಾಗುತ್ತದೆ. ತಾಜಾ ಅನಾನಸ್ ಹಣ್ಣಿನ ಸೇವನೆ ಮೂಡ್ ಅನ್ನು ಚೆನ್ನಾಗಿರಿಸುತ್ತದೆ ಮತ್ತು ಇದರಿಂದ ಒತ್ತಡ ಹಾಗೂ ನಕಾರಾತ್ಮಕ ವಿಚಾರಗಳು ಕೂಡ ದೂರವಾಗುತ್ತವೆ.
ಪನೀರ್ (Paneer) : ಪನೀರ್ ನಿಂದ ಅನೇಕ ರೀತಿಯ ಆಹಾರಗಳನ್ನು ತಯಾರಿಸುತ್ತಾರೆ. ರುಚಿಕರವಾದ ಈ ಪನೀರ್ ಅನೇಕ ಆರೋಗ್ಯಕರ ಅಂಶವನ್ನು ಹೊಂದಿದೆ. ಪನೀರ್ ನಲ್ಲಿ ಸಿರೊಟೀನಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರ ಸೇವನೆಯು ಮೆದುಳಿನಲ್ಲಿ ನಡೆಯುವ ಭಾವನಾತ್ಮಕ ಅಸಮತೋಲನವನ್ನು ಕಡಿಮೆ ಮಾಡುತ್ತದೆ. ಇದರ ಹೊರತಾಗಿ ಪನ್ನೀರ್ ನಲ್ಲಿ ಪ್ರೊಟೀನ್, ಫೈಬರ್, ವಿಟಮಿನ್, ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಚೀಸ್ (Cheese) ಮತ್ತು ಇತರ ಹಾಲಿನ ಉತ್ಪನ್ನಗಳು (Dairy Products) : ಹಾಲು ಮತ್ತು ಹಾಲಿನ ಉತ್ಪನ್ನಗಳು ಉತ್ತಮ ಆರೋಗ್ಯಕ್ಕೆ ಮೂಲವಾಗಿದೆ. ಚೀಸ್ ಮತ್ತು ಹಾಲಿನಲ್ಲಿ ಟ್ರಿಪ್ಟೊಫಾನ್ ಅಧಿಕವಾಗಿರುತ್ತದೆ. ಇವುಗಳ ಸೇವನೆಯಿಂದ ಮೆದುಳಿನಲ್ಲಿ ಸಿರೊಟೋನಿನ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ಹಾಲು ಮತ್ತು ಇನ್ನಿತರ ಹಾಲಿನ ಉತ್ಪನ್ನಗಳು ಮನಸ್ಸಿನ ಭಾವನೆಗಳನ್ನು ಸಕಾರಾತ್ಮಕವಾಗಿಸಲು ಸಹಕಾರಿಯಾಗಿವೆ.