ಕ್ಯಾಮೆರಾ ಫ್ಲಾಶಲ್ಲಿ ಪತ್ತೆಯಾಯ್ತು, ಮಗುವಿಗೆ ಕ್ಯಾನ್ಸರ್ ಇರೋ ವಿಷಯ!

ಚಿಕ್ಕ ಮಕ್ಕಳಿಗೆ ಮೊಬೈಲ್ ಕೊಡಬಾರದು, ಅವರ ಫೋಟೋ ಕ್ಲಿಕ್ಕಿಸಬಾರದು ಅಂತಾ ದೊಡ್ಡವರು ಹೇಳ್ತಾರೆ. ನವಜಾತ ಶಿಶುವಿನ ಫೋಟೋ ತೆಗೆಯೋಕೆ ಹಿಡಿಯರು ಅನುಮತಿ ನೀಡೋದಿಲ್ಲ. ಆದ್ರೆ ಈ ಮಗುವಿನ ಜೀವ ಫೋಟೋದಿಂದಲೇ ಉಳಿದಿದೆ. 
 

Woman Detects Rare Cancer Using His Smartphone Camera Flash roo

ಮೊಬೈಲ್ ಹೆಚ್ಚು ಬಳಸಿದ್ರೆ ಕಣ್ಣು ಹಾಳಾಗುತ್ತೆ. ಆರೋಗ್ಯ ಹಾಳು ಮಾಡುವ ಈ ಮೊಬೈಲ್ ತಾಯಿಯೊಬ್ಬಳಿಗೆ ವರದಾನವಾಗಿದೆ. ಮೊಬೈಲ್ ನಿಂದಲೇ ಮಗುವಿನ ಖಾಯಿಲೆ ಪತ್ತೆ ಮಾಡಿದ ತಾಯಿ, ಮಗುವಿನ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಮಗು ಮಲಗಿದ್ದಾಗ ಅದ್ರ ಕಣ್ಣುಗಳನ್ನು ಗಮನಿಸಿದ ತಾಯಿ, ಹೆಚ್ಚಿನ ಪರೀಕ್ಷೆಗೆ ಮೊಬೈಲ್ ಟಾರ್ಚ್ ಬಿಟ್ಟಿದ್ದಾಳೆ. ನಂತ್ರ ನಾನಾ ಪರೀಕ್ಷೆ ಮಾಡಿ, ಮಗುವಿನ ಜೀವ ತೆಗೆಯುತ್ತಿದ್ದ ಗಂಭೀರ ಖಾಯಿಲೆಯನ್ನು ಪತ್ತೆ ಮಾಡಿದ್ದಾಳೆ. 

ಘಟನೆ ನಡೆದಿರೋದು ಲಂಡನ್‌ (London) ನ ಕೆಂಟ್‌ನಲ್ಲಿ. ಇಲ್ಲಿ ವಾಸವಾಗಿರುವ 40 ವರ್ಷದ ಸಾರಾ ಹೆಡ್ಜಸ್ ತನ್ನ ಮೂರು ತಿಂಗಳ ಮಗುವಿಗೆ ಅಪರೂಪದ ಕ್ಯಾನ್ಸರ್ (Cancer) ಇರೋದನ್ನು ಮೊಬೈಲ್ ನಿಂದ ಪತ್ತೆ ಮಾಡಿದ್ದಾಳೆ. ಸಾರಾ ಮಗುವನ್ನು ಮಲಗಿಸಿ ಅಡುಗೆ ಮಾಡುತ್ತಿದ್ದಳು. ಈ ವೇಳೆ ಮಗುವಿನ ಕಣ್ಣಿನ ಮೇಲೆ ಆಕೆ ಗಮನ ಹೋಗಿದೆ. ಕಣ್ಣಿನಲ್ಲಿ ಬಿಳಿಯ ಹೊಳಪು ಕಾಣಿಸಿದೆ. ತಕ್ಷಣ ಸಾರಾ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಲೈಟ್ ಸ್ವಿಚ್ ಆನ್ ಮಾಡಿ ಸೂಕ್ಷ್ಮವಾಗಿ ನೋಡಿದ್ದಾಳೆ. ಕೆಲ ಸಮಯದ ನಂತ್ರ ಸ್ಮಾರ್ಟ್‌ಫೋನ್‌ನ  ಫ್ಲ್ಯಾಷ್ ಆನ್ ಮಾಡಿ ಕೆಲ ಫೋಟೋ ತೆಗೆದುಕೊಂಡಿದ್ದಾಳೆ. ಮಗನ ಕಣ್ಣಿನಲ್ಲಿ ಆಗ ಕಂಡಿದ್ದ ಬಿಳಿ ಹೊಳಪು ಕೆಲ ಕ್ಷಣದ ನಂತ್ರ ಕಾಣಿಸಲಿಲ್ಲ. ಹಾಗಾಗಿ ಸಾರಾ, ಮಗುವನ್ನು ಬೇರೆ ಬೇರೆ ರೂಮಿಗೆ ಕರೆದೊಯ್ದು ಅಲ್ಲಿ ಪರೀಕ್ಷೆ ಮಾಡಿದ್ದಾಳೆ. ಕೆಲ ಸಮಯದ ನಂತ್ರ ಮತ್ತೆ ಹೊಳಪು ಕಾಣಿಸಿದೆ. 

ಮದ್ವೆಯಾದ್ಮೇಲೆ ಬರೀ ಹೆಣ್ಮಕ್ಕಳಲ್ಲ, ಪುರುಷರೂ ಊದಿಕೊಳ್ಳೋದ್ಯಾಕೆ?

ಕಣ್ಣಿನ ಬಿಳಿ ಹೊಳಪಿನ ಬಗ್ಗೆ ಸಾರಾ ಇಂಟರ್ನೆಟ್ ನಲ್ಲಿ ಚೆಕ್ ಮಾಡಿದ್ದಾಳೆ. ಅಲ್ಲಿದ್ದ ವಿಷ್ಯ ನೋಡಿ ಆಕೆ ದಂಗಾಗಿದ್ದಾಳೆ. ತಕ್ಷಣ ವೈದ್ಯರನ್ನು ಭೇಟಿಯಾಗಿದ್ದಾಳೆ. ಎಲ್ಲ ಪರೀಕ್ಷೆ ಮಾಡಿದ ವೈದ್ಯರು, ಅದು ಅಪರೂಪವಾಗಿ ಕಾಡುವ ರೆಟಿನೊಬ್ಲಾಸ್ಟೊಮಾ ಕ್ಯಾನ್ಸರ್ ಎಂದಿದ್ದಾರೆ. ಇದ್ರಿಂದ ಮಗುವಿನ ದೃಷ್ಟಿ ಹೋಗುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದರು. ಸಾರಾ, ಮಗುವಿಗೆ ಕ್ಯಾನ್ಸರ್ ಚಿಕಿತ್ಸೆಯನ್ನು ತಕ್ಷಣ ಶುರು ಮಾಡಿದ್ದರು. ಏಳು ಕೀಮೋಥೆರಪಿ ನಂತ್ರ ಆಕೆ ಮಗು ಗುಣಮುಖವಾಗಿದೆ. ಕ್ಯಾನ್ಸರ್ ಗೆದ್ದು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

ರೆಟಿನೊಬ್ಲಾಸ್ಟೊಮಾ (Retinoblastoma) ಕ್ಯಾನ್ಸರ್ ಎಂದರೇನು? : ರೆಟಿನೊಬ್ಲಾಸ್ಟೊಮಾ ಕಣ್ಣಿನ ಕ್ಯಾನ್ಸರ್ ಆಗಿದೆ. ಇದು ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.  ಸಾಮಾನ್ಯವಾಗಿ 3 ವರ್ಷ ವಯಸ್ಸಿನ ಮೊದಲು ಹೆಚ್ಚಿನ ಮಟ್ಟದಲ್ಲಿ ಕಾಣಿಸುತ್ತದೆ.  5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಈ ಕ್ಯಾನ್ಸರ್ ವಿರಳವಾಗಿ ಬೆಳೆಯುತ್ತದೆ. ರೆಟಿನೋಬ್ಲಾಸ್ಟೊಮಾ ಕಣ್ಣಿನ ರೆಟಿನಾದಲ್ಲಿ ರೂಪುಗೊಳ್ಳುತ್ತದೆ. ರೆಟಿನಾವು ಕಣ್ಣಿನ ಹಿಂಭಾಗದಲ್ಲಿರುವ ನರ ಅಂಗಾಂಶದ ತೆಳುವಾದ ಪದರ. ರೆಟಿನಾದ ಜೀವಕೋಶಗಳು (Retina Cells) ಬೆಳಕು ಮತ್ತು ಬಣ್ಣವನ್ನು ಪತ್ತೆ ಮಾಡುತ್ತದೆ. ರೆಟಿನೊಬ್ಲಾಸ್ಟೊಮಾ ಒಂದು ಕಣ್ಣು  ಅಥವಾ ಎರಡೂ ಕಣ್ಣುಗಳ ಮೇಲೆ ಪರಿಣಾಮ ಬೀರಬಹುದು. ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು 250-300 ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ರೆಟಿನೊಬ್ಲಾಸ್ಟೊಮಾ ಆನುವಂಶಿಕವಾಗಿಯೂ ಬರಬಹುದು. 

ಹುಟ್ಟಿದ 5ನೇ ದಿನಕ್ಕೆ ಮಗುವಿಗೆ ಋತುಸ್ರಾವ…. ಏನಿದು ಸಮಸ್ಯೆ ತಿಳಿಯಿರಿ

ರೆಟಿನೊಬ್ಲಾಸ್ಟೊಮಾ ಹೊಂದಿರುವ ಮಕ್ಕಳಲ್ಲಿ  ಕ್ಯಾಮರಾ ಫ್ಲ್ಯಾಷ್ ಲೈಟ್ ಹಾಕಿದಾಗ ಕಣ್ಣಿನ ಬಣ್ಣ ಬಿಳಿಯಾಗಿರೋದನ್ನು ಕಾಣಬಹುದು. ಬೆಕ್ಕಿನ ಕಣ್ಣಿನಂತೆ ಇದು ಕಾಣುವುದಿದೆ.  ಮಗುವಿನ ದೃಷ್ಟಿಯಿಂದಲೂ ನೀವು ಇದನ್ನು ಪತ್ತೆ ಮಾಡಬಹುದು. ಸಾಮಾನ್ಯ ಮಗು ನೋಡಿದಂತೆ ಈ ಮಗು ನೋಡಲು ಸಾಧ್ಯವಿಲ್ಲ. ಮಗು ನೇರವಾಗಿ ಮುಂದೆ ನೋಡಿದಾಗ ಕಣ್ಣು ಹೊರಗೆ ಅಥವಾ ಒಳಮುಖವಾಗಿ ತಿರುಗಿದಂತೆ ಕಾಣುತ್ತದೆ. ಕಣ್ಣುಗಳು ಕೆಂಪಾಗುತ್ತವೆ. ತುರಿಕೆ ಕಾಣಿಸಿಕೊಳ್ಳುತ್ತದೆ. ಗೆಡ್ಡೆ ಬೆಳೆದಂತೆ ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಾಕರಿಕೆ ಅಥವಾ ವಾಂತಿ ಸಹ ಕಾಡುತ್ತದೆ. 

Latest Videos
Follow Us:
Download App:
  • android
  • ios