MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಹುಟ್ಟಿದ 5ನೇ ದಿನಕ್ಕೆ ಮಗುವಿಗೆ ಋತುಸ್ರಾವ…. ಏನಿದು ಸಮಸ್ಯೆ ತಿಳಿಯಿರಿ

ಹುಟ್ಟಿದ 5ನೇ ದಿನಕ್ಕೆ ಮಗುವಿಗೆ ಋತುಸ್ರಾವ…. ಏನಿದು ಸಮಸ್ಯೆ ತಿಳಿಯಿರಿ

ಚೀನಾದ ತಾಯಿಯೊಬ್ಬಳು ತನ್ನ 5 ದಿನದ ಮಗಳನ್ನು ವಿಚಿತ್ರ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ವೈದ್ಯರು ಕೂಡ ಮಗುವಿನ ಸ್ಥಿತಿ ನೋಡಿ ಗಾಬರಿಯಾಗಿದ್ದರು. ಆಸ್ಪತ್ರೆಗೆ ದಾಖಲಾಗಲು ಕಾರಣ ಏನು ಗೊತ್ತಾ? ಮಗುವಿಗೂ ಸಹ ಯುವತಿಯರಿಗೆ ಉಂಟಾಗುವಂತೆ ಪಿರಿಯಡ್ಸ್ ಆಗುತ್ತಿತ್ತು! 

2 Min read
Suvarna News
Published : Mar 01 2024, 12:41 PM IST
Share this Photo Gallery
  • FB
  • TW
  • Linkdin
  • Whatsapp
18

ನಮ್ಮ ದೇಹವು ಒಂದು ಯಂತ್ರವಿದ್ದಂತೆ. ಸೃಷ್ಟಿಕರ್ತ ಅಂದ್ರೆ ದೇವರು ಇದನ್ನು ವಿಶ್ವದ ಅತ್ಯಂತ ಸಂಕೀರ್ಣ ಯಂತ್ರವಾಗಿ ರಚಿಸಿದ್ದಾರೆ. ಈ ಯಂತ್ರವು ತುಂಬಾ ವಿಚಿತ್ರವಾಗಿದೆ, ಇದು ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಅನೇಕ ಬಾರಿ ದೇಹದಲ್ಲಿ ನಡೆಯುವ ಘಟನೆಗಳೇ ನಮಗೆ ಅಚ್ಚರಿಯನ್ನುಂಟು ಮಾಡುತ್ತೆ.
 

28

ಮಹಿಳೆಯರ ದೇಹವನ್ನೇ ತೆಗೆದುಕೊಳ್ಳಿ. 12-13 ವರ್ಷ ವಯಸ್ಸಿನಲ್ಲಿ, ಹುಡುಗಿಯರು ಋತುಸ್ರಾವವನ್ನು ಪ್ರಾರಂಭಿಸುತ್ತಾರೆ. ಪ್ರೌಡಾವಸ್ಥೆಗೆ ಬಂದಾಗ ಪಿರಿಯಡ್ಸ್ ಆಗೋದು ಜಗದ ನಿಯಮ. ಆದರೆ 5 ದಿನಗಳ ಮಗುವಿಗೆ ಋತುಚಕ್ರ (periods)ಆಗುತ್ತದೆ  ಅನ್ನೋದನ್ನು ನೀವು ಎಂದಾದರೂ ಕೇಳಿದ್ದೀರಾ? 
 

38

ಹೌದು ಇಂತಹ ಒಂದು ವಿಚಿತ್ರ ಘಟನೆ ಕೆಲವು ವರ್ಷಗಳ ಹಿಂದೆ ಚೀನಾದಲ್ಲಿ ನಡೆದಿದೆ. ಜನರು ಇನ್ನೂ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಉಲ್ಲೇಖಿಸುತ್ತಿರುವುದು ಕಂಡುಬರುತ್ತದೆ. ಈಗಷ್ಟೇ ಹೆಣ್ಣುಮಗುವಿಗೆ ತಂದೆ ತಾಯಿಯಾದವರಿಗೆ ಅರಿವು ಮೂಡಿಸುವ ಸಲುವಾಗಿ ಈ ಘಟನೆ ಬಗ್ಗೆ ಮತ್ತೆ ಇಲ್ಲಿ ವರದಿ ಮಾಡ್ತಿದ್ದೇವೆ. 
 

48

2019 ರಲ್ಲಿ, ಚೀನಾದ (China) ಝೆಜಿಯಾಂಗ್ ಪ್ರಾಂತ್ಯದಲ್ಲಿ ತಾಯಿಯೊಬ್ಬಳು ತನ್ನ 5 ದಿನದ ಮಗಳನ್ನು ಆಸ್ಪತ್ರೆಗೆ ದಾಖಲಿಸಿದಾಗ ಭಾರಿ ಕೋಲಾಹಲ ಎದ್ದಿತ್ತು. ಆಸ್ಪತ್ರೆಗೆ ದಾಖಲಾಗಲು ಕಾರಣವೆಂದರೆ ಆ 5 ದಿನಗಳ ಮಗುವಿಗೆ ಯುವತಿಯರಿಗೆ ಉಂಟಾಗುವಂತೆ ಋತುಚಕ್ರ ಪ್ರಾರಂಭವಾಗಿತ್ತು. ಮಗುವಿನ ದೇಹದಿಂದ ರಕ್ತ (bleeding)  ಹೊರಬರುತ್ತಿರುವುದನ್ನು ನೋಡಿದ ತಾಯಿ ತುಂಬಾ ಭಯಭೀತಳಾಗಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. 
 

58

ವೈದ್ಯರು ಬಾಲಕಿಯ ಪ್ರಕರಣವನ್ನು ಕೇಳಿದಾಗ, ಅವರು ಸಹ ಶಾಕ್ ಆಗಿದ್ದರು, ಆದರೆ ಅವರು ಪರೀಕ್ಷಿಸಿದಾಗ, ಈ ರಕ್ತವು ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ಕಂಡುಬಂದಿದೆ. ಹಾಗಿದ್ರೆ ಏನಿದು ಸಮಸ್ಯೆ? ಪುಟಾಣಿ ಮಕ್ಕಳಲ್ಲಿ ಯಾಕೆ ಈ ರೀತಿಯಾಗುತ್ತದೆ? ಅನ್ನೋದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ. 
 

68

ಈ ಸ್ಥಿತಿ ಏನು?
ಈ ಸ್ಥಿತಿಯನ್ನು ನವಜಾತ ಋತುಸ್ರಾವ (Neonatal Menstruation) ಎಂದು ಕರೆಯಲಾಗುತ್ತದೆ. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಗರ್ಭಧಾರಣೆಯ ಕೊನೆಯ ದಿನಗಳಲ್ಲಿ, ಮಹಿಳೆಯರ ದೇಹದಲ್ಲಿ ಕಂಡುಬರುವ ಪ್ರೊಜೆಸ್ಟರಾನ್ ಹಾರ್ಮೋನ್(progesterone hormone) ಭ್ರೂಣದ ದೇಹವನ್ನು ಪ್ರವೇಶಿಸುತ್ತದೆ. ಈ ಹಾರ್ಮೋನ್ ರಕ್ತವಾಗುತ್ತದೆ ಮತ್ತು ಮಗುವಿನ ಖಾಸಗಿ ಭಾಗದಿಂದ ಹೊರಬರುತ್ತದೆ. ಇದು ಹೆಚ್ಚಾಗಿ ಹೆಣ್ಣು ಭ್ರೂಣದಲ್ಲಿ ಸಂಭವಿಸುತ್ತದೆ. ಜನರು ಇದನ್ನು ಮುಟ್ಟು ಎಂದು ಅರ್ಥಮಾಡಿಕೊಳ್ಳುತ್ತಾರೆ ಆದರೆ ಅದು ಸಂಪೂರ್ಣವಾಗಿ ವಿಭಿನ್ನವಾಗಿದೆ.

78

ಇದು ಸಾಮಾನ್ಯವೇ?
ಮಕ್ಕಳಲ್ಲಿ, ಈ ಸ್ಥಿತಿಯು ಕೇವಲ 1 ವಾರ ಮಾತ್ರ ಸಂಭವಿಸುತ್ತದೆ. ಹಾರ್ಮೋನ್ ಬಿಡುಗಡೆಯಾದಾಗ, ರಕ್ತಸ್ರಾವ ನಿಲ್ಲುತ್ತದೆ. ಈ ಕಾರಣಕ್ಕಾಗಿ, ಹೊಸ ಪೋಷಕರು ಮಕ್ಕಳಿಗೆ ಸಂಬಂಧಿಸಿದ ಈ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಸೀಟರ್ ಚಿಲ್ಡ್ರನ್ಸ್ ವೆಬ್ಸೈಟ್ ಪ್ರಕಾರ, ತಾಯಿಯ ಈಸ್ಟ್ರೊಜೆನ್ ಮಟ್ಟವು (estrogen level) ಕಡಿಮೆಯಾಗುವುದರಿಂದ ಇದು ಸಂಭವಿಸುತ್ತದೆ. ಮಕ್ಕಳನ್ನು ಹೊರತುಪಡಿಸಿ, ಪ್ರೌಢಾವಸ್ಥೆಗೆ ಮುಂಚಿತವಾಗಿ ಹುಡುಗಿಯರ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗುತ್ತಿದ್ದರೆ, ಅದನ್ನು ಸಾಮಾನ್ಯವೆಂದು ಪರಿಗಣಿಸಲಾಗುವುದಿಲ್ಲ. ಈ ಸ್ಥಿತಿಯ ಬಗ್ಗೆ ತಿಳಿದುಕೊಂಡ್ರೆ ಒಳ್ಳೆಯದು. 

88

ಬೇರೆ ಬೇರೆ ಕಾರಣಗಳು ಏನೇ ಇರಲಿ,  ನವಜಾತ ಶಿಶುವಿಗೆ ಋತುಸ್ರಾವವಾಗಲು ಶುರುವಾದರೆ ಬೇಗ ಅಲರ್ಟ್ ಆಗಿ ವೈದ್ಯರ ಬಳಿ ಕರೆದುಕೊಂಡು ಹೋಗುವುದ ಮರೀಬೇಡಿ.

About the Author

SN
Suvarna News
ಆರೋಗ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved