ಬೆಂಗಳೂರಿನ ಹವಾಮಾನ ವೈಪರೀತ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ನಟಿ ಕಾವ್ಯಾ ಶಾಸ್ತ್ರಿ, ಮಹಿಳೆಯರಿಗೆ ಪುರುಷರಿಗಿಂತ ಮಸಲ್ ಮಾಸ್ ಕಡಿಮೆ, ಬಾಡಿ ಫ್ಯಾಟ್ ಹೆಚ್ಚು, ಮೆಟಬಾಲಿಕ್ ರೇಟ್ ಕಡಿಮೆ ಇರುವುದರಿಂದ ಚಳಿ ಹೆಚ್ಚಾಗುತ್ತದೆ ಎಂದಿದ್ದಾರೆ. ಹಾರ್ಮೋನುಗಳ ಬದಲಾವಣೆಯೂ ಕಾರಣ. ಪುರುಷರಿಗೆ 22-24 ಡಿಗ್ರಿ C, ಮಹಿಳೆಯರಿಗೆ 24-36 ಡಿಗ್ರಿ C ದೇಹದ ಉಷ್ಣಾಂಶ ಬೇಕಾಗುತ್ತದೆ. ಹೀಗಾಗಿ, ಮಹಿಳೆಯರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ. (50 ಪದಗಳು)
ಇಷ್ಟು ದಿನ ಬೆಂಗಳೂರಿನಲ್ಲ ಇರುವ ಐಟಿ ಸಿಟಿ, ಮಾಲ್, ಪಾರ್ಕ್ ಮತ್ತು ಐಷಾರಾಮಿ ಮನೆಗಳ ಬಗ್ಗೆ ಮಾತನಾಡುತ್ತಿದ್ದ ಜನರು ಈಗ ಹವಮಾನದ ಬಗ್ಗೆ ದೊಡ್ಡ ಚರ್ಚೆ ಶುರು ಮಾಡಿದ್ದಾರೆ. ಬಳಗ್ಗೆ ಬಿಸಿಲು ಇದ್ದರೆ ರಾತ್ರಿ ಮಳೆ ಬರುತ್ತದೆ, ಇದು ಬೇಸಿಗೆ ಅಂದುಕೊಂಡರೆ ಮಳೆ ಬರುತ್ತದೆ, ಮಳೆಗಾಲ ಇದ್ದಾಗ ಸಿಕ್ಕಾಪಟ್ಟೆ ಬಿಸಿಲು ಇರುತ್ತದೆ. ಬೆಳ್ಳಗ್ಗೆ ಎದ್ದು ಹೊರ ಬಂದು ನೋಡಿದೆ ಯಾವ್ದೋ ಊಟಿ, ಕೊಡೆಕೆನಾಲ್ ಅಥವಾ ಮಡಿಕೇರಿಯಲ್ಲಿ ಇದ್ದೀವಿ ಅನಿಸುತ್ತದೆ..ಅಷ್ಟು ಮಂಜು ಇರುತ್ತದೆ. ಈ ರೀತಿ ಹವಮಾನ ಬದಲಾಗುತ್ತಿರುವಾಗ ಹೆಣ್ಣುಮಕ್ಕಳು ಚಳಿ ಶೆಕೆ ಅಂತ ಹೇಳಿದ್ರೆ ಗಂಡು ಮಕ್ಕಳು ಆಶ್ಚರ್ಯದಲ್ಲಿ ನೋಡುತ್ತಾರೆ. ಏನಿದು ವಿಚಿತ್ರ ಅನಿಸಬಹುದು ಆದರೆ ಸತ್ಯ ಏನು ಎಂದು ನಟಿ ಕಾವ್ಯಾ ಶಾಸ್ತ್ರಿ ರಿವೀಲ್ ಮಾಡಿದ್ದಾರೆ.
'ಹೆಣ್ಣುಮಕ್ಕಳಿಗೆ ಮಸಲ್ ಮಾಸ್ ಕಡಿಮೆ ಇರುತ್ತದೆ ಹಾಗೆ ಬಾಡಿ ಫ್ಯಾಟ್ ಜಾಸ್ತಿ ಇರುತ್ತದೆ. ಮಸಲ್ ಮಾಸ್ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಿಸುತ್ತದೆ. ಗಂಡು ಮಕ್ಕಳಿಗೆ ಮಸಲ್ ಮಾಸ್ ಜಾಸ್ತಿ ಇರುವುದರಿಂದ ಅವರಿಗೆ ಶಕೆ ಜಾಸ್ತಿ ಆಗುತ್ತದೆ ಚಳಿ ಕಡಿಮೆ ಆಗುತ್ತದೆ. ಹೆಣ್ಣು ಮಕ್ಕಳ ಮೆಟಬಾಲಿಕ್ ರೇಟ್ ಬಹಳ ಕಡಿಮೆ ಇರುತ್ತದೆ, ಗಂಡು ಮಕ್ಕಳಿಗೆ ಕಂಪೇರ್ ಮಾಡಿದ್ದರೆ ಜಾಸ್ತಿನೇ ಕಡಿಮೆ ಇರುತ್ತದೆ. ಇದು ಕೂಡ ತುಂಬಾ ಚಳಿ ಮಾಡಲು ಕಾರಣವಾಗುತ್ತದೆ. ಹೆಣ್ಣುಮಕ್ಕಳಲ್ಲಿ ಬಹಳ ಹಾರ್ಮೋನ್ ಬದಲಾವಣೆ ಆಗುತ್ತದೆ ಅದರಲ್ಲೂ ಪೀರಿಯಡ್ಸ್ ಸಮಯ, ಓವಿಲೇಷನ್ ಸಮಯ, ಪ್ರತಿಯೊಂದು ಸೈಕಲ್, ಪ್ರತಿಯೊಂದು ವಯಸ್ಸಿಗೆ ಒಂದೊಂದು ರೀತಿ ಫೀಲ್ ಆಗುತ್ತದೆ. ಹೀಗಾಗಿ ದಿಢೀರ್ ಅಂತ ಶಕೆ ಆಗುವುದು ಇದ್ದಕ್ಕಿದ್ದಂತೆ ಚಳಿ ಆಗುತ್ತದೆ' ಎಂದು ವಿಡಿಯೋದಲ್ಲಿ ಕಾವ್ಯಾ ಶಾಸ್ತ್ರಿ ಮಾತನಾಡಿದ್ದಾರೆ.
ಕಿಂಡರ್ ಜಾಯ್ ಚಾಕೋಲೇಟ್ ತಿನ್ನುವವರಿಗೆ ಅಂಟಿಕೊಳ್ಳುತ್ತಿದೆ ಈ ಬ್ಯಾಕ್ಟೀರಿಯಾ; ಪ್ರಾಣಾಪಾಯದಿಂದ ದೂರವಾಗಿದೆ!
'ಮನುಷ್ಯನ ದೇಹಕ್ಕೆ ಹೊಂದುವಷ್ಟು ಸುತ್ತ ಮುತ್ತಲು ಇದ್ದರೆ ಅದನ್ನು ಟೆಂಪರೇಚರ್ ಎನ್ನುತ್ತಾರೆ..ಗಂಡು ಮಕ್ಕಳಿಗೆ 22 ಡಿಗ್ರಿ- 24 ಡಿಗ್ರಿ C ಆಗಿದ್ದರೆ ಹೆಣ್ಣುಮಕ್ಕಳಿಗೆ 24 ಡಿಗ್ರಿ ಯಿಂದ 36 ಡಿಗ್ರಿ C ಆಗಿರುತ್ತದೆ. ರೂಮ್ ಟೆಂಪರೇಚರ್‌ಗೆ ಎಸಿ ಆನ್ ಮಾಡಿಟ್ಟಿದ್ದರೂ ಕೂಡ ಚಳಿ ಚಳಿ ಎನ್ನುತ್ತಾರೆ ಹೆಣ್ಣುಮಕ್ಕಳು' ಎಂದು ಕಾವ್ಯಾ ಹೇಳಿದ್ದಾರೆ. ಸಾಕ್ಸ್ ಹಾಕೋಂಡು, ಜಾಕೆಟ್ ಹಾಕೋಂಡು ಮೂರ್ನಾಲ್ಕು ಬೆಡ್ ಶೀಟ್ ಹೊದಿಕೊಂಡಿದ್ದರು ಹೆಣ್ಣುಮಕ್ಕಳನ್ನು ನೋಡಿ ಪ್ರಶ್ನೆ ಮಾಡಬೇಕು. ಬದಲಿಗೆ ಅವರ ಪರಿಸ್ಥಿತಿ ಅರ್ಥ ಮಾಡಿಕೊಂಡು ಫ್ಯಾನ್ ಅಥವಾ ಎಸಿಯನ್ನು ಆಫ್ ಅಥವಾ ಕಡಿಮೆ ಮಾಡಿ. ಇನ್ನು ಸುಮ್ಮನೆ ನಿಂತಿದ್ದರೂ ಬೆವರುವ ಗಂಡು ಮಕ್ಕಳು ರೇಗಿಸಬೇಡಿ..ಅವರಿಗೆ ಟವಲ್ ಅಥವಾ ನೀರು ಕೊಟ್ಟು ಸಹಾಯ ಮಾಡಿ. ನಿಮಗೆ ಆಗುವುದು ಕಷ್ಟನೇ ಅವರಿಗೆ ಆಗುವುದು ಕಷ್ಟನೇ.
ಉಪ್ಪು ಮತ್ತು ಹುಣಸೆ ಹಣ್ಣು ಪ್ಲಾಸ್ಟಿಕ್ ಡಬ್ಬದಲ್ಲಿದ್ದರೆ ಮನೆಗೆ ಹಣ ಬರಲ್ಲ; ಭಯವಾದರೆ ಇದನ್ನು ಪಾಲಿಸಿ
