ಉಪ್ಪು ಮತ್ತು ಹುಣಸೆಹಣ್ಣನ್ನು ಅಡುಗೆಮನೆಯಲ್ಲಿ ಪ್ಲಾಸ್ಟಿಕ್ ಡಬ್ಬಗಳಲ್ಲಿ ಇಡುವುದರಿಂದ ಮನೆಯಲ್ಲಿ ಹಣ ಉಳಿಯುವುದಿಲ್ಲ. ಲಕ್ಷ್ಮೀ ದೇವಿಗೆ ಉಪ್ಪು ಪ್ರಿಯವಾದ್ದರಿಂದ, ಪ್ಲಾಸ್ಟಿಕ್ ಡಬ್ಬಿಯಲ್ಲಿ ಉಪ್ಪಿಟ್ಟರೆ ಅನಾರೋಗ್ಯ, ಕಿರಿಕಿರಿ, ಗಂಡ-ಹೆಂಡತಿ ಜಗಳ ಉಂಟಾಗುತ್ತದೆ. ಪಿಂಗಾಣಿ ಅಥವಾ ಗಾಜಿನ ಡಬ್ಬಗಳಲ್ಲಿ ಇಟ್ಟರೆ ದಾಂಪತ್ಯದಲ್ಲಿನ ಕಲಹ ದೂರವಾಗಿ, ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಡಬ್ಬಗಳನ್ನು ಮುಚ್ಚಿಟ್ಟರೆ ನೆಗೆಟಿವ್ ಎನರ್ಜಿ ಬರುವುದಿಲ್ಲ.
ಪ್ರತಿಯೊಬ್ಬರು ಪ್ರತಿ ದಿನ ಕಷ್ಟ ಪಟ್ಟ ದುಡಿಯುವುದೇ ಹಣ್ಣಕ್ಕಾಗಿ. ಇಂದು ಕಷ್ಟ ಪಟ್ಟರೆ ಮುಂದೆ ಸುಖವಾಗಿ ಬದುಕಬಹುದು ಎಂದು ಹಣ ಉಳಿಸುವ ಯೋಜನೆಗಳಿಕೆ ಕೈ ಹಾಕುತ್ತೀವಿ. ಒಂದೊಂದು ರುಪಾಯಿ ಉಳಿದರೂ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಯೋಚನೆ ಮಾಡುತ್ತೀರಿ. ಆದರೆ ನೀವು ಮನೆಯಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಹಣ ಉಳಿಸುವುದು ಎಷ್ಟು ಕಷ್ಟ? ಹಣ ಇದ್ದರೂ ಸುಮ್ಮನೆ ಖರ್ಚು ಆಗುವುದು ಯಾಕೆ? ನಿಮ್ಮ ಅಡುಗೆ ಮನೆಯಲ್ಲಿ ಗೊತ್ತಿಲ್ಲದೆ ಮಾಡುವ ತಪ್ಪಿಂದ ಏನಾಗುತ್ತದೆ ಎಂದು ಇಲ್ಲಿ ರಿವೀಲ್ ಮಾಡಿದ್ದೀವಿ ನೋಡಿ.
ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸುವುದು ಉಪ್ಪು ಮತ್ತು ಹುಣಸೆ ಹಣ್ಣು. ಉಪ್ಪು ಇಲ್ಲದೆ ಅಡುಗೆ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಏನೇ ನೆಗೆಟಿವ್ ಎನರ್ಜಿ ಅಂಟಿಕೊಂಡಿದ್ದರೂ ಅದನ್ನು ದೂರ ಮಾಡುವ ಶಕ್ತಿ ಉಪ್ಪಿಗೆ ಇದೆ. ಆದರೆ ಇದೇ ಉಪ್ಪು ಮತ್ತು ಹುಣಸೆ ಹಣ್ಣಿನಿಂದ ನಿಮ್ಮ ಹಣ ಕಳೆದುಕೊಳ್ಳುವ ಪರಿಸ್ಥಿತಿ ಕೂಡ ಎದುರಾಗುತ್ತದೆ. ಅಡುಗೆ ಮನೆಯಲ್ಲಿ ಸಾಮಾಗ್ರಿ ತುಂಬಿಸಲು ಯಾರು ಹೊಸ ಪಾತ್ರ ಖರೀದಿ ಮಾಡುವುದು ಎಂದು ಅದೆಷ್ಟೋ ಮಂದಿ ಪಾರ್ಸಲ್ ಡಬ್ಬಗಳಲ್ಲಿ ಅದು ಇದು ತುಂಬಿಸಿ ಇಡುತ್ತಾರೆ. ಆದರೆ ನಿಮ್ಮಗೆ ಗೊತ್ತಾ......ಉಪ್ಪು ಮತ್ತು ಹುಣಸೆ ಹಣ್ಣನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಇಡುವುದರಿಂದ ಖಂಡಿತಾ ಮನೆಯಲ್ಲಿ ಹಣ ಉಳಿಯುವುದಿಲ್ಲ.
ಕಿಂಡರ್ ಜಾಯ್ ಚಾಕೋಲೇಟ್ ತಿನ್ನುವವರಿಗೆ ಅಂಟಿಕೊಳ್ಳುತ್ತಿದೆ ಈ ಬ್ಯಾಕ್ಟೀರಿಯಾ; ಪ್ರಾಣಾಪಾಯದಿಂದ ದೂರವಾಗಿದೆ!
ಹೌದು! ತಾಯಿ ಲಕ್ಷ್ಮಿ ದೇವಿಗೆ ಉಪ್ಪು ತುಂಬಾನೇ ಇಷ್ಟ. ಪ್ಲಾಸ್ಟಿಕ್ ಡಬ್ಬದಲ್ಲಿ ಉಪ್ಪು ಇಡುವುದರಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಮನೆಯಲ್ಲಿ ಕಿರಿಕಿರಿ ಶುರುವಾಗುತ್ತದೆ, ಗಂಡ ಹೆಂಡತಿ ನಡುವೆ ಜಗಳ ಶುರುವಾಗುತ್ತದೆ ಅಲ್ಲದೆ ಯಶಸ್ಸು ಖಂಡಿತಾ ಸಿಗುವುದಿಲ್ಲ. ಹೀಗಾಗಿ ಉಣಸೆ ಹಣ್ಣು ಮತ್ತು ಉಪ್ಪನ್ನು ಪಿಂಗಾಣಿ ಅಥವಾ ಗಾಜಿನ ಡಬ್ಬದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ದಾಂಪತ್ಯದಲ್ಲಿ ಕಲಹ ದೂರವಾಗುತ್ತದೆ, ಹಣ ಕಾಸಿನ ಸಮಸ್ಯೆ ನಿವಾರಣೆ ಆಗುತ್ತದೆ ಹಾಗೂ ಸಂಸಾರದಲ್ಲಿ ಹೊಂದಾಣಿಕೆ ಚೆನ್ನಾಗಿರುತ್ತದೆ. ಉಣಸೆ ಹಣ್ಣು ಮತ್ತು ಉಪ್ಪು ಇರುವ ಡಬ್ಬಗಳು ಸದಾ ಮುಚ್ಚಿರಬೇಕು ಇದರಿಂದ ಯಾವುದೇ ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುವುದಿಲ್ಲ, ನೆಗೆಟಿವ್ ಎನರ್ಜಿ ಹತ್ತಿರನೂ ಬರುವುದಿಲ್ಲ. ವಾಸ್ತು ದೋಷನ್ನು ದೂರ ಮಾಡಿ ಲಕ್ಷ್ಮಿ ಸದಾ ನೆಲೆಸಿರುತ್ತಾರೆ.
ಆಂಕರ್ ಅನುಪಮಾ ಗೌಡ ಅರೆಸ್ಟ್?; ತಲೆಗೆ ಹುಳ ಬಿಟ್ಟುಕೊಂಡ ಅಭಿಮಾನಿಗಳು
