ಕಿಂಡರ್ ಜಾಯ್ ಚಾಕೋಲೇಟ್ ಮಕ್ಕಳಿಗೆ ಇಷ್ಟವಾದರೂ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಟಿ ಕಾವ್ಯಾ ಹೇಳಿದ್ದಾರೆ. WHO ವರದಿಯ ಪ್ರಕಾರ, ಇದನ್ನು ಸೇವಿಸಿದ ಮಕ್ಕಳಿಗೆ ಸಾಲ್ಮೊನೆಲ್ಲಾ ರೋಗ ಬರುವ ಸಾಧ್ಯತೆ ಇದೆ. ಇದರಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ರೋಗ ನಿರೋಧಕ ಶಕ್ತಿ ಕುಂದುತ್ತದೆ. ಅಲ್ಲದೆ, ಇದರಲ್ಲಿರುವ ಪಾಮ್ ಎಣ್ಣೆ ಆರೋಗ್ಯಕ್ಕೆ ಹಾನಿಕಾರಕ ಎಂದು ಅವರು ಎಚ್ಚರಿಸಿದ್ದಾರೆ.
ಕಿಂಡರ್ ಜಾಯ್ ಜಾಕೋಲೇಟ್ ಮಕ್ಕಳಿಗೆ ತುಂಬಾನೇ ಇಷ್ಟವಾಗುತ್ತದೆ. ಹೊರಗಿನಿಂದ ನೋಡಲು ಮೊಟ್ಟೆ ಶೇಪ್‌ನಲ್ಲಿ ಇರುತ್ತದೆ. ಓಪನ್ ಮಾಡಿದಾಗ ಎರಡು ಭಾಗಗಳಾಗಿ ತೆರೆದುಕೊಳ್ಳುತ್ತದೆ. ಒಂದು ಭಾಗದಲ್ಲಿ ಚಾಕೋಲೇಟ್ ಮತ್ತೊಂದು ಭಾಗದಲ್ಲಿ ಸಣ್ಣದೊಂದು ಗೊಂಬೆ ಇರುತ್ತದೆ. ವಿಶೇಷ ಏನೆಂದರೆ ಕಿಂಡರ್ ಜಾಯ್ ಬಾಯ್ಸ್ ಚಾಲೋಕೇಟ್ ಮತ್ತು ಕಿಂಡರ್ ಜಾಯ್ ಗರ್ಲ್ಸ್ ಚಾಕೋಲೇಟ್ ಸಿಗುತ್ತದೆ. ಭಾರತದಲ್ಲಿ ಸಿಗುವ ಚಾಕೋಲೇಟ್‌ನಲ್ಲಿ ಇಲ್ಲಿನ ಕಾರ್ಟೂನ್‌ಗಳ ಗೊಂಬೆ ಇರುತ್ತದೆ, ವಿದೇಶದಲ್ಲಿ ಸಿಗುವ ಚಾಕ್ಲೆಟ್‌ನಲ್ಲಿ ಅಲ್ಲಿದ ಗೊಂಬೆಗಳಲ್ಲಿ ಸಿಗುತ್ತದೆ. ಯಾರೇ ವಿದೇಶಕ್ಕೆ ಹೋಗಿ ಬಂದರೂ ಈ ಚಾಕ್ಲೆಟ್ ತರಲು ನೆನಪಿಸುತ್ತಾರೆ. ಆದರೆ ಈ ಚಾಕೋಲೇಟ್ ತಿನ್ನುವುದು ಒಳ್ಳೆಯದಾ? ಮಕ್ಕಳ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ನಟಿ ಕಾವ್ಯಾ ತಿಳಿಸಿದ್ದಾರೆ.
'ಕಿಂಡರ್ ಜಾಯ್ ಮಕ್ಕಳು ಸಿಕ್ಕಾಪಟ್ಟೆ ಇಷ್ಟ ಪಡುವ ಚಾಕೋಲೇಟ್. WHO ಒಂದು ಅರ್ಟಿಕಲ್‌ನ ಪಬ್ಲಿಷ್ ಮಾಡಿದೆ. ಅದರ ಪ್ರಕಾರ ಈ ಚಾಕೋಲೇಟ್ ಸೇವಿಸುವ ಮಕ್ಕಳು ಸಾಲ್ಮೊನೆಲ್ಲಾ ಕಾಯಿಲೆಯಿಂದ ಬಳಲುವ ಸಾಧ್ಯತೆ ತುಂಬಾ ಇದೆ. 100 ಮಕ್ಕಳಲ್ಲಿ 89 ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಎದುರಾಗಿದೆ. 10 ವರ್ಷದ ಕೆಳಗೆ ಇರುವ ಮಕ್ಕಳಿಗೆ ಇದು ತುಂಬಾ ಮಾರಕವಾಗುತ್ತದೆ ಎನ್ನಲಾಗುತ್ತಿದೆ. ಇನ್ನು ಉಳಿದವರಲ್ಲಿ ಮೈಲ್ಡ್ ಇನ್‌ಫೆಕ್ಷನ್ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಉಂಟು ಮಾಡುವ ಕಾಯಿಲೆಯಿಂದ ಡೀ-ಹೈಡ್ರೆಷನ್, ಡಯೇರಿಯಾ, ಹೊಟ್ಟೆ ನೋವು ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಮಕ್ಕಳಲ್ಲಿ ಕಂಡು ಬಂದರೆ ಅದು ಆಂಟಿ ಬಯಾಟಿಕ್ ರೆಸಿಸ್ಟೆಂಟ್ ಆಗುತ್ತದೆ. ಹೀಗಾಗಿ ಅಷ್ಟೆಲೋ ಸಲ ಮಕ್ಕಳ ರೋಗ ನಿರೋಧಕ ಶಕ್ತಿ ತಾನಾಗೆ ಕಡಿಮೆ ಆಗುತ್ತದೆ ಹಾಗೂ ತೆಗೆದುಕೊಳ್ಳುವ ಮಾತ್ರೆ ಕೂಡ ಸರಿಯಾಗಿ ವರ್ಕ್ ಆಗುವುದಿಲ್ಲ ಎನ್ನಲಾಗುತ್ತದೆ' ಎಂದು ನಟಿ ಕಾವ್ಯಾ ಶಾಸ್ತ್ರಿ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಆಂಕರ್ ಅನುಪಮಾ ಗೌಡ ಅರೆಸ್ಟ್?; ತಲೆಗೆ ಹುಳ ಬಿಟ್ಟುಕೊಂಡ ಅಭಿಮಾನಿಗಳು
'ಕಿಂಡರ್ ಜಾಯ್‌ನಲ್ಲಿ ಬಳಸಿರುವ ಇಂಗ್ರೀಡಿಯಂಟ್ ನೋಡದರೆ ಕೇವಲ 10 ರಿಂದ 12% ಅಷ್ಟೇ ಚಾಕೋಲೇಟ್ ಹಾಕಬಹುದು ಆದರೆ ಹೆಚ್ಚಾಗಿ ಸಕ್ಕರೆಯನ್ನು ಬಳಸುತ್ತಾರೆ. ಇದರಿಂದ ಮಕ್ಕಳ ಕಾಂಪಿಟೇಟಿಕ್ ಸ್ಕಿಲ್ ಕಡಿಮೆ ಆಗುತ್ತದೆ. ಹೆಚ್ಚಾಗಿ ಹಠ ಮಾಡುವುದು, ಕಾಯಿಲೆ ಬೀಳುವುದು, ಹಲ್ಲು ಹಾಳಾಗುವುದು, ರಚ್ಚೆ ಹಿಡಿಯುವುದು, ನಿದ್ರಾಹೀನತೆ ಹಾಗೂ ಓಬೇಸಿಟಿಗೆ ಕಾರಣವಾಗುತ್ತದೆ. ಚಾಕೋಲೇಟ್‌ಗಳು ಸ್ಮೂತ್ ಆಗಬೇಕು ಅಂದ್ರೆ ಹೆಚ್ಚಾಗಿ ಫ್ಯಾಟ್ ಬಳಸಬೇಕು. ನಾವು ಕೊಡುತ್ತಿರುವ ಬೆಲೆಗೆ ಒಳ್ಳೆಯ ಫ್ಯಾಟ್ ಖರೀದಿಸಲು ಆಗುವುದಿಲ್ಲ. ಹೀಗಾಗಿ ಅದಕ್ಕೆ ಪಾಮ್ ಎಣ್ಣೆ ಬಳಸುತ್ತಾರೆ. ಪಾಮ್ ಎಣ್ಣೆ ದೇಹಕ್ಕೆ ಎಷ್ಟು ಮಾರಕ ಎಂದು ನಾನು ಹೇಳುವ ಅಗತ್ಯವೇ ಇಲ್ಲ ಬಿಡಿ' ಎಂದು ಕಾವ್ಯಾ ಶಾಸ್ತ್ರಿ ಹೇಳಿದ್ದಾರೆ.
ತಿಂದು ಬಿಸಾಡಿರುವ ಬಾಳೆಹಣ್ಣು ಸಿಪ್ಪೆಯನ್ನು ಮುಖಕ್ಕೆ ಅಂಟಿಸಿಕೊಂಡ ರೇಶ್ಮಾ ಆಂಟಿ; ನೆಟ್ಟಿಗರಿಂದ ಪೋಲಿ ಕಾಮೆಂಟ್ಸ್
