ಎಂಆರ್‌ಐ ಸ್ಕ್ಯಾನ್ ದೇಹದ ಒಳಭಾಗದ ಚಿತ್ರಗಳನ್ನು ರಚಿಸಲು ಆಯಸ್ಕಾಂತ ಮತ್ತು ರೇಡಿಯೋ ತರಂಗಗಳನ್ನು ಬಳಸುತ್ತದೆ. ಸೀಮಿತ ಜಾಗ ಮತ್ತು ಶಬ್ದದಿಂದ ಕೆಲವರಿಗೆ ಆತಂಕ ಉಂಟಾಗಬಹುದು. ಸ್ಕ್ಯಾನ್‌ಗೆ ಮೊದಲು ಲೋಹದ ವಸ್ತುಗಳನ್ನು ತೆಗೆಯಬೇಕು. ಭಯ/ಆತಂಕವಿದ್ದಲ್ಲಿ ರೇಡಿಯೋಗ್ರಾಫರ್‌ ಜೊತೆ ಚರ್ಚಿಸಿ. ಸ್ಕ್ಯಾನ್ ನಂತರ ವಿಶ್ರಾಂತಿ ಪಡೆಯುವುದು ಸೂಕ್ತ.

ದೇಹದ ಒಳ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದಾಗ ವೈದ್ಯರು ಎಂಆರ್ ಐ (MRI) ಸಲಹೆ ನೀಡ್ತಾರೆ. ಎಂಆರ್ ಐ ಅಂದ್ರೆ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ ಸ್ಕ್ಯಾನ್ (Magnetic resonance imaging scan). ಇದು ದೇಹದೊಳಗಿನ ಚಿತ್ರವನ್ನು ನಮಗೆ ನೀಡುತ್ತೆ. ಇದನ್ನು ಬಳಸಿಕೊಂಡು ನಾವು ಗಂಭೀರ ಕಾಯಿಲೆ ಪತ್ತೆ ಮಾಡ್ಬುಹುದು. ದೇಹದೊಳಗೆ ಏನಾಗಿದೆ ಎಂಬುದನ್ನು ಪತ್ತೆ ಮಾಡೋಕೆ ರೇಡಿಯೋ ತರಂಗಗಳು ಮತ್ತು ಆಯಸ್ಕಾಂತವನ್ನು ಬಳಸಲಾಗುತ್ತದೆ. ಎಂಆರ್ಐ ಸ್ಕ್ಯಾನ್ ಮಾಡುವಾಗ ವ್ಯಕ್ತಿಯನ್ನು ಎಂಆರ್ ಐ ಸ್ಕ್ಯಾನಿಂಗ್ ಮಶಿನ್ ಒಳಗೆ ಮಲಗಿಸಲಾಗುತ್ತೆ. ಅನೇಕರಿಗೆ ಈ ಎಂಆರ್ ಐ ಸ್ಕ್ಯಾನ್ ಅಂದರೆ ಭಯ ಶುರುವಾಗುತ್ತೆ. ಒಳಗೆ ಮಲಗಿಸ್ತಿದ್ದಂತೆ ಅವ್ರು ಪ್ಯಾನಿಕ್ ಆಗ್ತಾರೆ. ಆತಂಕ ಅವರನ್ನು ಕಾಡುತ್ತೆ. ಅದಕ್ಕೆ ಕಾರಣ ಏನು ಎಂಬುದಕ್ಕೆ ಇಲ್ಲಿ ಉತ್ತರ ಇದೆ.

ಸಾಮಾನ್ಯವಾಗಿ ಎಂಆರ್ ಐ ಸ್ಕ್ಯಾನಿಂಗ್ ಯಂತ್ರ ಸಿಟಿ ಸ್ಕ್ಯಾನ್ ಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಸಿಟಿ ಸ್ಕ್ಯಾನ್ ನಲ್ಲಿ ನಮ್ಮ ದೇಹ ಸಂಪೂರ್ಣ ಹೊರಗಿರುತ್ತದೆ. ಆದ್ರೆ ಎಂಆರ್ ಐ ಸ್ಕ್ಯಾನಿಂಗ್ ನಲ್ಲಿ ಒಳಗೆ ಮಲಗ್ಬೇಕು, ಮಲಗಲು ದೊಡ್ಡ ಜಾಗ ಅಲ್ಲಿರೋದಿಲ್ಲ. ಸೀಮಿತ ಸ್ಥಳದಲ್ಲಿ ಮಲಗಬೇಕು. ಹಾಗೆಯೇ ಅದನ್ನು ಮುಚ್ಚಲಾಗಿರುತ್ತದೆ. ಬಾಗಿಲು ಮುಚ್ಚಿದ ಹಾಗೂ ಸೀಮಿತ ಜಾಗವಿರುವ ಯಂತ್ರದಲ್ಲಿ ಮಲಗಲು ಕೆಲವರಿಗೆ ಭಯವಾಗುತ್ತದೆ. ಇನ್ನೊಂದು ಎಂಆರ್ ಐ ಯಂತ್ರದಿಂದ ವಿಚಿತ್ರ ಶಬ್ಧ ಕೇಳಿ ಬರುತ್ತದೆ. ದೇಹವನ್ನು ಅಲುಗಾಡಿಸದೆ ಸ್ಥಿರವಾಗಿ ಮಲಗಬೇಕು. ಇದು ಅನೇಕರಿಗೆ ದೊಡ್ಡ ಸಮಸ್ಯೆ. ಅವ್ರು ಟೆನ್ಷನ್ ಗೆ ಒಳಗಾಗ್ತಾರೆ. 

Mental Models: ಶ್ರೀಮಂತರ ಮೈಂಡ್ ಹೇಗೆ ಕೆಲಸ ಮಾಡುತ್ತೆ? ಅರ್ಥ ಮಾಡಿಕೊಂಡ್ರೆ ಲೈಫ್ ಈಸಿ!

ಎಂಆರ್ ಐ ಸ್ಕ್ಯಾನ್ ಯಂತ್ರದಲ್ಲಿ ಮಲಗಿದ್ದಾಗ ಯಾವುದೇ ಸಮಸ್ಯೆ ಆಗೋದಿಲ್ಲ. ಆದ್ರೆ ಅತಿಯಾಗಿ ನೀವು ಭಯಗೊಂಡಾಗ ಸಮಸ್ಯೆ ಆಗುವ ಸಾಧ್ಯತೆಯನ್ನು ಅಲ್ಲಗಳೆಯೋಕೆ ಆಗಲ್ಲ. ನೀವು ಟೆನ್ಷನ್ ಗೆ ಒಳಗಾಗೋದ್ರಿಂದ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಪ್ಯಾನಿಕ್ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಬಹಳ ಅಪಾಯಕಾರಿಯಾಗುವ ಸಾಧ್ಯತೆಯನ್ನುಂಟು ಮಾಡುತ್ತದೆ,

ಎಂಆರ್ ಐನಿಂದ ಸಮಸ್ಯೆ ಇದ್ಯಾ? : ಎಂಆರ್ ಐ ಪರೀಕ್ಷೆ ನಂತ್ರ ಯಾವುದೇ ಸಮಸ್ಯೆ ಆಗೋದಿಲ್ಲ. ಎಂಆರ್ ಐ ಸಮಯದಲ್ಲಿ ಸಂಪೂರ್ಣ ಎಚ್ಚರಿಕೆಯನ್ನು ವಹಿಸಲಾಗುತ್ತದೆ. ಯಾವುದೇ ಸಮಸ್ಯೆ ಕಾಣಿಸಿಕೊಂಡಲ್ಲಿ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತದೆ. ಕಾಂತೀಯ ಕ್ಷೇತ್ರವನ್ನು ಸೃಷ್ಟಿಸಿ ದೇಹದೊಳಗಿನ ಚಿತ್ರವನ್ನು ಸ್ಕ್ಯಾನಿಂಗ್ ಯಂತ್ರ ಪಡೆಯುತ್ತದೆ. 

ಆರೋಗ್ಯದ ಭಂಡಾರವಾದ ಬೆಲ್ಲ ಮತ್ತು ಹುರಿದ ಕಡಲೆ ಸೇವನೆಯ ಪ್ರಯೋಜನಗಳು

ಎಂಆರ್ ಐ ಸ್ಕ್ಯಾನಿಂಗ್ ಮುನ್ನ ಈ ಬಗ್ಗೆ ಗಮನವಿರಲಿ : ಎಂಆರ್ ಐ ಸ್ಕ್ಯಾನಿಂಗ್ ಮಾಡುವ ಮುನ್ನ ನಿಮ್ಮ ದೇಹದಲ್ಲಿ ಯಾವುದೇ ಲೋಹ ಇಲ್ಲದಂತೆ ನೀವು ನೋಡಿಕೊಳ್ಳಬೇಕು. ನಿಮ್ಮ ಬಟ್ಟೆಯೊಳಗೂ ಯಾವುದೇ ಲೋಹ ಇರಬಾರದು. ಸ್ಕ್ಯಾನಿಂಗ್ ಯಂತ್ರದ ಕಾಂತ ಕ್ಷೇತ್ರ ಲೋಹದ ಸಂಪರ್ಕಕ್ಕೆ ಬಂದಾಗ ಬಿಸಿಯಾಗುತ್ತದೆ. ಇದು ಅಪಾಯಕಾರಿಯಾಗಿದ್ದು, ರೋಗಿ ಸಾಯುವ ಸಾಧ್ಯತೆ ಇದೆ. ಲೋಹ ಮತ್ತು ಕಬ್ಬಿಣದ ವಸ್ತುಗಳು ಮೈಮೇಲೆ ಇರದಂತೆ ನೋಡಿಕೊಳ್ಳಿ. ರೇಡಿಯೋಗ್ರಾಫರ್ ಸಲಹೆಯನ್ನು ಸಂಪೂರ್ಣವಾಗಿ ಪಾಲಿಸಬೇಕು. ಸ್ಕ್ಯಾನಿಂಗ್ ಯಂತ್ರದೊಳಗೆ ಪ್ರವೇಶಿಸುವ ಮುನ್ನ ನಿಮ್ಮ ರೋಗದ ಬಗ್ಗೆ ರೆಡಿಯೋಗ್ರಾಫರ್ ಗೆ ಮಾಹಿತಿಯನ್ನು ನೀಡಿ. ನೀವು ಭಯಗೊಂಡಿದ್ದರೆ ರಿಲ್ಯಾಕ್ಸ್ ಆದ್ಮೇಲೆ ಸ್ಕ್ಯಾನಿಂಗ್ ಮಾಡಿಸ್ಕೊಳ್ಳಿ. ಎಂಆರ್ ಐ ಸ್ಕ್ಯಾನಿಂಗ್ ಮುಗಿದ ಮೇಲೆ ಪ್ರಜ್ಞೆ ತಪ್ಪಿದಂತಾದ್ರೆ ಇಲ್ಲದೆ ಸುಸ್ತಿನ ಅನುಭವ ಆದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ. ಆಹಾರ ಸೇವಿಸದೆ ಯಾವುದೇ ವಾಹನ ಚಲಾಯಿಸಬೇಡಿ. ಎಂಆರ್ ಐ ಸ್ಕ್ಯಾನಿಂಗ್ ನಂತ್ರ ಸ್ವಲ್ಪ ಸಮಯ ವಿಶ್ರಾಂತಿಪಡೆದು ನಂತ್ರ ಆಹಾರ ಸೇವಿಸಿ.