ಶ್ರೀಮಂತರು ಸಂಕೀರ್ಣ ಸಮಸ್ಯೆಗಳನ್ನು ಮೆಂಟಲ್ ಮಾಡೆಲ್ಸ್ ಬಳಸಿ ಪರಿಹರಿಸುತ್ತಾರೆ. ನಾಗರಹಾವು ಉದಾಹರಣೆಯಂತೆ, ಪರಿಣಾಮಗಳನ್ನು ಯೋಚಿಸದೆ(ಸೆಕೆಂಡ್ ಆರ್ಡರ್ ಥಿಂಕಿಂಗ್) ನಿರ್ಧಾರಗಳು ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ, ಯಾವುದೇ ಕ್ರಮಕ್ಕೂ ಮುನ್ನ ದೀರ್ಘಾವಧಿ ಪರಿಣಾಮಗಳನ್ನು ಪರಿಗಣಿಸಿ. ಹಳೆಯ ಮತ್ತು ಹೊಸ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಪಡೆಯಿರಿ.

ಪ್ರಪಂಚದಲ್ಲಿ ಎಲ್ಲರೂ ಶ್ರೀಮಂತರಲ್ಲ. ಬಹುತೇಕರು ಬಡವರೇ ಆಗಿದ್ದಾರೆ. ಶ್ರೀಮಂತರಲ್ಲೂ ಭಾರೀ ಶ್ರೀಮಂತರ ಬಗ್ಗೆ ತಿಳಿದುಕೊಂಡರೆ ನಿಮ್ಗೆ ಹೊಸ ವಿಷಯವೊಂದು ಅರ್ಥವಾಗುತ್ತದೆ. ವಿಶ್ವದ ರಿಚ್ ಪೀಪಲ್ ಮೈಂಡ್ ಹೇಗೆ ಕೆಲಸ ಮಾಡುತ್ತೆ? ಬಡವರ ಮೈಂಡ್ ಹೇಗೆ ಕೆಲಸ ಮಾಡೋದಿಲ್ಲ ಎಂಬ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ.. 

ಓವರ್ ಟು ಸಿಜಿಎನ್ (CGN Creativity) ಕ್ರಿಯೇಟಿವಿಟಿ: ಜಗತ್ತಿನ ಶ್ರೀಮಂತ ಜನರು ಅತ್ಯಂತ ಜಟಿಲ ಸಮಸ್ಯೆಯನ್ನೂ ಸಹ ಕೇವಲ 30 ಸೆಕೆಂಡ್‌ಗಳಲ್ಲಿ ಪರಿಹರಿಸುತ್ತಾರಂತೆ. ಅದು ಹೇಗೆ ಎಂದರೆ ಮೆಂಟಲ್ ಮಾಡೆಲ್ಸ್‌. ವಾರನ್ ಬಫೆಟ್ ಅವರು ತಮ್ಮ ಬಿಸಿನೆಸ್ ಪಾರ್ಟ್ನರ್ ಚಾರ್ಲಿ ಮುಂಗರ್ ಬಗ್ಗೆ ಹೇಳಿದ್ದಾರೆ- ಮುಂಗರ್ ಅವರು ವಿಶ್ವದ ಅತ್ಯುತ್ತಮ 30 ಸೆಕೆಂಡ್ ಮೆದುಳನ್ನು ಹೊಂದಿದಂತಹ ವ್ಯಕ್ತಿ. ಅವರು ಯಾವುದೇ ವಾಕ್ಯವನ್ನು ಮುಗಿಸುವ ಮೊದಲೇ ಸಂಪೂರ್ಣ ವಾಕ್ಯವನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. 

Elon Musk ಸಕ್ಸಸ್ ಸೀಕ್ರೆಟ್ ಕೊನೆಗೂ ರಿವೀಲ್ ಆಯ್ತು; ಇಷ್ಟು ದಿನ ಗುಟ್ಟಾಗಿತ್ತು ಯಾಕೆ?

ಈ ಮೆಂಟಲ್ ಮಾಡೆಲ್ಸ್ ಅನ್ನೋದು ಸಂಕೀರ್ಣ ಸಂಗತಿಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಸಾಧನವಾಗಿದೆ. ಎಕಾನಾಮಿಕ್ಸ್ ಅರ್ಥ ಮಾಡಿಕೊಳ್ಳಲು ಹೇಗೆ ಡಿಮಾಂಡ್ & ಸಪ್ಲೈ ಬೆಸ್ಟ್ ಮಾಡೆಲ್ ಆಗಿದೆಯೋ ಹಾಗೇ, ಕಷ್ಟದ ಸಂಗತಿಗಳನ್ನು ಬಗೆಹರಿಸಿಕೊಳ್ಳಲು 80-25 ಮಾಡೆಲ್ ಬೆಸ್ಟ್ ಮೆಥಡ್ ಆಗಿದೆ. ಇದರಲ್ಲಿ ಫಸ್ಟ್ ಆರ್ಡರ್ ಥಿಂಕಿಂಗ್ ಹಾಗೂ ಸೆಕೆಂಡ್ ಆರ್ಡರ್ ಥಿಂಕಿಂಗ್ ಅಂತ ಎರಡು ವಿಭಾಗಗಳಿವೆ. ಅದನ್ನು ಅರ್ಥ ಮಾಡಿಕೊಂಡರೆ ಸಾಕು. 

1. ಸೆಕೆಂಡ್ ಆರ್ಡರ್ ಥಿಂಕಿಂಗ್: ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿ ವಿಷಕಾರಿ ನಾಗರಹಾವುಗಳ ಸಂಖ್ಯೆ ವಿಪರೀತ ಹೆಚ್ಚಾಯಿತು. ಅಗ ಸರ್ಕಾರ ನಾಗರಹಾವುಗಳನ್ನು ಕೊಂದು ತಂದರೆ ಅವರಿಗೆ ಹಣ ಕೊಡುವುದಾಗಿ ಘೋಷಿಸಿತು. ಆಗ ಜನರು ನಾಗರಹಾವನ್ನು ಕಂಡಕಂಡಲ್ಲಿ ಕೊಂದು ಸರ್ಕಾರದ ಕಚೇರಿಗೆ ಕೊಟ್ಟು ಹಣ ಪಡೆಯಲು ಶುರು ಮಾಡಿದರು. ಮುಂದೆ, ನಾರಹಾವುಗಳು ತುಂಬಾ ಕಡಿಮೆ ಆದವು. ಆಗ ಜನರು ಮನೆಯಲ್ಲಿಯೇ ನಾಗರಹಾವುಗಳನ್ನು ಸಾಕಿ ಅದನ್ನು ಕೊಂದು ತಂದು ಹಣ ಪಡೆಯತೊಡಗಿದರು. 

'ಫಸ್ಟ್ ಪ್ರಿನ್ಸಿಪಲ್ ಥಿಂಕಿಂಗ್‌' ಬಗ್ಗೆ ಗೊತ್ತಾ? ಗ್ರೇಟ್ ಸಕ್ಸಸ್ ಪಡೆದೋರೆಲ್ಲಾ ಇದೇ ದಾರೀಲಿ ಹೋಗಿದ್ದು!

ಈ ವಿಷಯ ಸರ್ಕಾರಕ್ಕೆ ಗೊತ್ತಾದಾಗ, ಸರ್ಕಾರ ನಾಗರಹಾವು ಕೊಂದರೆ ಹಣ ಕೊಡುವುದನ್ನು ನಿಲ್ಲಿಸಿತು. ಅಗ ಜನರು ತಾವು ಸಾಕಿದ್ದ ನಾಗರಹಾವುಗಳನ್ನು ಮನೆಯಿಂದ ಹೊರಗೆ ಬಿಟ್ಟರು. ಆಗ ಮತ್ತೆ ನಾರಹಾವುಗಳು ಹೊರಗೆ ಜನರನ್ನು ಕಚ್ಚಿ ಸಾಯಿಸಲು ಪ್ರಾರಂಭಿಸಿದವು, ಸರ್ಕಾರಕ್ಕೆ ಈಗ ಮತ್ತೆ ತಲೆನೋವು ಶುರವಾಯ್ತು. ಇದರಿಂದ ಒಂದು ವಿಷಯ ಸ್ಪಷ್ಟವಾಯ್ತು. ಯಾವುದೇ ಆರ್ಡರ್ ಮಾಡುವಾಗ 'ಸೆಕೆಂಡ್ ಆರ್ಡರ್ ಥಿಂಕಿಂಗ್' ಮಾಡಬೇಕು. 

ನಾಗರಹಾವು ಕೊಂದರೆ ಜನರಿಗೆ ಹಣವನ್ನು ನೀಡಿದರೆ ಮುಂದೆ ಯಾವೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂದು ಸರ್ಕಾರ ಯೋಚಿಸರಲೇ ಇಲ್ಲ. ನಾವು ಮೊದಲು ಮಾಡುವ ಕೆಲಸ ಫಸ್ಟ್ ಆರ್ಡರ್ ಥಿಂಕಿಂಗ್ ಆಗಿರುತ್ತದೆ. ಆದರೆ, ಅದರಿಂದ ಮುಂದೆ ಬರುವ ಸಮಸ್ಯೆಗಳು ಸೆಕೆಂಡ್ ಆರ್ಡರ್ ಥಿಂಕಿಂಗ್ ಆಗಿರುತ್ತದೆ. ಇದಕ್ಕೊಂದು ಬೆಸ್ಟ್ ಉದಾಹರಣೆ ಇಲ್ಲಿದೆ ನೋಡಿ.. 

ಮೊದಲು ನೀವು ಸೋಷಿಯಲ್ ಮೀಡಿಯಾ ಆಪ್‌ ಒಂದನ್ನು ನಿಮ್ಮ ಮೊಬೈಲಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವುದು ಫಸ್ಟ್ ಆರ್ಡರ್ ಥಿಂಕಿಂಗ್ ಆಗಿರುತ್ತದೆ. ಆದರೆ, ಕಾಲ ಕಳೆದಂತೆ, ಆ ಅಪ್ಲಿಕೇಶನ್‌ನಿಂದ ನಿಮ್ಮ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ ಎಂಬುದು ಸೆಕೆಂಡ್ ಆರ್ಡರ್ ಥಿಂಕಿಂಗ್ ಆಗಿರುತ್ತದೆ, ಯಾವಾಗಲೂ ಫಸ್ಟ್ ಆರ್ಡರ್ ಥಿಂಕಿಂಗ್‌ ಅನ್ನು ಸೆಕೆಂಡ್ ಆರ್ಡರ್ ಥಿಂಕಿಂಗ್ ಫಾಲೋ ಮಾಡುತ್ತಲೇ ಇರುತ್ತದೆ. 

ಶಂಕರ್ ಅಶ್ವಥ್ 'ಕಣ್ಣೀರ ಕಥೆ'ಗೆ ಹೀಗೆ ಕಾಮೆಂಟ್ ಹಾಕೋದಾ? ಅಂಗೈ ತೋರ್ಸಿ ಅವಲಕ್ಷಣ ಕೇಳ್ಬೇಕಿತ್ತಾ?

ಆದ್ದರಿಂದ, ಹಳೆಯ ಸಮಸ್ಯೆಗಳಿಗೆ ಹಳೆಯದರಿಂದ ಹಾಗೂ ಹೊಸ ಸಮಸ್ಯೆಗಳಿಗೆ ಹೊಸದರಿಂದ ಉತ್ತರ ಕಂಡುಕೊಳ್ಳಿ. ಚಕ್ಕಡಿ ಗಾಡಿ ಸಮಸ್ಯೆ ಆದರೆ ಹಿರಿಯರಿಂದ ಪರಿಹಾರ ಕಂಡುಕೊಳ್ಳಿ. ಆದರೆ ಮೊಬೈಲ್ ಸಮಸ್ಯೆ ಕೊಡುತ್ತಿದ್ದರೆ ಕಿರಿಯರಿಂದ ಪರಿಹಾರ ಪಡೆಯಲು ಪ್ರಯತ್ನಿಸಿ. ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ಅಂದಹಾಗೆ, ಯಾವತ್ತೂ ಸೆಕೆಂಡ್ ಆರ್ಡರ್ ಥಿಂಕಿಂಗ್ ಪರಿಣಾಮಗಳನ್ನು ಯೋಚಿಸಿಯೇ ಫಸ್ಟ್‌ ಆರ್ಡರ್ ಥಿಂಕಿಂಗ್ ಅಪ್ಲೈ ಮಾಡಿ..!

ಶ್ರೀಮಂತರ ಮೈಂಡ್ ಹೇಗೆ ಕೆಲಸ ಮಾಡುತ್ತೆ|Mental models|How rich mind works