ದಿನಾ ಹಲ್ಲುಜ್ಜುವುದಷ್ಟೇ ಸಾಲದು, ವರ್ಷಕ್ಕೊಮ್ಮೆ ಹಲ್ಲಿನ ತಪಾಸಣೆ ಅಗತ್ಯ. ಆಹಾರ ಪದ್ಧತಿ ಬದಲಾಗಿರುವುದರಿಂದ ಹಲ್ಲುಗಳ ಆರೈಕೆ ಮುಖ್ಯ. ಹಲ್ಲು ಶುಚಿಗೊಳಿಸುವಿಕೆಯಿಂದ ಹಲ್ಲುಗಳಿಗೆ ಹಾನಿಯಾಗುವುದಿಲ್ಲ, ವಸಡಿನ ಸೋಂಕು ತಡೆದು ಹಲ್ಲುಗಳನ್ನು ಕಾಪಾಡುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜಬೇಕು ರಾತ್ರಿ ಮಲಗುವ ಮುನ್ನ ಉಜ್ಜಬೇಕು ಎಂದು ಬಾಲ್ಯದಿಂದಲ್ಲೂ ಹೇಳಿಸಿಕೊಂಡಿದ್ದೀವಿ ಅದರ ಬಗ್ಗೆ ಓದಿದ್ದೀವಿ. ಬಾಲ್ಯದಲ್ಲಿ ಮಾತ್ರ ಅದನ್ನು ಫಾಲೋ ಮಾಡಿ ಈಗ ಬಿಟ್ಟರೆ ಎಡವಟ್ಟು ಖಂಡಿತ. ಹೇಗೆ ನಾವು ತ್ವಚ್ಛೆ, ಕಣ್ಣು, ಮೂಳೆ, ಕಿವಿ, ಗಂಟಲು...ಹೀಗೆ ಪ್ರತಿಯೊಂದಕ್ಕೂ ಪ್ರಾಮುಖ್ಯತೆ ನೀಡುತ್ತೀವಿ ಹಾಗೆ ಹಲ್ಲಿಗೂ ಹೆಚ್ಚಿನ ಪ್ರಮುಖ್ಯತೆ ನೀಡಬೇಕು. ಹಲ್ಲು ಉಜ್ಜಿದ್ದೀನಿ ಅಂತ ಸುಮ್ಮನೆ ಆಗಬಾರದು. ವರ್ಷಕ್ಕೆ ಒಮ್ಮೆ ಆದರೂ ವೈದ್ಯರನ್ನು ಸಂಪರ್ಕಿಸಬೇಕು, ಏಕೆಂದರೆ ಈಗನ ಕಾಲದಲ್ಲಿ ನಾವು ಸೇವಿಸುತ್ತಿರುವ ಆಹಾರ ಸಂಪೂರ್ಣವಾಗಿ ಬದಲಾಗಿದೆ.

ಹಲ್ಲು ಕ್ಲೀನ್ ಮಾಡಿಸುವುದರಿಂದ ಸಮಸ್ಯೆ ಹೆಚ್ಚಾಗುತ್ತಾ? ಎಲ್ಲರೂ ಅಂದುಕೊಂಡಿರುವಂತೆ ಹಲ್ಲು ಅಲುಗಾಡುವುದು ಅಥವಾ ಇರುವ ಜಾಗದಿಂದ ಕೊಂಚ ಹಿಂದೆ ಮುಂದೆ ಆಗುತ್ತದೆ ಅನ್ನೋ ಭಯ ಹುಟ್ಟುಕೊಂಡಿದ್ಯಾ? ಈ ಪ್ರಶ್ನೆಗಳಿಗೆ ಡಾಕ್ಟರ್ ನಿತ್ಯಾ ಗೌಡ ಸ್ಪಷ್ಟನೆ ಕೊಟ್ಟಿದ್ದಾರೆ. 

ರಾತ್ರಿ 2 ಗಂಟೆಗೆ ಜೀವನದ ಬಗ್ಗೆ ಯೋಚನೆ ಮಾಡ್ತೀನಿ, ಗೂಗಲ್‌ನಲ್ಲಿ ಸಣ್ಣ ಆಗೋಕೆ ಹುಡುಕ್ತೀನಿ: ರಶ್ಮಿಕಾ ಮಂದಣ್ಣ

ಹೌದು! ಆಗಾಗ ಹಲ್ಲು ಕ್ಲೀಕ್ ಮಾಡಿರುವುದು ತುಂಬಾನೇ ಮುಖ್ಯ ಆದರೆ ಕೆಲವರಿಗೆ ಹಲ್ಲು ಕ್ಲೀನ್ ಮಾಡಿಸಿದರೆ ಹಲ್ಲು ಅಲುಗಾಡುತ್ತದೆ, ಹಲ್ಲು ಹಾಳು ಮಾಡುತ್ತದೆ ಅಥವಾ ಹಲ್ಲಿನ ಶೈನ್ ಕಡಿಮೆ ಮಾಡುತ್ತದೆ ಅದೂ ಇಲ್ಲ ಅಂದ್ರೆ ಒಂದು ಲೇಯರ್‌ ಚಿಪ್‌ ಮಾಡುತ್ತದೆ ಅನ್ನೋ ಭಯ ಕಾಡುತ್ತದೆ. ಆದರೆ ಇದ್ಯಾವುದು ಆಗಲ್ಲ ಅಂತಿದ್ದಾರೆ ಡಾ. ನಿತ್ಯ. 'ಅಲ್ಟ್ರಾ ಸಾನಿಕ್ ಸ್ಕೇಲಿಂಗ್ ಮಷಿನ್‌ ಹಲ್ಲಿನ ಮೇಲೆ ಉಳಿದುಕೊಂಡಿರುವ plaque ಮತ್ತು calculusನ ಮಾತ್ರ ತೆಗೆಯುತ್ತದೆ. ಯಾವುದೇ ಕಾರಣಕ್ಕೂ ಹಲ್ಲಿನ ಮೇಲು ಭಾಗಕ್ಕೆ ತೊಂದರೆ ಮಾಡುವುದಿಲ್ಲ' ಎಂದು ಡಾಕ್ಟರ್ ನಿತ್ಯ ವಿಡಿಯೋದಲ್ಲಿ ಮಾತನಾಡಿದ್ದಾರೆ. 

ಬ್ಲೌಸ್‌ ಹಾಕದೆ ಸೀರೆ ಧರಿಸಿದ ಧನುಶ್ರೀ; ಬ್ರೇಕಪ್ ಆದ್ಮೇಲೆ ಶೋಕಿ ಶುರು ಎಂದು ಕಾಲೆಳೆದ ನೆಟ್ಟಿಗರು

ಹಲ್ಲು ಕ್ಲೀನ್ ಮಾಡಿಸಿಲ್ಲ ಅಂದ್ರೆ ಏನ್ ಆಗುತ್ತೆ?
ಆಗಾಗ ವೈದ್ಯರಿಗೆ ನಮ್ಮ ಹಲ್ಲುಗಳನ್ನು ತೋರಿಸಬೇಕು. ಸರಿಯಾದ ಸಮಯಕ್ಕೆ ಹಲ್ಲು ಕ್ಲೀನ್ ಮಾಡಿಸಿಲ್ಲ ಅಂದ್ರೆ ಹಲ್ಲಿನ ಮೇಲೆ ಇರುವ ಗಲೀಜುಗಳು ಹಲ್ಲಿನ ವಸಡು ಸೇರಿಕೊಳ್ಳುತ್ತದೆ. ಇದರಿಂದ ವಸುಡು ಇನ್‌ಫೆಕ್ಷನ್ ಕೂಡ ಆಗುತ್ತದೆ. ಒಂದು ವೇಳೆ ವಸುಡಿಗೆ ಸಮಸ್ಯೆ ಆದರೆ ಖಂಡಿತ ಹಲ್ಲು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದಿದ್ದಾರೆ ಡಾ.ನಿತ್ಯ. 

ಸಿಸೇರಿಯನ್ ಆಗಿದ್ದಕ್ಕೆ ಸ್ವಲ್ಪ ದಿನ ಕಷ್ಟ ಆಯ್ತು ಆದ್ರೆ 2 ತಿಂಗಳಿಗೆ ಸಿನಿಮಾ ಆಫರ್ ಬಂತು: ಮಿಲನಾ ನಾಗರಾಜ್