- Home
- Entertainment
- Sandalwood
- ಸಿಸೇರಿಯನ್ ಆಗಿದ್ದಕ್ಕೆ ಸ್ವಲ್ಪ ದಿನ ಕಷ್ಟ ಆಯ್ತು ಆದ್ರೆ 2 ತಿಂಗಳಿಗೆ ಸಿನಿಮಾ ಆಫರ್ ಬಂತು: ಮಿಲನಾ ನಾಗರಾಜ್
ಸಿಸೇರಿಯನ್ ಆಗಿದ್ದಕ್ಕೆ ಸ್ವಲ್ಪ ದಿನ ಕಷ್ಟ ಆಯ್ತು ಆದ್ರೆ 2 ತಿಂಗಳಿಗೆ ಸಿನಿಮಾ ಆಫರ್ ಬಂತು: ಮಿಲನಾ ನಾಗರಾಜ್
ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾದ ಮಿಲನಾ ನಾಗರಾಜ್. ಬೆಲ್ಲ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನು? ಮಿಲನಾ ಕೊಟ್ಟ ಉತ್ತರ ಇಲ್ಲಿದೆ.

ತಾಯಿತನ ಎಂಜಾಯ್ ಮಾಡುತ್ತಿರುವ ಮಿಲನಾ ನಾಗರಾಜ್ ಈಗ ಮತ್ತೆ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಮತ್ತು ನಿರ್ಮಾಣ ಎರಡನ್ನೂ ಫ್ಯಾಮಿಲಿ ಸಪೋರ್ಟ್‌ನಿಂದ ಮ್ಯಾನೇಜ್ ಮಾಡುತ್ತಿದ್ದಾರೆ.
'ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದಿನದಂದಿ ನಾನ್ ಸ್ಟಾಪ್ ಕೆಲಸ ಮಾಡುತ್ತಿದ್ದೀನಿ. ಹೀಗಾಗಿ ತಾಯಿ ಆದ ಮೇಲೆ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡುವ ರೀತಿ ಅಥವಾ ನನ್ನ ಸ್ಥಾನದ ಬಗ್ಗೆ ಯೋಚನೆ ಮಾಡುವುದಿಲ್ಲ'
'ಆದರೆ ನಾನು ತಾಯಿಯಾದ ಕೆಲವೇ ದಿನದಲ್ಲಿ ಸಿನಿಮಾ ಆಫರ್‌ಗಳು ಬಂತು. ಮಗಳು ಪರಿ ಹುಟ್ಟಿದ ಎರಡು ತಿಂಗಳು ಅಗಿತ್ತು ಅಷ್ಟೇ ನಾನು ಸಿನಿಮಾ ಸೆಟ್‌ನಲ್ಲಿ ಭಾಗಿಯಾಗಿರುತ್ತಿದ್ದೆ'
'ಬೆಲ್ಲ ಸಿನಿಮಾ ಆಯ್ಕೆ ಮಾಡಲು ಕಾರಣ ಏನೆಂದರೆ petsಗೆ ಪ್ರಾಮುಖ್ಯತೆ ನೀಡಲಾಗಿದೆ. ನನಗೆ ಪ್ರಾಣಿಗಳು ಅಂದ್ರೆ ತುಂಬಾನೇ ಇಷ್ಟ. ಇದೊಂದು ಕಾರಣ ಸಾಕಿದ್ದು ಹೌದು ಎಂದು ಹೇಳಲು'
'ತಾಯಿ ಆದ ಮೇಲೆ ಹೇಗೆ ಬರಲಿದೆ ಹಾಗೆ ನಡೆಯಲಿ ಎಂದು ಸುಮ್ಮನಿದ್ದೆ ಆದರೆ ಬೆಲ್ಲ ಸಿನಿಮಾ ಆಫರ್ ಬಂದಾಗ ನಾನು ಸರ್ಪ್ರೈಸ್ ಆಗಿದ್ದೆ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಿಲನಾ ಮಾತನಾಡಿದ್ದಾರೆ.
'ಅನಿರೀಕ್ಷಿತ ಸಮಯದಲ್ಲಿ ಸಿನಿಮಾ ಆಫರ್ ಬಂದಾಗ ಒಪ್ಪಿಕೊಳ್ಳುವುದು ಒಳ್ಳೆಯದು ಎಂದು ತಿಳಿಯಿತ್ತು. ಆದರೆ ಈ ಸಮಯದಲ್ಲಿ ಫ್ಯಾಮಿಲಿ ಸಪೋರ್ಟ್ ಸಂಪೂರ್ಣವಾಗಿದೆ'
'ನನಗೆ ಸಿ-ಸೆಕ್ಷನ್ ಆಗಿದ್ದ ಕಾರಣ ಮಗು ಹುಟ್ಟಿ ಒಂದೆರಡು ವಾರ ತುಂಬಾ ಕಷ್ಟ ಆಯ್ತು. ಅದಾದ ಮೇಲೆ ಜಾಹೀರಾತಿಗೆ ಕೆಲಸ ಮಾಡಿದೆ. ಆಗ ತುಂಬಾ ಖುಷಿ ಕೊಟ್ಟಿದೆ'
'ನನಗೆ ಸಿ-ಸೆಕ್ಷನ್ ಆಗಿದ್ದ ಕಾರಣ ಮಗು ಹುಟ್ಟಿ ಒಂದೆರಡು ವಾರ ತುಂಬಾ ಕಷ್ಟ ಆಯ್ತು. ಅದಾದ ಮೇಲೆ ಜಾಹೀರಾತಿಗೆ ಕೆಲಸ ಮಾಡಿದೆ. ಆಗ ತುಂಬಾ ಖುಷಿ ಕೊಟ್ಟಿದೆ'