Asianet Suvarna News Asianet Suvarna News

ಸ್ನಾನ ಮಾಡುವಾಗ ಮೈ ಉಜ್ಜಲು ಬ್ರಶ್‌ ಬಳಸ್ತೀರಾ ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ ನೋಡಿ

ಸ್ನಾನ (Bath) ಮಾಡುವುದು ಮನುಷ್ಯನ ದಿನಚರಿಯ ನಿತ್ಯಕರ್ಮಗಳಲ್ಲೊಂದು. ಆದ್ರೆ ಅದನ್ನು ಸರಿಯಾದ ರೀತಿ ಮಾಡದಿದ್ರೆ ಅನುಕೂಲ ಆಗೋ ಬದ್ಲು ತೊಂದ್ರೇನೆ ಆಗ್ಬೋದು.  ಸ್ನಾನ (BATH) ಮಾಡುವಾಗ ಮೈ ಉಜ್ಜಲು ಬ್ರಶ್‌ (Loofah) ಬಳಸೋದ್ರಿಂದಾನೂ ಎಷ್ಟೊಂದು ತೊಂದ್ರೆಯಿದೆ ನೋಡಿ.

Why Bathing With Loofah Every Day May Not Be A Good Idea Vin
Author
Bengaluru, First Published Jun 26, 2022, 4:10 PM IST

ಸ್ನಾನ (Bath) ಮಾಡುವುದು ಎಂದರೆ ಧೂಳು, ಬೆವರಿನಿಂದ ಆವೃತವಾಗಿರುವ ದೇಹ (Body)ವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಪ್ರಕ್ರಿಯೆಯಾಗಿದೆ. ಸ್ನಾನ ಮಾಡೋದು ಆರೋಗ್ಯ (Health)ಕ್ಕೆ ಒಳ್ಳೆಯದು. ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಾರೆ. ಮತ್ತೆ ಕೆಲವರು ವಾರಕ್ಕೆ ಐದು ದಿನ ಸ್ನಾನ ಮಾಡ್ತಾರೆ. ಸ್ನಾನ ಮಾಡೋದು ಅವರವರ ಆಯ್ಕೆ. ಇನ್ನು ಕೆಲವರು ಬೆಳಗ್ಗೆ ಸ್ನಾನ ಮಾಡಿದರೆ, ಕೆಲವರು ರಾತ್ರಿ ಸ್ನಾನ ಮಾಡ್ತಾರೆ. ಕೆಲವೊಬ್ಬರು ಸ್ನಾನಕ್ಕೆ ಬ್ರಶ್‌, ಇನ್ನು ಕೆಲವರು ಕಲ್ಲನ್ನು ಉಪಯೋಗಿಒಸುತ್ತಾರೆ. ಆದ್ರೆ ಇದನ್ನೆಲ್ಲಾ ಬಳಸೋದ್ರಿಂದ ಆರೋಗ್ಯಕ್ಕೆ ಏನಾದ್ರೂ ತೊಂದ್ರೆಯಿದ್ಯಾ ಅನ್ನೋದನ್ನು ನೀವು ಎಂದಾದರೂ ಯೋಚಿಸಿದ್ದೀರಾ ? ಆ ಕುರಿತಾದ ಕೆಲವೊಂದು ಮಾಹಿತಿ ಇಲ್ಲಿದೆ.

ಸ್ನಾನ ಮಾಡುವಾಗ ಸಾಮಾನ್ಯವಾಗಿ ಹೆಚ್ಚಿನವರು ಮೃದುವಾದ ಅಥವಾ ಒರಟಾದ ಬ್ರಶ್‌ನ್ನು ಬಳಸುತ್ತಾರೆ. ಆಂಗ್ಲ ಭಾಷೆಯಲ್ಲಿ ಇದನ್ನು ಲೂಫಾ ಎಂದು ಹೇಳುತ್ತಾರೆ. ಇದು ಮೂಲಭೂತವಾಗಿ ಶವರ್ ಸ್ಕ್ರಬ್ ಆಗಿದ್ದು, ಸ್ಪಾಂಜ್ ನಂತಹ ವಿನ್ಯಾಸವನ್ನು ಹೊಂದಿದೆ. ಚರ್ಮವನ್ನು ಶುದ್ಧೀಕರಿಸಲು ದ್ರವ ಅಥವಾ ಸೋಪ್‌ನೊಂದಿಗೆ ಸೇರಿಸಿ ಇದನ್ನು ಮೈ ತಿಕ್ಕಲಾಗುತ್ತದೆ. ವಿಶೇಷವಾಗಿ ಮೇಲ್ಮೈ ಪ್ರದೇಶದ ಕಲೆಗಳನ್ನು ಇದು ತೊಡೆದು ಹಾಕುತ್ತದೆ.

ಸ್ನಾನವಾದ ಕೂಡಲೇ ನೀರು ಕುಡಿದರೆ ಕಾಯಿಲೆಗಳಿಂದ ದೂರವಿರಬಹುದು

ಕೆಲವರು ಲೂಫಾಗಳಿಗೆ ತುಂಬಾ ಒಗ್ಗಿಕೊಂಡಿರುತ್ತಾರೆ. ಅದಿಲ್ಲದೆ ಸ್ನಾನವನ್ನು ಊಹಿಸಿಕೊಳ್ಳಲೂ ಅವರಿಂದ ಆಗುವುದಿಲ್ಲ. ಆದರೆ, ಪ್ರತಿ ಬಾರಿ ಸ್ನಾನ ಮಾಡುವಾಗಲೂ ನೀವು ಲೂಫಾ ಅಥವಾ ಸ್ನಾನದ ಬ್ರಶ್‌ನ್ನು ಬಳಸುತ್ತಿದ್ದರೆ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳುವುದು ಒಳಿತು. 

ಡರ್ಮಟಾಲಜಿಸ್ಟ್, ಡರ್ಮಟೊಸರ್ಜನ್ ಮತ್ತು ಸೌಂದರ್ಯದ ಚರ್ಮಶಾಸ್ತ್ರಜ್ಞರಾದ ಡಾ.ಆರತಿ ಅವರ ಪ್ರಕಾರ, ಪ್ರತಿನಿತ್ಯ ಲೂಫಾ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಬಳಸುವುದಾಗಿದ್ದರೂ ಇದನ್ನು ಪ್ರತಿನಿತ್ಯ ತೊಳೆದು ಬಳಸುವ ಅಭ್ಯಾಸ ಹೊಂದಿರಬೇಕು. ಇಲ್ಲವಾದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ಆರತಿ ತಿಳಿಸುತ್ತಾರೆ. ಲೂಫಾ ಬ್ಯಾಕ್ಟೀರಿಯಾ, ಫಂಗಲ್ ಮತ್ತು ಪಿಗ್ಮೆಂಟೇಶನ್ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ನಿಮ್ಮ ದೇಹದಿಂದ ಕೊಳಕು ಮತ್ತು ಸತ್ತ ಚರ್ಮದ ಕೋಶಗಳನ್ನು ಉಜ್ಜಿದಾಗ ಸೂಕ್ಷ್ಮ ನೇಯ್ಗೆಯಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಎಂದು ಡಾ.ಆರತಿ ಇನ್‌ಸ್ಟಾಗ್ರಾಂನಲ್ಲಿ ವಿವರಿಸುತ್ತಾರೆ. 

ಪ್ರತಿ ಬಾರಿ ಲೂಫಾ ಒದ್ದೆಯಾದಾಗ ಮತ್ತು ಸರಿಯಾಗಿ ಒಣಗುವುದಿಲ್ಲ. ಹೀಗಾಗಿ ಇದರಲ್ಲಿ ಸಿಕ್ಕಿಬಿದ್ದ ಜೀವಿಗಳು ತೇವಾಂಶದಿಂದಾಗಿ ಬೆಳೆಯುತ್ತವೆ. ಕಳೆದ ಬಾರಿ ನಿಮ್ಮ ದೇಹವನ್ನು ತೊಳೆದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಮತ್ತೆ ಹರಡಲು ಆರಂಭವಾಗುತ್ತದೆ. 
ಲೂಫಾಗಳು ಕೆಲವು ಚರ್ಮದ ಪ್ರಕಾರಗಳಿಗೆ ಇನ್ನಷ್ಟು ಅಪಾಯಕಾರಿಯಾಗಬಹುದು. ಹೀಗಾಗಿ ಲೂಫಾವನ್ನು ಬಳಸಿದ ನಂತರ ಕೆಂಪು ದದ್ದುಗಳು ಅಥವಾ ಕಿರಿಕಿರಿಯನ್ನು ಗಮನಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎಂದವರು ಹೇಳಿದರು.

ಬೆಳಗ್ಗೆ ಅಥವಾ ರಾತ್ರಿ, ಸ್ನಾನ ಮಾಡೋಕೆ ಸರಿಯಾದ ಸಮಯ ಯಾವುದು ?

ಲೂಫಾ ಫೈಬರ್‌ಗಳ ಒರಟಾದ ಮೈ ಚರ್ಮವನ್ನು ಹಾನಿಗೊಳಿಸಬಹುದು ಮತ್ತು ಶಾಶ್ವತ ವರ್ಣದ್ರವ್ಯವನ್ನು ಉಂಟುಮಾಡಬಹುದು. ಇಂಥಾ ಸಮಸ್ಯೆ ಉಂಟಾದರೆ ಚಿಕಿತ್ಸೆ ನೀಡಲು ಕಷ್ಟಕರವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

ಸ್ನಾನ ಮಾಡುವಾಗ ಜೊತೆಯಲ್ಲೇ ಮೂತ್ರ ಮಾಡಿದ್ರೆ ಇಷ್ಟೆಲ್ಲಾ ತೊಂದ್ರೆಯಾಗುತ್ತೆ

ಕೆಲವೊಬ್ಬರು ಸ್ನಾನ ಮಾಡುವಾಗಲೇ ಮೂತ್ರ (Urine) ವಿಸರ್ಜಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ಕೇಳಲು ಸಾಮಾನ್ಯವೆನಿಸಿದರೂ, ಪ್ರಕ್ರಿಯೆಯೂ ಸಾಮಾನ್ಯವಾಗಿದ್ದರೂ ಇದರಿಂದಾಗುವ ಆರೋಗ್ಯ ಸಮಸ್ಯೆ (Health Problem) ಗಳು ಒಂದೆರಡಲ್ಲ. ಇದರಿಂದಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞರು ಬಹಿರಂಗಪಡಿಸಿದ್ದಾರೆ. ಜನರು ಶವರ್‌ನಲ್ಲಿ ಮೂತ್ರ ವಿಸರ್ಜನೆಯನ್ನು ಏಕೆ ನಿಲ್ಲಿಸಬೇಕು ಎಂಬ ಆಘಾತಕಾರಿ ಕಾರಣವನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಶವರ್‌ನಲ್ಲಿ ಮೂತ್ರ ವಿಸರ್ಜಿಸುವುದು ಪುರುಷರು ಮತ್ತು ಮಹಿಳೆಯರ ಆರೋಗ್ಯಕ್ಕೆ ಏಕೆ ಹಾನಿಕಾರಕ ಎಂಬುದನ್ನು ತಿಳಿಸಿದ್ದಾರೆ. 

ಮೂತ್ರಶಾಸ್ತ್ರಜ್ಞ ಡಾ.ತೆರೇಸಾ ಇರ್ವಿನ್, ಸ್ನಾನಕ್ಕೆ ಹೋಗುವವರು ಜೊತೆಯಲ್ಲೇ ಮೂತ್ರ ಮಾಡುವ ತಮ್ಮ ಅಭ್ಯಾಸ (Habit)ಗಳನ್ನು ಬದಲಾಯಿಸಿಕೊಳ್ಳಬೇಕು. ಏಕೆಂದರೆ ಇದನ್ನು ನಿಯಮಿತವಾಗಿ ಮಾಡುವುದರಿಂದ ಹರಿಯುವ ನೀರಿನ ಶಬ್ದ ಮತ್ತು ಮೂತ್ರ ವಿಸರ್ಜನೆಯ ಕ್ರಿಯೆಯ ನಡುವೆ ಸಹಾಯವಿಲ್ಲದ ಮಾನಸಿಕ ಸಂಬಂಧಕ್ಕೆ ಕಾರಣವಾಗಬಹುದು ಎಂದಿದ್ದಾರೆ. ಸ್ನಾನ ಮಾಡುವಾಗ ಸುಲಭವಾಗಿ ಮೂತ್ರಕೋಶವನ್ನು ಖಾಲಿ ಮಾಡಲು ನಿಮಗೆ ಸಾಧ್ಯವಾಗಬಹುದು, ಆದರೆ ಇದರಿಂದ ಅಪಾಯವೇ ಹೆಚ್ಚು ಎನ್ನುತ್ತಾರೆ. 

Follow Us:
Download App:
  • android
  • ios