ಸ್ನಾನವಾದ ಕೂಡಲೇ ನೀರು ಕುಡಿದರೆ ಕಾಯಿಲೆಗಳಿಂದ ದೂರವಿರಬಹುದು
ನೀರು ಕುಡಿಯೋದು ಆರೋಗ್ಯಕ್ಕೆ (Health) ಒಳ್ಳೇದು ಅನ್ನೋದು ಹಲವರಿಗೆ ತಿಳಿದಿರುವ ವಿಷಯ. ಬೆಳಗ್ಗೆದ್ದ ಕೂಡಲೇ ನೀರು (Water) ಕುಡಿಯೋದು ಒಳ್ಳೆಯದು ಅನ್ನೋದು ಹಲವರಿಗೆ ತಿಳಿದಿದೆ. ಆದ್ರೆ ಸ್ನಾನವಾದ ಕೂಡಲೇ ನೀರು ಕುಡಿಯೋದ್ರಿಂದ ಹಲವು ಕಾಯಿಲೆ (Disease) ಗಳಿಂದ ದೂರವಿರಬಹುದಂತೆ.
ನೀರು (Water) ನಮ್ಮ ದೇಹ (Body) ಕ್ಕೆ ಬಹಳ ಮುಖ್ಯ. ನೀರಿಲ್ಲದೆ ಒಂದು ದಿನ ಕಳೆಯಲೂ ಸಾಧ್ಯವಿಲ್ಲ. ನೀರನ್ನು ಇದೇ ಕಾರಣಕ್ಕೆ ಜೀವಜಲವೆಂದು ಕರೆಯಲಾಗುತ್ತದೆ. ಪ್ರತಿ ದಿನ ಎರಡರಿಂದ ಮೂರು ಲೀಟರ್ ನೀರು (Water) ಕುಡಿಯುವುದು ಬಹಳ ಮುಖ್ಯ. ಕೆಲವರು ಅತಿಯಾಗಿ ನೀರು ಸೇವನೆ ಮಾಡ್ತಾರೆ. ಒತ್ತಾಯ ಪೂರ್ವಕವಾಗಿ ದೇಹಕ್ಕೆ ನೀರನ್ನು ನೀಡಬಾರದು. ದೇಹಕ್ಕೆ ನೀರು ಕಡಿಮೆಯಾದ್ರೂ ಸಮಸ್ಯೆಯಾಗುತ್ತದೆ. ಹಾಗೆ ನೀರು ಹೆಚ್ಚಾದ್ರೂ ಸಮಸ್ಯೆಯಾಗುತ್ತದೆ. ಬೆಳಿಗ್ಗೆ ಹೆಚ್ಚು ನೀರು ಕುಡಿಯಬೇಕು, ರಾತ್ರಿ ನೀರು ಕುಡಿಯಬಾರದು ಎಂದು ಕೆಲವರು ಹೇಳ್ತಾರೆ. ಇನ್ನು ಕೆಲವರು ಸ್ನಾನದ ಮೊದಲು ಮತ್ತು ನಂತರ ನೀರು ಕುಡಿಯಬೇಕು ಎನ್ನುತ್ತಾರೆ. ಇದರಲ್ಲಿ ಯಾವುದು ಸರಿ ಎಂಬುದನ್ನು ತಿಳಿದುಕೊಳ್ಳೋಣ.
ನಮ್ಮ ದೇಹದಲ್ಲಿ ನೀರು ಕೂಡ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಬೇಸಿಗೆಯಲ್ಲಿ ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ಬಹಳ ಮುಖ್ಯ. ಬಿಸಿಲಿನಿಂದಾಗಿ ದೇಹದಿಂದ ಬೆವರು ವಿಕೆಯಿಂದ ದೇಹದಲ್ಲಿ ನೀರು ವೇಗವಾಗಿ ಕಡಿಮೆಯಾಗುತ್ತದೆ. ನಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿ ಇಟ್ಟುಕೊಳ್ಳಬೇಕು. ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ನೀರು ಕುಡಿದಾಗ ಅದರ ಪ್ರಯೋಜನಗಳು ಮತ್ತಷ್ಟು ಹೆಚ್ಚಾಗುತ್ತದೆ. ಸರಿಯಾದ ಸಮಯದಲ್ಲಿ ನೀರು ಕುಡಿಯುವುದರಿಂದ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಸುಸ್ತು, ಅಧಿಕ ರಕ್ತದೊತ್ತಡ, ಮಲಬದ್ಧತೆ ಯಂತಹ ಕಾಯಿಲೆಗಳಿಂದ ದೂರವಿರಲು ಸಹಾಯವಾಗುತ್ತದೆ ಎಂದು ವಿಜ್ಞಾನ ಸಾಬೀತು ಪಡಿಸಿದೆ.
ಒಳ್ಳೇದು ಅಂತ ಹೆಚ್ಚು ನೀರು ಕುಡಿದ್ರೆ ಕಾಡುತ್ತೆ Over Hydration ಸಮಸ್ಯೆ !
ಸ್ನಾನದ (Bath) ನಂತರ ದೇಹಕ್ಕೆ ಏನಾಗುತ್ತದೆ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಸ್ನಾನದ ಬಳಿಕ ದೇಹದ ಶಾಖವು ಹೊರ ಹೋಗುತ್ತದೆ. ದೇಹದ ಮೇಲ್ಮೈಯಿಂದ ಮಾತ್ರವಲ್ಲ, ಅದರ ಪರಿಣಾಮವು ಆಂತರಿಕವಾಗಿರುತ್ತದೆ. ಅದಕ್ಕಾಗಿಯೇ ಸ್ನಾನದ ನಂತರ ನೀವು ಆರಾಮವಾಗಿರುತ್ತೀರಿ ಏಕೆಂದರೆ ಶಾಖವು ಆವಿಯಾಗುತ್ತದೆ. ಇದು ನಿಧಾನವಾಗಿ ಮತ್ತು ಮುಂದಿನ 15-20 ನಿಮಿಷಗಳ ಕಾಲ ನಿರಂತರವಾಗಿ ನಡೆಯುತ್ತದೆ ಮತ್ತು ಈ ಅವಧಿಯಲ್ಲಿ ನೀವು ನೀರನ್ನು ಕುಡಿದರೆ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಅದಕ್ಕಾಗಿಯೇ ಸ್ನಾನದ ನಂತರ 20-30 ನಿಮಿಷಗಳ ನಂತರ ಮಾತ್ರ ನೀರು ಕುಡಿಯಲು ಸಲಹೆ ನೀಡಲಾಗುತ್ತದೆ.
ಯಾವಾಗ ನೀರು ಕುಡಿಯೋದು ಒಳ್ಳೆಯದು ?
ದಿನವಿಡೀ ಯಾವಾಗ, ಎಷ್ಟು ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಬೇಕು. ಬೆಳಗ್ಗೆ ಎದ್ದ ತಕ್ಷಣ 1 ಲೋಟ ನೀರು ಕುಡಿಯಿರಿ. ಹೀಗೆ ಮಾಡುವುದರಿಂದ ದೇಹದಲ್ಲಿನ ವಿಷಕಾರಿ ಅಂಶ, ಕೊಳೆ, ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡುತ್ತದೆ ಮತ್ತು ನೀವು ದಿನವಿಡೀ ಶಕ್ತಿಯಿಂದ ಕೂಡಿರುವಿರಿ. ಊಟಕ್ಕೂ 30 ನಿಮಿಷ ಮೊದಲು ನೀರು ಕುಡಿಯುವುದು ಉತ್ತಮ, ಹೌದು, ಊಟಕ್ಕೂ 30 ನಿಮಿಷ ಮೊದಲು ನೀರು ಕುಡಿಯುವುದು ತೂಕ ಕಡಿಮೆ ಮಾಡುವುದು ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದಂತೆ ಆಗುತ್ತದೆ ಇದರಿಂದ ನೀವು ಹೆಚ್ಚು ಕ್ಯಾಲರಿ ಸೇವಿಸದೇ ಇರುವುದಲ್ಲದೆ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.
ಟಾಯ್ಲೆಟ್ ಪೇಪರ್‌ನಲ್ಲಿ ಒರೆಸುವುದಕ್ಕಿಂತ ನೀರಲ್ಲಿ ತೊಳೆಯೋದೆ ಒಳ್ಳೆಯದಂತೆ !
ಸ್ನಾನದ ನಂತರ- ಸ್ನಾನದ ನಂತರ ನೀವು 1 ಲೋಟ ನೀರನ್ನು ತಪ್ಪದೇ ಕುಡಿಯಿರಿ. ಹೀಗೆ ಮಾಡುವುದರಿಂದ ರಕ್ತ ಪರಿಚಲನೆ ಯನ್ನು ಕ್ರಮವಾಗಿಸುತ್ತದೆ ಮತ್ತು ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ ಸ್ನಾನದ ಬಳಿಕ ತಣ್ಣೀರನ್ನು ಕುಡಿಯಬೇಡಿ. ಆದಷ್ಟು ಸಾಮಾನ್ಯ ಅಥವಾ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ.
ಮಲಗುವ ಮುನ್ನ- ರಾತ್ರಿ ಮಲಗುವ ಮುನ್ನ ನೀರು ಕುಡಿಯುವುದರಿಂದ ನಿಮ್ಮ ದೇಹವು ರಾತ್ರಿಯಿಡೀ ಹೈಡ್ರೇಟ್ ಆಗಿ ರುತ್ತಿತ್ತು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ಹೆಚ್ಚು ನೀರು ಕುಡಿಯಬೇಡಿ ಅಥವಾ ರಾತ್ರಿ ವೇಳೆ ಮತ್ತೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ.
ಮೂತ್ರ ವಿಸರ್ಜನೆ ಮಾಡಿದ ನಂತರ ಅಥವಾ ಮಲ ವಿಸರ್ಜನೆ ಮಾಡಿದ ನಂತರ ನೀರು ಕುಡಿಯಬೇಡಿ. ಇದು ಸ್ನಾನದ ನಂತರ ಕುಡಿಯುವ ನೀರಿಗಿಂತ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.