Asianet Suvarna News Asianet Suvarna News

ಸಿಗರೇಟ್ ಸೇದದಿದ್ರೂ ಶ್ವಾಸಕೋಶದ ಕ್ಯಾನ್ಸರ್ ಬರೋದು ಹೆಚ್ತಿದೆ, ಹುಷಾರು!

ನಾನೇನು ಧೂಮಪಾನ ಮಾಡಲ್ಲ, ನನಗೆ ಶ್ವಾಸಕೋಶದ ಕ್ಯಾನ್ಸರ್ ಬರೋಕೆ ಛಾನ್ಸೆ ಇಲ್ಲ ಅಂತಾ ನೀವಂದುಕೊಂಡಿದ್ರೆ ಅದು ತಪ್ಪು. ಈ ಕ್ಯಾನ್ಸರ್ ಉಳಿದವರನ್ನು ಕಾಡುತ್ತೆ ನೆನಪಿರಲಿ. 
 

Why Are Lung Cancer Cases Shooting Up In Non Smokers roo
Author
First Published Jan 20, 2024, 2:11 PM IST

ಶ್ವಾಸಕೋಶ ನಮ್ಮ ದೇಹದ ಬಹುಮುಖ್ಯ ಭಾಗಗಳಲ್ಲಿ ಒಂದು. ಶ್ವಾಸಕೋಶದ ಆರೋಗ್ಯ ಸರಿಯಾಗಿದ್ದಾಗ ಮಾತ್ರ ಉಸಿರಾಟ ಕ್ರಿಯೆ ಸರಾಗವಾಗಿ ನಡೆಯಲು ಸಾಧ್ಯ. ನಾವು ಆರೋಗ್ಯವಾಗಿದ್ದಾಗ ಶ್ವಾಸಕೋಶ, ಉಸಿರಾಟಕ್ರಿಯೆಗಳ ಬಗ್ಗೆ ಹೆಚ್ಚು ಗಮನ ಕೊಡೋದಿಲ್ಲ. ಆದರೆ ಒಮ್ಮೆ ಶ್ವಾಸಕೋಶದ ಆರೋಗ್ಯ ಹದಗೆಟ್ಟರೆ ಮನುಷ್ಯನ ಪ್ರಾಣಕ್ಕೆ ಕುತ್ತು ಬರಬಹುದು.

ಧೂಮಪಾನ (Smoking) ಮಾಡದೇ ಇರುವವರಲ್ಲಿ ಶ್ವಾಸಕೋಶ (Lungs) ದ ಕ್ಯಾನ್ಸರ್ ಹೆಚ್ಚು :  ಧೂಮಪಾನ ಮಾಡುವವರಿಗೆ ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಧೂಮಪಾನಿಗಳಿಗೆ ಮಾತ್ರ ಕ್ಯಾನ್ಸರ್ (Cancer) ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಅನೇಕ ಮಂದಿ ತಿಳಿದುಕೊಂಡಿದ್ದಾರೆ. ಆದರೆ ಇತ್ತೀಚಿನ ಕೆಲವು ಸಂಶೋಧನೆಗಳು ಹಾಗೂ ಪ್ರಕರಣಗಳು ಇದಕ್ಕೆ ವಿರುದ್ಧವಾಗಿದೆ. ಧೂಮಪಾನ ಮಾಡದೇ ಇರುವವರು ಕೂಡ ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾಗುತ್ತಿದ್ದಾರೆ. ಪ್ರತಿಶತ 10ರಿಂದ 20 ರಷ್ಟು ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಧೂಮಪಾನಿಗಳಲ್ಲದವರಲ್ಲೇ ಕಂಡುಬರುತ್ತಿದೆ. ಹಾಗಾಗಿ ಸಿಗರೇಟ್ ಸೇದದೇ ಇರುವವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಸುರಕ್ಷಿತವಾಗಿದ್ದೇವೆ ಎಂದು ಅಂದುಕೊಳ್ಳುವ ಹಾಗಿಲ್ಲ. ಅದರಿಂದಾಗಿಯೇ ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಎತ್ತರ ಹೆಚ್ಚಾಗಬೇಕು ಅಂತ ಸರ್ಜರಿ ಮಾಡಿಸಿಕೊಂಡವರ ಕಥೆ ಅದೋಗತಿ!

ಅಧ್ಯಯನಗಳು ಎಂದೂ ಧೂಮಪಾನ ಮಾಡದ ಜನರಲ್ಲಿ ಈ ಮಾರಣಾಂತಿಕ ಕಾಯಿಲೆ ಗಮನಾರ್ಹಗಿ ಏರುತ್ತಿದೆ ಎಂದು ಹೇಳಿದೆ. ಶ್ವಾಸಕೋಶದ ಕ್ಯಾನ್ಸರ್ ನಿಂದ ಸಾವನ್ನಪ್ಪುವ ಪ್ರತಿಶತ 20 ರಷ್ಟು ಮಂದಿ ಒಮ್ಮೆಯೂ ಧೂಮಪಾನ ಮಾಡಿಲ್ಲ ಹಾಗೂ ಯಾವುದೇ ರೀತಿಯ ತಂಬಾಕನ್ನು ಬಳಸಿಲ್ಲ ಎಂದು ಅಮೆರಿಕದ ಕ್ಯಾನ್ಸರ್ ಸೊಸೈಟಿ ಹೇಳಿದೆ.

ಧೂಮಪಾನ ಮಾಡದೇ ಇರುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಏಕೆ ಬರುತ್ತೆ? : ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ ಧೂಮಪಾಣಿಗಳಲ್ಲದವರಲ್ಲಿ ಕಂಡುಬರುವ ಪ್ರತಿಶತ 50-60 ರಷ್ಟು ಶ್ವಾಸಕೋಶದ ಕ್ಯಾನ್ಸರ್ ಗಳು ಅಡೆನೊಕಾರ್ಸಿನೋಮ ಅಥವಾ ಶ್ವಾಸಕೋಶದ ಸಣ್ಣ ಗಾಳಿಯ ಚೀಲಗಳನ್ನು ಜೋಡಿಸುವ ಮತ್ತು ಲೋಳೆಯಂತಿರುವ ಜೀವಕೋಶಗಳಿಂದ ಪ್ರಾರಂಭವಾಗುವ ಕ್ಯಾನ್ಸರ್ ಆಗಿದೆ.
ಧೂಮಪಾನ ಮಾಡದೇ ಇರುವವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳಲು ಅನೇಕ ಬಗೆಯ ಕಾರಣಗಳನ್ನು ತಜ್ಞರು ಹೇಳುತ್ತಾರೆ. ಅವುಗಳಲ್ಲಿ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ.

ಜೆನೆಟಿಕ್ ರೂಪಾಂತರ (Genetic Variant) : ಜೆನೆಟಿಕ್ ರೂಪಾಂತರ ಮಾಡಿಕೊಂಡವರಲ್ಲಿ ಕ್ಯಾನ್ಸರ್ ಬೆಳವಣಿಗೆ ಹೆಚ್ಚಾಗಿ ಕಂಡುಬರುತ್ತದೆ. ಡಿಎನ್ಎಯಲ್ಲಿ ಬದಲಾವಣೆಗಳಾದಾಗ ಶ್ವಾಸಕೋಶದಲ್ಲಿರುವ ಆರೋಗ್ಯಕರ ಜೀವಕೋಶಗಳು ಹಾನಿಗೊಳಗಾಗಿ ಕ್ಯಾನ್ಸರ್ ಉಂಟಾಗಲು ಕಾರಣವಾಗುತ್ತದೆ.

ರೇಡಾನ್ ಅನಿಲ : ದೀರ್ಘಕಾಲದವರೆಗೆ ರೆಡಾನ್ ಅನಿಲದ ಸಂಪರ್ಕದಲ್ಲಿರುವುದರಿಂದಲೂ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತದೆ. ಇದು ನೈಸರ್ಗಿಕ ವಿಕಿರಣಶೀಲ ಅನಿಲವಾಗಿದ್ದು ಶ್ವಾಸಕೋಶದ ಕ್ಯಾನ್ಸರ್ ಗೆ ಎರಡನೇ ಪ್ರಮುಖ ಕಾರಣವಾಗಿದೆ. ಅಧ್ಯಯನಗಳ ಪ್ರಕಾರ ಅಮೆರಿಕದಲ್ಲಿ ಪ್ರತಿವರ್ಷ ಸುಮಾರು 21000 ಜನರು ರೆಡಾನ್ ಅನಿಲದಿಂದ ಶ್ವಾಸಕೋಶದ ಕ್ಯಾನ್ಸರ್ ಗೆ ಬಲಿಯಾಗುತ್ತಾರೆ.

ಧೂಮಪಾನಿಗಳೊಂದಿಗೆ ನಿಕಟ ಸಂಪರ್ಕ : ಧೂಮಪಾನ ಮಾಡುವ ವ್ಯಕ್ತಿಗಳ ಜೊತೆ ಸತತವಾಗಿ ಇರುವುದರಿಂದಲೂ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತದೆ. ಪ್ರತಿ ವರ್ಷವೂ ಇದರಿಂದಲೇ ಅನೇಕ ಮಂದಿ ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾಗುತ್ತಾರೆ ಎಂದು ವೈದ್ಯರು ಹೇಳುತ್ತಾರೆ.

ಜನನ ನಿಯಂತ್ರಣ ಮಾತ್ರೆ ಸೇವಿಸೋದ್ರಿಂದ ಕಾಮಾಸಕ್ತಿಯೇ ಕಡಿಮೆಯಾಗುತ್ತಾ?

ಪರಿಸರ ಮಾಲಿನ್ಯ (Environment Pollution) : ಹೆಚ್ಚುತ್ತಿರುವ ವಾಯುಮಾಲಿನ್ಯ, ಡೀಸೆಲ್ ಎಕ್ಸಾಸ್ಟ್, ಕಲ್ನಾರು ಮತ್ತು ಆರ್ಸೆನಿಕ್ ಗಳಿಗೆ ಒಡ್ಡಿಕೊಳ್ಳುವುದರಿಂದ ಧೂಮಪಾನ ಮಾಡದವರು ಕೂಡ ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾಗುತ್ತಾರೆ.

ಶ್ವಾಸಕೋಶದ ಕ್ಯಾನ್ಸರ್ ನ ಇತರ ಲಕ್ಷಣಗಳು : ನಿರಂತರ ಕೆಮ್ಮು ಅಥವಾ ನ್ಯುಮೋನಿಯಾ, ಉಸಿರಾಟದ ತೊಂದರೆ, ಎದೆ ನೋವು, ಉಬ್ಬಸ, ತೂಕ ಇಳಿಕೆ, ಆಯಾಸ, ಭುಜದಲ್ಲಿ ನೋವು, ಮುಖ ಮತ್ತು ಕುತ್ತಿಗೆಯಲ್ಲಿ ಊತ, ಇಳಿ ಬೀಳುವ ಕಣ್ಣು ರೆಪ್ಪೆ ಹಾಗೂ ಸಣ್ಣ ಶಿಷ್ಯ ಮುಂತಾದವುಗಳು ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳಾಗಿವೆ.

Follow Us:
Download App:
  • android
  • ios