Asianet Suvarna News Asianet Suvarna News

ಎತ್ತರ ಹೆಚ್ಚಾಗಬೇಕು ಅಂತ ಸರ್ಜರಿ ಮಾಡಿಸಿಕೊಂಡವರ ಕಥೆ ಅದೋಗತಿ!

ಎಲ್ಲ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಸೌಂದರ್ಯದ ಹಿಂದೆ ಓಡ್ಬಾರದು. ಚೆಂದ ಕಾಣಲು, ಸರಿಯಾಗಿರುವ ದೇಹಕ್ಕೆ ಸೂಜಿ ಚುಚ್ಚಿ ನೋವು ನೀಡೋದಲ್ಲದೆ ನರಕಯಾತನೆ ಅನುಭವಿಸಬೇಕಾಗುತ್ತದೆ. 
 

Instagram Influencer Underwent World Most Painful Surgery For Two Inch Taller Height roo
Author
First Published Jan 20, 2024, 1:00 PM IST | Last Updated Jan 20, 2024, 1:00 PM IST

ಸೌಂದರ್ಯ ವೃದ್ಧಿಗಾಗಿ ಅನೇಕ ಚಿಕಿತ್ಸೆಗಳಿವೆ.  ಜನರು ತುಟಿಯಿಂದ ಹಿಡಿದು ಮೂಗು, ಕಣ್ಣು, ಕಿವಿ, ಸೊಂಟ, ಹೊಟ್ಟೆ ಸೇರಿದಂತೆ ಅನೇಕ ಭಾಗಗಳ ಸರ್ಜರಿ ಮಾಡಿಕೊಳ್ತಾರೆ. ಈ ಸರ್ಜರಿ ಎಲ್ಲ ಬಾರಿ ಯಶಸ್ವಿಯಾಗೋದಿಲ್ಲ. ಅನೇಕ ಬಾರಿ ಸರ್ಜರಿ ಮಾಡಿಸಿಕೊಂಡವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರ ಪ್ರಾಣ ಹೋಗಿದ್ದಿದೆ. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದ ಪ್ರಭಾವಿಯೊಬ್ಬಳು ತೂಕ ಇಳಿಸುವ ಸರ್ಜರಿ ಮಾಡಿಸಿಕೊಂಡು ಹೃದಯಾಘಾಕ್ಕೆ ಒಳಗಾಗಿದ್ದಾಳೆ. 

ಇಂಥ ಅನೇಕ ಸುದ್ದಿಗಳು ಆಗಾಗ ಬರ್ತಿರುತ್ತವೆ. ನೀವು ಈ ಎಲ್ಲ ಸರ್ಜರಿ (Surgery) ಬಗ್ಗೆ ಸಾಕಷ್ಟು ಕೇಳಿರಬಹುದು. ಆದ್ರೆ ಎತ್ತರ ಹೆಚ್ಚು ಮಾಡಿಸಿಕೊಳ್ಳುವ ಸರ್ಜರಿ ಬಗ್ಗೆ ಕೇಳಿದ್ದೀರಾ? ಈಗಿನ ದಿನಗಳಲ್ಲಿ ಜನರು ತಮ್ಮ ಹೈಟ್ (Height) ಬಗ್ಗೆಯೂ ಚಿಂತಿತರಾಗ್ತಾರೆ. ಕುಳ್ಳಗಿರೋದು ಅವರಿಗೆ ಇಷ್ಟವಾಗೋದಿಲ್ಲ. ಇದೇ ಕಾರಣಕ್ಕೆ ಎತ್ತರ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗ್ತಾರೆ. ಅದಕ್ಕಿರುವ ಒಂದು ಮಾರ್ಗ ಎತ್ತರ ಹೆಚ್ಚಿಸಿಕೊಳ್ಳು ಶಸ್ತ್ರಚಿಕಿತ್ಸೆ. ಇದು ಎಲ್ಲರಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗೆ ಬಹಳ ಭಯಾನಕವಾಗಿರುತ್ತದೆ. 29 ವರ್ಷದ ವ್ಯಕ್ತಿಯೊಬ್ಬ ಈ ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಂಡು ಈಗ ಸಂಕಷ್ಟ ಎದುರಿಸುತ್ತಿದ್ದಾನೆ. 

ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಅಂದ್ರೇನು? ಸಣ್ಣ ತಪ್ಪು ಅನಾರೋಗ್ಯಕ್ಕೆ ಹೇಗೆ ಆಗಬಹುದು ಕಾರಣ?

ಅತ್ಯಂತ ಭಯಾನಕ ಆಪರೇಷನ್ (Operation) ಮಾಡಿದ ನಂತ್ರ ಆತನ ಎತ್ತರ 2 ಇಂಚು ಹೆಚ್ಚಾಗಿದೆ. ಆದ್ರೆ ಎತ್ತರ ಹೆಚ್ಚಾಗುವ ಶಸ್ತ್ರಚಿಕಿತ್ಸೆ ಮಾಡಿದ ನಂತ್ರ ಈತನ ಸಮಸ್ಯೆ ಹೆಚ್ಚಾಗಿದೆ. ಈತ  ವಿಪರೀತ ನೋವು ತಿನ್ನುತ್ತಿದ್ದಾನೆ. ಆತನಿಗೆ ಸರಿಯಾಗಿ ಮಲಗೋಕು ಆಗ್ತಿಲ್ಲ. ಅವನ ಹೆಸರು ಜೆಫರ್ಸನ್ ಕೊಸಿಯೊ. ಜೆಫರ್ಸನ್ ಕೊಸಿಯೊ ಕೊಲಂಬಿಯಾ ನಿವಾಸಿ. ಜೆಫರ್ಸನ್ ಕೊಸಿಯೊ ಎತ್ತರ ಮೊದಲು 5 ಅಡಿ 8 ಇಂಚಿತ್ತು. ಆಪರೇಷನ್ ಮೂಲಕ ತನ್ನ ಎತ್ತರವನ್ನು6 ಅಡಿ ಮಾಡಿಸಿಕೊಂಡಿದ್ದಾನೆ. ಜೆಫರ್ಸನ್ ಕೊಸಿಯೊ ಶಸ್ತ್ರಚಿಕಿತ್ಸೆ ಮೂಲಕ ತನ್ನ ಕಾಲುಗಳನ್ನು ಉದ್ದ ಮಾಡಿಕೊಂಡಿದ್ದಾನೆ.

ಜೆಫರ್ಸನ್ ಕೊಸಿಯೊ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿದ್ದಾನೆ. ನಾನು ನಾಲ್ಕು ತಿಂಗಳ ಹಿಂದೆ ಕಾಲು ಉದ್ದ ಮಾಡುವ ಸರ್ಜರಿ ಮಾಡಿಸಿಕೊಂಡಿದ್ದೆ. 11.1 ಫಾಲೋವರ್ಸ್ ಮುಂದೆ ತನ್ನ ಕಥೆಯನ್ನು ಜೆಪರ್ಸನ್ ಹೇಳಿದ್ದಾನೆ. ಶಸ್ತ್ರಚಿಕಿತ್ಸೆಗಾಗಿ ಅವರು 175,000 ಡಾಲರ್  ಅಂದರೆ ಸುಮಾರು 1.45 ಕೋಟಿ ರೂಪಾಯಿ ಖರ್ಚು ಮಾಡಿರೋದಾಗಿ ಅವನು ಹೇಳಿದ್ದಾನೆ.

ಈಗಿರುವ ಎತ್ತರಕ್ಕಿಂತ ನನ್ನ ಎತ್ತರ ಸ್ವಲ್ಪ ಹೆಚ್ಚಾಗಲಿ ಎನ್ನುವ ಆಸೆಯನ್ನು ಜೆಪರ್ಸನ್ ಹೊಂದಿದ್ದನಂತೆ. ವೈದ್ಯರು ಕೂಡ ಇಂಥ ಶಸ್ತ್ರಚಿಕಿತ್ಸೆಯಿಂದ ಯಾವುದೇ ತೊಂದರೆ ಆಗೋದಿಲ್ಲ ಎಂದಿದ್ದರಂತೆ. ಒಂದು ಕಾಲು ಅಥವಾ ಒಂದು ಕೈ ಉದ್ದವಿದ್ದಾಗ ಈ ಚಿಕಿತ್ಸೆ ಮಾಡಲಾಗುತ್ತದೆ. ಕೆಲವೊಮ್ಮೆ ಒಂದು ಕೈ ಕಳೆದುಕೊಂಡಾಗಲೂ ಇಂಥ ಶಸ್ತ್ರಚಿಕಿತ್ಸೆ ನಡೆಯುತ್ತದೆ ಎಂದು ವೈದ್ಯರು ಹೇಳಿದ್ದರಂತೆ. ಇದನ್ನು ಕೇಳಿದ ಜೆಪರ್ಸನ್, ತಾನೂ ಚಿಕಿತ್ಸೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ.

ನಾಲ್ಕು ತಿಂಗಳ ಹಿಂದೆ ಚಿಕಿತ್ಸೆ ನಡೆದಿದೆ. ಈ ಶಸ್ತ್ರಚಿಕಿತ್ಸೆಯ ನಂತರ ಕೊಸಿಯೊ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾನೆ. ಆದರೆ ಅವನು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾನೆ. ನಾನು ಮನುಷ್ಯ. ನನಗೂ ನನ್ನ ಅಂಗಗಳ ಮೇಲೆ ಅತಿಯಾದ ಪ್ರೀತಿ ಇದೆ ಎಂದು ಆತ ಹೇಳಿದ್ದಾನೆ.

ಜನನ ನಿಯಂತ್ರಣ ಮಾತ್ರೆ ಸೇವಿಸೋದ್ರಿಂದ ಕಾಮಾಸಕ್ತಿಯೇ ಕಡಿಮೆಯಾಗುತ್ತಾ?

ನನಗೆ ಇಷ್ಟವಿಲ್ಲದ್ದನ್ನು ಬದಲಿಸಲು ನನ್ನ ಬಳಿ ಸಾಕಷ್ಟು ಹಣವಿದೆ ಎಂದು ಜೆಪರ್ಸರ್ ಹೇಳಿದ್ದಾನೆ. ಆದ್ರೆ ಈತನ ನೋವು (Pain) ಮಾತ್ರ ಕಡಿಮೆ ಆಗಿಲ್ಲ. ರಾತ್ರಿ ಮಾತ್ರೆ ಸೇವನೆ ಮಾಡಿದ್ರೂ ನಿದ್ರೆ ಬರ್ತಾ ಇಲ್ಲ. ನೋವನ್ನು ತಡೆಯಲು ಆಗ್ತಿಲ್ಲ. ಇದೇ ಕಾರಣಕ್ಕೆ ಆತನಿಗೆ ಇನ್ನೊಂದು ಶಸ್ತ್ರಚಿಕಿತ್ಸೆ ಅಗತ್ಯವಿದೆ. ಈಗ ಸ್ನಾಯುಗಳನ್ನು (Muscles) ಮೂಳೆಗಳಿಗೆ ಸಂಪರ್ಕಿಸುವ  ಶಸ್ತ್ರಚಿಕಿತ್ಸೆಗೆ (surgery( ಆತ ಒಳಗಾಗಬೇಕಾಗಿದೆ. ಆತನಿಗೆ 25ರಂದು ಇನ್ನೊಂದು ಶಸ್ತ್ರಚಿಕಿತ್ಸೆ ನಡೆಯಲಿದೆ.
 

Latest Videos
Follow Us:
Download App:
  • android
  • ios