ಬೂಸ್ಟರ್ ಡೋಸ್ ಪಡೆದ 12 ತಿಂಗಳ ನಂತ್ರ ಮತ್ತೊಂದು ಡೋಸ್ ಅಗತ್ಯ ಎಂದ WHO
ಕೊರೋನಾ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಾಗ್ತಿದೆ. ಹೀಗಾಗಿ ವೈರಸ್ ವಿರುದ್ಧ ರಕ್ಷಣೆ ಪಡೆಯೋದು ಬಹಳ ಮುಖ್ಯ. ಹೀಗಾಗಿ ಎರಡು ಡೋಸ್ ಲಸಿಕೆಯ ನಂತ್ರ ಬೂಸ್ಟರ್ ಡೋಸ್ ಪಡೆಯುವಂತೆ ಸಲಹೆ ನೀಡಲಾಗಿದೆ. ಆದ್ರೆ ಬೂಸ್ಟರ್ ಡೋಸ್ ಗೆ ಕೆಲಸ ಮುಗಿದಿಲ್ಲ. ಮತ್ತೊಂದು ಡೋಸ್ ಅನಿವಾರ್ಯ ಎನ್ನುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ.
ದೇಶಾದ್ಯಂತ ಕೊರೊನಾ ಸೋಂಕು ಮತ್ತೊಮ್ಮೆ ವೇಗ ಪಡೆದುಕೊಂಡಿದೆ. ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇದೀಗ ಮತ್ತೊಮ್ಮೆ ಭಾರತದಲ್ಲಿ ಕೊರೊನಾ ವೈರಸ್ ಭೀತಿ ಶುರುವಾಗಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ ದಾಖಲೆ ಪ್ರಕರಣಗಳು ವರದಿಯಾಗಿವೆ.
ದೇಶಾದ್ಯಂತ ಒಟ್ಟು 2,151 ಕೊರೊನಾ (Corona) ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ (Health) ಸಚಿವಾಲಯ ತಿಳಿಸಿದೆ. ಕಳೆದ ಐದು ತಿಂಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಗರಿಷ್ಠ ಸಂಖ್ಯೆಯ ಕರೋನಾ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ 1,222 ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಕೋವಿಡ್‌ನ ಸಕ್ರಿಯ ಪ್ರಕರಣಗಳು ಈಗ 11,903 ಕ್ಕೆ ಏರಿಕೆಯಾಗಿದೆ. ಇದಕ್ಕೂ ಮುನ್ನ, ನಿನ್ನೆ ಅಂದರೆ ಮಂಗಳವಾರ ದೇಶದಲ್ಲಿ 1,573 ಕೊರೊನಾ ರೋಗಿಗಳು ಪತ್ತೆಯಾಗಿದ್ದಾರೆ.
ಕಳಪೆ ಗುಣಮಟ್ಟದ ಔಷಧಿ ತಯಾರಿಸಿದ 18 ಫಾರ್ಮಾ ಕಂಪೆನಿಗಳ ಲೈಸೆನ್ಸ್ ರದ್ದು..!
ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೊನಾ ಲಸಿಕೆ (Vaccine) ಗಳಿಗಾಗಿ ತನ್ನ ಶಿಫಾರಸುಗಳನ್ನು ಬದಲಾಯಿಸಿದೆ. ಕರೋನಾ ಸೋಂಕಿಗೆ ಒಳಗಾಗುವ ಸಾಧ್ಯತೆಯಿರುವ ಜನರು ಬೂಸ್ಟರ್ ಡೋಸ್‌ನ 12 ತಿಂಗಳ ನಂತರ ಹೆಚ್ಚುವರಿ ಡೋಸ್ ಅನ್ನು ಪಡೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಯಸ್ಸಾದವರು ಕೊರೋನಾ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಅದೇ ರೀತಿ ಚಿಕ್ಕ ಮಕ್ಕಳಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಹಿರಿಯರು ಮತ್ತು ಮಕ್ಕಳಿಗೆ ಬೂಸ್ಟರ್ ಡೋಸ್ ನೀಡಿದ 6 ಮತ್ತು 12 ತಿಂಗಳ ನಂತರ ಹೆಚ್ಚುವರಿ ಲಸಿಕೆಗಳನ್ನು ನೀಡಬೇಕು ಎಂದು ಡಬ್ಲ್ಯುಹೆಚ್ ಒ ಹೇಳಿದೆ.
ಆರೋಗ್ಯವಂತ ಮಕ್ಕಳು ಮತ್ತು ಹದಿಹರೆಯದವರು ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಆರೋಗ್ಯವಂತ ಮಕ್ಕಳು ಮತ್ತು ಹದಿಹರೆಯದವರಿಗೆ ಲಸಿಕೆ ಹಾಕುವ ಮೊದಲು ರೋಗದ ಹೊರೆಯನ್ನು ಪರಿಗಣಿಸಬೇಕು ಎಂದು ಸಂಸ್ಥೆ ಹೇಳಿದೆ. ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿರುವ ಜನರಿಗೆ ಮೊದಲು ಲಸಿಕೆ ನೀಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
Hair Fall: ಇಂಥ ಬೆರಳು ಹೊಂದಿರೋರಿಗೆ ತಲೆ ಬೋಳಾಗುವ ಅಪಾಯ ಹೆಚ್ಚು
ಪ್ರಪಂಚದ ವಿವಿಧ ದೇಶಗಳು ತಮ್ಮ ಜನರಿಗೆ ಲಸಿಕೆ ಹಾಕಲು ತಮ್ಮದೆ ವಿಧಾನಗಳನ್ನು ಅಳವಡಿಸಿಕೊಳ್ಳುತ್ತವೆ. ಯುಕೆ ಮತ್ತು ಕೆನಡಾದಂತಹ ಶ್ರೀಮಂತ ರಾಷ್ಟ್ರಗಳು ಕೊರೊನಾದಿಂದ ಹೆಚ್ಚು ಪ್ರಭಾವಿತವಾಗುವ ಜನರಿಗೆ ಕೊನೆಯ ಡೋಸ್ ತೆಗೆದುಕೊಂಡ ಆರು ತಿಂಗಳಲ್ಲಿಯೇ ಬೂಸ್ಟರ್ ಡೋಸ್ ನೀಡಲು ಪ್ರಾರಂಭಿಸಿವೆ. ಅಮೆರಿಕಾ ಐದು ವರ್ಷದೊಳಗಿನ ಮಕ್ಕಳಿಗಾಗಿ ಫಿಜರ್‌ನ ಓಮಿಕ್ರಾನ್ ಬೂಸ್ಟರ್ ಶಾಟ್ ಅನ್ನು ಅನುಮೋದಿಸಿದೆ. ಈಗಾಗಲೇ ಮೂರು ಡೋಸ್ ಪಡೆದ ಮಕ್ಕಳು ಈಗ ನಾಲ್ಕನೇ ಡೋಸ್ ತೆಗೆದುಕೊಳ್ಳಬಹುದು ಎಂದು ಕಂಪನಿ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕರೋನಾ ಲಸಿಕೆಯ ಆರಂಭಿಕ ಎರಡು ಡೋಸ್ ಮತ್ತು ಒಂದು ಬೂಸ್ಟರ್ ಡೋಸ್ ನಂತರ, ಕೊರೊನಾ ಅಪಾಯದಲ್ಲಿರುವ ಜನರಿಗೆ ಹೆಚ್ಚುವರಿ ಬೂಸ್ಟರ್ ಲಸಿಕೆಗಳನ್ನು ನಿಯಮಿತವಾಗಿ ಅನ್ವಯಿಸುವ ಅಗತ್ಯವಿಲ್ಲ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಸೂಚನೆ ನಂತ್ರ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ಈಗಾಗಲೇ ಮೂರು ಡೋಸ್ ಪಡೆದ ಜನರು ನಾಲ್ಕನೇ ಡೋಸ್ ಪಡೆಯುವ ಅಗತ್ಯವಿದೆಯೇ ಎಂದು ಪ್ರಶ್ನೆ ಮಾಡಲು ಶುರುಮಾಡಿದ್ದಾರೆ.
ಕೊರೊನಾ ತೀವ್ರತೆಯನ್ನು ಕಡಿಮೆ ಮಾಡಲು ಬೂಸ್ಟರ್ ಡೋಸ್ ಸಾಕು. ಆದ್ರೆ ಬೂಸ್ಟರ್ ಡೋಸ್ ಪಡೆಯುವ ಅಗತ್ಯವಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೂಸ್ಟರ್ ಡೋಸ್, ಕೊರೊನಾ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ರೆ ಲಸಿಕೆ ಪಡೆಯದ ಜನರಿಗೆ ಸೋಂಕು ಬೇಗ ತಗಲುವುದಲ್ಲದೆ ಅವರು ಸೋಂಕನ್ನು ಹರಡುವ ಕೆಲಸ ಮಾಡ್ತಾರೆ ಎಂದು ತಜ್ಞರು ಹೇಳಿದ್ದಾರೆ.