ಕಳಪೆ ಗುಣಮಟ್ಟದ ಔಷಧಿ ತಯಾರಿಸಿದ 18 ಫಾರ್ಮಾ ಕಂಪೆನಿಗಳ ಲೈಸೆನ್ಸ್ ರದ್ದು..!
ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸುವ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. 18 ಔಷಧ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ: ಕಳಪೆ ಗುಣಮಟ್ಟದ ಔಷಧದ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ರಾಷ್ಟ್ರೀಯ ಮತ್ತು ರಾಜ್ಯ ಔಷಧ ನಿಯಂತ್ರಣ ಪ್ರಾಧಿಕಾರಗಳು 76 ಔಷಧ ಕಂಪನಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದೆ. 18 ಕಂಪನಿಗಳ ಪರವಾನಗಿಯನ್ನು ರದ್ದು ಮಾಡಿವೆ ಎಂದು ಅಧಿಕೃತ ಮೂಲಗಳು ಹೇಳಿವೆ. ಇತ್ತೀಚೆಗೆ ಭಾರತೀಯ ಮೂಲದ ಔಷಧಗಳಿಂದ ವಿದೇಶಗಳಲ್ಲಿ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ಪ್ರಾಧಿಕಾರ ಈ ಕಾರ್ಯಾಚರಣೆ ಕೈಗೊಂಡಿದೆ.
ಕಳೆದ 15 ದಿನಗಳಿಂದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪ್ರಾಧಿಕಾರ ಒಟ್ಟು 76 ಔಷಧ ತಯಾರಕ ಕಂಪನಿಗಳನ್ನು (Pharma firms) ಪರಿಶೀಲಿಸಿದೆ. ಈ ವೇಳೆ ನಕಲಿ ಮತ್ತು ಕಲಬೆರಕೆ ಔಷಧ (Medicine) ತಯಾರಿಸುತ್ತಿದ್ದ 18 ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಿದ್ದು, ಉತ್ಪಾದನೆ (Production)ನಿಲ್ಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ 26 ಕಂಪನಿಗಳಿಗೆ ಈ ಕುರಿತಾಗಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತು ಚಿಕಿತ್ಸೆ ಇನ್ನು ಹಕ್ಕು: ಆರೋಗ್ಯ ಮಸೂದೆ ಅಂಗೀಕರಿಸಿದ ರಾಜಸ್ಥಾನ: ವಿಧಾನಸಭೆ
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) 76 ಔಷಧೀಯ ಕಂಪನಿಗಳ ಮೇಲೆ ತಪಾಸಣೆ ನಡೆಸಿತ್ತು. ಕೇಂದ್ರ ಮತ್ತು ರಾಜ್ಯ ತಂಡಗಳು ಹಠಾತ್ ತಪಾಸಣೆ ನಡೆಸಿದ್ದು, 20 ರಾಜ್ಯಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಕಲಿ (Fake) ಔಷಧದ ಹಾವಳಿಯನ್ನು ತಡೆಗಟ್ಟಲು ವಿಶೇಷವಾಗಿ 203 ಕಂಪನಿಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಅತಿ ಹೆಚ್ಚು ಕಂಪನಿಗಳು (70) ಹಿಮಾಚಲ ಪ್ರದೇಶ ಮೂಲದ್ದಾಗಿವೆ. ಉಳಿದಂತೆ ಉತ್ತರಾಖಂಡ (45), ಮಧ್ಯಪ್ರದೇಶ (23) ನಂತರದ ಸ್ಥಾನದಲ್ಲಿವೆ.
ಭಾರತ ಮೂಲದ ಕಂಪನಿಗಳು ಸಿದ್ಧಪಡಿಸುವ ಔಷಧಗಳ ಗುಣಮಟ್ಟದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಗೊಂದಲ ಉಂಟಾಗುತ್ತಿದೆ. ತಮಿಳುನಾಡು ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಕಂಪನಿಯು ತಾನು ಸಿದ್ಧಪಡಿಸಿದ ಕಣ್ಣಿನ ಡ್ರಾಪ್ಸ್‌ಗಳನ್ನು ಫೆಬ್ರುವರಿಯಲ್ಲಿ ಹಿಂಪಡೆದಿತ್ತು. ಈ ಡ್ರಾಪ್ಸ್‌ಗಳಿಗೂ ಅಮೆರಿಕದಲ್ಲಿ ಕೆಲವರು ದೃಷ್ಟಿ (Vision) ಕಳೆದುಕೊಂಡಿರುವುದಕ್ಕೂ ಸಂಬಂಧ ಇದೆ ಎಂಬ ಆರೋಪ ಕೇಳಿ ಬಂದಿತ್ತು.
ಇನ್ಮುಂದೆ ದೇಶದಲ್ಲೇ ಔಷಧಗಳ ಮೂಲ ಪದಾರ್ಥ, MRI ಮಷಿನ್ ಉತ್ಪಾದನೆಯೂ ಆಗುತ್ತೆ!
ಏ.1 ರಿಂದ ಅಗತ್ಯ ಔಷಧಿ ಬೆಲೆ ಏರಿಕೆಗೆ ಪ್ರಾಧಿಕಾರ ಅನುಮತಿ!
ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಇವೆಲ್ಲವನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಜನರಿಗೆ ಇದೀಗ ಅಗತ್ಯ ಔಷಧಿಗಳ ಬೆಲೆ ಏರಿಕೆ ಬಿಸಿ ತಟ್ಟಿದೆ. ಏಪ್ರಿಲ್ 1 ರಿಂದ ಅಗತ್ಯ ಔಷಧಿಗಳ ಬೆಲೆ ಶೇಕಡಾ 12.12 ರಷ್ಟು ಏರಿಕೆಯಾಗುತ್ತಿದೆ. ಕಾರ್ಡಿಕ್ ಡ್ರಗ್ಸ್, ಪೈನ್ ಕಿಲ್ಲರ್ಸ್, ಆ್ಯಂಟಿ ಇನ್‌ಫೆಕ್ಟೀವ್ಸ್ ಸೇರಿದಂತೆ 800 ಔಷಧಿಗಳ ಬೆಲೆ ಏರಿಕೆಯಾಗುತ್ತಿದೆ. ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಬೆಲೆ ಏರಿಕೆಗೆ ಅನುಮತಿ ನೀಡಿದೆ. ಪ್ರತಿ ವರ್ಷ ಸಗಟು ಬೆಲೆ ಸೂಚ್ಯಂಕ ಬದಲಾಯಿಸುತ್ತದೆ. ಮಾರುಕಟ್ಟೆ ಬೆಲೆಗೆ ತಕ್ಕಂತೆ ಬೆಲೆ ಏರಿಕೆ ಮಾಡಲಾಗುತ್ತದೆ. 2013ರಿಂದ ಪ್ರತಿ ವರ್ಷ ಔಷಧಿಗಳ ಸಗಟು ಬೆಲೆ ಸೂಚ್ಯಂಕ ಬದಲಿಸಲಾಗುತ್ತದೆ. 2022ರ ಸಾಲಿನಲ್ಲಿ ಈ ವರ್ಷದ ಸಗಟು ಬೆಲೆ ಸೂಚ್ಯಂಕ ಶೇಕಡಾ 12.12ರಷ್ಟು ಏರಿಕೆ ಸೂಚಿಸಲಾಗಿತ್ತು. ಇದೀಗ ಏಪ್ರಿಲ್ 1 ರಿಂದ ಅಗತ್ಯ ಔಷಧಿಗಳ ಬೆಲೆ ಏರಿಕೆಯಾಗುತ್ತಿದೆ.
ಆ್ಯಂಟಿ ಬಯೋಟಿಕ್ ಔಷಧಿಗಳು, ಉರಿಯೂತ ನಿವಾರಕ ಔಷಧಿಗಳು, ಕಿವಿ- ಮೂಗು ಹಾಗೂ ಗಂಟಲಿಗೆ ಸಂಬಂಧಿತ ಔಷಧಿಗಳು, ಆ್ಯಂಟಿಸೆಪ್ಟಿಕ್, ಆ್ಯಂಟಿ ಫಂಗಲ್ ಹಾಗೂ ನೋವು ನಿವಾರಕ ಔಷಧಿಗಳ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ. ಕಳೆದ ವರ್ಷ 10.76 ರಷ್ಟು ಬೆಲೆ ಏರಿಕೆಯಾಗಿತ್ತು. ಆರ್ಥಿಕ ಸಲಹೆಗಾರರ ಕಚೇರಿ, ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ ಹಾಗೂ ವಾಣಿಜ್ಯ ಹಾಗೂ ಉದ್ಯಮ ಸಚಿವಾಲಯ ನೀಡಿದ ದತ್ತಾಂಶದ ಆಧಾರವಾಗಿ ಸಗಟು ಬೆಲೆ ಸೂಚ್ಯಂಕವನ್ನು ನಿಗದಿ ಪಡಿಸಲಾಗುತ್ತದೆ.