Hair Fall: ಇಂಥ ಬೆರಳು ಹೊಂದಿರೋರಿಗೆ ತಲೆ ಬೋಳಾಗುವ ಅಪಾಯ ಹೆಚ್ಚು
ನಿಮಗೂ ಕೂದಲು ಉದುರಲು ಶುರುವಾಗಿದ್ಯಾ? ತಲೆ ಮೇಲೆ ಒಂದು ಕೂದಲು ಇರೋದೂ ಅನುಮಾನ ಎನ್ನುವ ಭಯ ಕಾಡ್ತಿದೆಯಾ? ನಿಮ್ಮ ಕೈ ಬೆರಳನ್ನು ಚೆಕ್ ಮಾಡಿಕೊಳ್ಳಿ. ತಜ್ಞರು ಹೇಳಿದಂತೆ ನಿಮ್ಮ ಬೆರಳಿನ ಉದ್ದವಿದ್ರೆ ಬೋಳಿನ ಸಾಧ್ಯತೆ ಇರುತ್ತೆ ಎಚ್ಚರ.
ಸೌಂದರ್ಯಕ್ಕೆ ಮಹಿಳೆ ಮಾತ್ರವಲ್ಲ ಪುರುಷ ಕೂಡ ಆದ್ಯತೆ ನೀಡ್ತಾನೆ. ಮುಖದ ಸೌಂದರ್ಯ ಎಂದಾಗ ಕೂದಲು ಮಹತ್ವ ಪಡೆಯುತ್ತದೆ. ಕಪ್ಪಾದ, ದಟ್ಟ ಕೂದಲನ್ನು ಎಲ್ಲರೂ ಬಯಸ್ತಾರೆ. ಇತ್ತೀಚಿನ ದಿನಗಳಲ್ಲಿ ದಪ್ಪ ಹಾಗೂ ಕಪ್ಪು ಕೂದಲು ಕನಸಿನ ಮಾತಾಗಿದೆ. ಕೆಟ್ಟ ಜೀವನಶೈಲಿ, ದುಶ್ಚಟ, ಕಲುಷಿತ ವಾತಾವರಣ, ಅನಾರೋಗ್ಯ ಸೇರಿದಂತೆ ಅನೇಕ ಕಾರಣಕ್ಕೆ ಪುರುಷರ ತಲೆ ಬೋಳಾಗ್ತಿದೆ.
ಸಣ್ಣ ವಯಸ್ಸಿನಲ್ಲಿಯೇ ಕೂದಲು (Hair) ಕಳೆದುಕೊಳ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಕೂದಲಿನ ರಕ್ಷಣೆಗೆ ಜನರು ನಾನಾ ಪ್ರಯತ್ನ ನಡೆಸ್ತಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗ್ತಿಲ್ಲ. ವಿಜ್ಞಾನಿ (Scientist) ಗಳು ಕೂಡ ಸುಮ್ಮನೆ ಕುಳಿತಿಲ್ಲ. ತಲೆ ಬೋಳಾಗಲು ಕಾರಣವೇನು, ಅದಕ್ಕೆ ಪರಿಹಾರವೇನು ಎಂಬೆಲ್ಲದರ ಬಗ್ಗೆ ಸಂಶೋಧನೆ (Research) ಮಾಡ್ತಾನೆ ಇದಾರೆ. ಈಗ ಹೊಸ ವಿಷ್ಯವೊಂದು ಹೊರಬಿದ್ದಿದೆ. ತಲೆ ಬೋಳು ಮತ್ತು ನಿಮ್ಮ ಕೈಬೆರಳು ಎರಡಕ್ಕೂ ಸಂಬಂಧವಿದೆ ಎನ್ನಲಾಗ್ತಿದೆ. ನಾವಿಂದು ಕೈಬೆರಳು ಹಾಗೂ ಬೋಳು ತಲೆಗೆ ಏನು ಸಂಬಂಧ ಎಂಬುದನ್ನು ನಿಮಗೆ ಹೇಳ್ತೇವೆ.
ಕೈ ಬೆರಳಿ (Finger) ಗೂ, ತಲೆ ಬೋಳಾಕೋಗೂ ಸಂಬಂಧವೇನು? : ತೈವಾನ್ ನಲ್ಲಿ ಬೋಳಾಗ್ತಿರುವ ತಲೆಗೆ ಸಂಬಂಧಿಸಿದಂತೆ ಸಮೀಕ್ಷೆಯೊಂದು ನಡೆದಿದೆ. ಈ ಸಮೀಕ್ಷೆಯಲ್ಲಿ ಆಘಾತಕಾರಿ ಸಂಗತಿ ಹೊರಬಿದ್ದಿದೆ.
ಯಾರ ತೋರು ಬೆರಳು, ಉಂಗುರದ ಬೆರಳಿಗಿಂತ ಚಿಕ್ಕದಾಗಿರುತ್ತದೆಯೋ ಅಂತ ಪುರುಷರಲ್ಲಿ ಬೋಳು (Bald) ಬರುವ ಸಾಧ್ಯತೆ ಆರು ಪಟ್ಟು ಹೆಚ್ಚು ಎಂಬ ವಿಷ್ಯ ಹೊರಬಿದ್ದಿದೆ. ಬಲಗೈನ ಉಂಗುರದ ಬೆರಳಿನ ಉದ್ದ ಪುರುಷರ ತಲೆ ಕೂದಲಿನ ಜೊತೆ ಸಂಬಂಧ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
First Braiding Studio: ಸಾಧುಗಳಿಗಾಗಿಯೇ ಶುರುವಾಗಿದೆ ಹೇರ್‌ಸ್ಟೈಲ್ ಸ್ಟುಡಿಯೋ
ಸಂಶೋಧನೆಗಾಗಿ ವಿಜ್ಞಾನಿಗಳು 37 ವರ್ಷಕ್ಕಿಂತ ಮೇಲ್ಪಟ್ಟ 240 ಪುರುಷರ ಕೈ ಬೆರಳನ್ನು ಪರೀಕ್ಷೆ ಮಾಡಿದ್ದಾರೆ. ಆಂಡ್ರೊಜೆನಿಕ್ ಅಲೋಪೆಸಿಯಾ ಅಂದ್ರೆ ಬೋಳಿನ ಸಮಸ್ಯೆ ಹೊಂದಿದ್ದ ಪುರುಷರು ಇವರಾಗಿದ್ದರು.
ಲೈಂಗಿಕ ಹಾರ್ಮೋನ್ ಡೈಹೈಡ್ರೊಟೆಸ್ಟೋಸ್ಟೆರಾನ್ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾದಾಗ ಸಾಮಾನ್ಯವಾಗಿ ಬೋಳು ಕಾಣಿಸಿಕೊಳ್ಳುತ್ತದೆ. ಬಲಗೈನ ಎರಡನೇ ಬೆರಳು, ನಾಲ್ಕನೇ ಬೆರಳಿಗಿಂತ ಎಷ್ಟು ಚಿಕ್ಕದಾಗಿರುತ್ತದೆಯೋ ಅದು ಬೋಳು ಕಾಡುವ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಉಂಗುರ ಬೆರಳು ದೊಡ್ಡದಾಗಿದ್ದರೆ ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಲೈಂಗಿಕ ಹಾರ್ಮೋನ್ ಅಧಿಕವಾಗಿ ಉತ್ಪಾದನೆಯಾಗೋದ್ರಿಂದ ಹೃದ್ರೋಗ, ವೀರ್ಯದ ಸಂಖ್ಯೆಯಲ್ಲಿ ಇಳಿಕೆ, ಬೋಳುಗೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ.
ಆಂಡ್ರೊಜೆನಿಕ್ ಅಲೋಪೆಸಿಯಾ ಎಂದರೇನು? : ಪುರುಷರಲ್ಲಿ ಕೂದಲು ಉದುರುವುದನ್ನು ಆಂಡ್ರೊಜೆನಿಕ್ ಅಲೋಪೆಸಿಯಾ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಕೂದಲಿನ ಕಿರು ಚೀಲಗಳು ಸಾಯಲು ಶುರುವಾಗುತ್ತವೆ. ಆದ್ರೆ ಹೊಸ ಕೂದಲಿನ ಬೆಳವಣಿಗೆಯಾಗೋದಿಲ್ಲ. ಕೂದಲಿನ ಕಿರುಚೀಲದ ಬಳಿ ರಕ್ತನಾಳಗಳ ಕೊರತೆ ಕಾಣಿಸಿಕೊಂಡಾಗ ಈ ಸಮಸ್ಯೆ ಶುರುವಾಗುತ್ತದೆ.
HEALTH TIPS : ಬ್ರೇಕ್ ಅಪ್ ಆದಾಗ ಕಾಡೋ ಹೃದಯ ಬೇನೆಗೆ ಈ ಹಾರ್ಮೋನ್ ಕಾರಣ
ಆಂಡ್ರೋಜೆನಿಕ್ ಅಲೋಪೆಸಿಯಾ ಲಕ್ಷಣವೇನು? : ನಿಮ್ಮ ಕೂದಲಿನ ಸಂಖ್ಯೆ ವೇಗವಾಗಿ ಕಡಿಮೆಯಾಗ್ತಿದೆ, ಅಲ್ಲಲ್ಲಿ ಬೋಳು ತಲೆ ಕಾಣಿಸಿಕೊಳ್ತಿದೆ ಎಂದಾದ್ರೆ ಇದು ಆಂಡ್ರೋಜೆನಿಕ್ ಅಲೋಪೆಸಿಯಾ ಲಕ್ಷಣವಾಗಿದೆ. ಇದ್ರಲ್ಲಿ ಕೂದಲು ತೆಳುವಾಗಲು ಶುರುವಾಗುತ್ತದೆ. ಹಣೆಯ ಮೇಲ್ಭಾಗದಲ್ಲಿ ಕೂದಲು ಕಡಿಮೆಯಾಗುವುದು ಕೂಡ ಬೋಳು ತಲೆಯ ಸೂಚನೆಯಾಗಿದೆ.
ಆಂಡ್ರೋಜೆನಿಕ್ ಅಲೋಪೆಸಿಯಾಗೆ ಏನು ಚಿಕಿತ್ಸೆ : ನಿಮ್ಮ ಕೂದಲು ಕೂಡ ಹೆಚ್ಚಾಗಿ ಉದುರುತ್ತಿದ್ದು, ಬೆಳವಣಿಗೆಯ ಯಾವುದೇ ಲಕ್ಷಣ ಕಾಣ್ತಿಲ್ಲವೆಂದಾದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಹಣೆ ಬೋಳಾಗ್ತಿದ್ದರೆ ನೀವು ತಕ್ಷಣ ಚಿಕಿತ್ಸೆ ಪಡೆದ್ರೆ ಪರಿಣಾಮ ಕಾಣಬಹುದು. ಇದಕ್ಕೆ ಸೂಕ್ತ ಔಷಧಿ ಹಾಗೂ ಚಿಕಿತ್ಸೆ ಲಭ್ಯವಿದೆ. ವೈದ್ಯರ ಸಲಹೆ ಮೇರೆಗೆ ಅದನ್ನು ಪಾಲಿಸಿದ್ರೆ ನೀವು ಬೋಳಿನ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.