ಜಗತ್ತನ್ನು ಕಾಡಲಿರುವ ಹೊಸ ಸಾಂಕ್ರಾಮಿಕ ಯಾವುದು, 'ಎಕ್ಸ್' ವೈರಸ್ ಬಗ್ಗೆ ಎಲ್ಲೆಡೆ ಚರ್ಚೆ
ಶೀಘ್ರದಲ್ಲೇ ಕೋವಿಡ್‌ಗಿಂತ ಅಪಾಯಕಾರಿಯಾದ ಮತ್ತೊಂದು 'ಮಾರಣಾಂತಿಕ ವೈರಸ್' ದಾಳಿ ಬಗ್ಗೆ WHO ಎಚ್ಚರಿಕೆ ನೀಡಿದೆ. ಹೀಗಾಗಿ ಹೊಸ ಸಾಂಕ್ರಾಮಿಕ ಯಾವುದು ಎಂಬದರ ಕುರಿತಾಗಿ ಜಾಗತಿಕ ಚರ್ಚೆ ನಡೆಯುತ್ತಿದೆ.
ವಾಷಿಂಗ್ಟನ್: ‘70 ಲಕ್ಷ ಜನರನ್ನು ಬಲಿಪಡೆದ ಕೋವಿಡ್‌ಗಿಂತಲೂ ಭೀಕರವಾಗಿರುವ ಮುಂದಿನ ಸಾಂಕ್ರಾಮಿಕ ಎದುರಿಸಲು ಇಡೀ ವಿಶ್ವ ಸನ್ನದ್ಧವಾಗಿರಬೇಕು’ ಎಂಬ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಎಚ್ಚರಿಕೆ ಬೆನ್ನಲ್ಲೇ, ಜಗತ್ತನ್ನು ಮುಂದೆ ಕಾಡಲಿರುವ ಭೀಕರ ಸಾಂಕ್ರಾಮಿಕ ಯಾವುದಾಗಿರಬಹುದು ಎಂಬ ಚರ್ಚೆ ಇದೀಗ ಎಲ್ಲೆಡೆ ಆರಂಭವಾಗಿದೆ.
ಅದರಲ್ಲೂ ಇನ್ನೂ ಪತ್ತೆಯಾಗದ, ಯಾವುದೇ ಸಮಯದಲ್ಲಿ ವಿಶ್ವದ ಯಾವುದೇ ಮೂಲೆಯಿಂದ ಉದ್ಭವಿಸಬಹುದಾದ ‘ಎಕ್ಸ್’ ಸಾಂಕ್ರಾಮಿಕದ (Pandemic) ಕುರಿತೇ ಎಲ್ಲರಲ್ಲಿ ಅತಿ ಹೆಚ್ಚು ಆತಂಕ (Anxiety) ಮೂಡಿದೆ. ಯಾವುದೇ ಹೆಸರು ಇರದ ಸಂಭಾವ್ಯ ಸೋಂಕಿಗೆ ವಾಡಿಕೆಯಂತೆ ‘ಎಕ್ಸ್’ ಎಂದು ಹೆಸರಿಡಲಾಗುತ್ತದೆ. ಈ ರೀತಿಯ ಸೋಂಕು ಬರಬಹುದು ಎಂದು ಕೋವಿಡ್ ನಂತರ ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿಸಿ ಹಲವು ವರ್ಷ ಹಿಂದೆಯೇ ಅದಕ್ಕೆ ‘ಎಕ್ಸ್’ ಎಂದು ಹೆಸರಿಟ್ಟಿತ್ತು.
Covid : ಬೆಂಬಿಡದ ಭೂತ ಕೊರೊನಾದಿಂದ ಕಾಡ್ತಿದೆ ಈ ಸಮಸ್ಯೆ
ಹೀಗೆ ಬರಬಹುದು ಸಾಂಕ್ರಾಮಿಕ?:
ಬಹುತೇಕ ತಜ್ಞರು ಮುಂದಿನ ಸಾಂಕ್ರಾಮಿಕವು ಕೋವಿಡ್ ಮಾದರಿಯಲ್ಲಿ ಪ್ರಾಣಿಗಳಿಂದ (Animal) ಮಾನವರಿಗೆ ಹಬ್ಬಬಹುದು ಎಂದಿದ್ದಾರೆ. ಇನ್ನು ಕೆಲವರು ಜೈವಿಕ ಭಯೋತ್ಪಾದನೆಯ ಕಾರಣ ಹೊಸ ವೈರಸ್ ಜಗತ್ತನ್ನು ಕಾಡಬಹುದು ಎಂದಿದ್ದಾರೆ. ಇನ್ನು ಕೆಲವರು ಆಕಸ್ಮಿಕವಾಗಿ ಪ್ರಯೋಗಾಲಯದಿಂದ ಸೋರಿಕೆಯಾದ ವೈರಸ್ ಜಗತ್ತಿಗೆ (World) ಮಾರಕವಾಗಬಹುದು ಎಂದಿದ್ದಾರೆ. ಇನ್ನು ಕೆಲವರು ಶತಮಾನಗಳಿಂದ ಮಂಜುಗಡ್ಡೆಯಲ್ಲಿ ತಣ್ಣಗೆ ಮಲಗಿರುವ ನಿಗೂಢ ವೈರಸ್ ಜಾಗತಿಕ ತಾಪಮಾನದ (Temparature) ಕಾರಣದಿಂದಾಗಿ ಮರಳಿ ಜೀವ ತಳೆದು ಜಗತ್ತನ್ನು ಆವರಿಸಬಹುದು ಎಂದು ಎಚ್ಚರಿಸಿದ್ದಾರೆ.
ಹೀಗಾಗಿಯ ಎಕ್ಸ್ ಸೋಂಕು ಸೇರಿದಂತೆ ಇಂಥ ಯಾವುದೇ ಸಾಂಕ್ರಾಮಿಕ ಎದುರಿಸಲು ಇಡೀ ವಿಶ್ವ ಒಂದಾಗಬೇಕಿದೆ. ಇಂಥ ಸಾಂಕ್ರಾಮಿಕದ ಮೇಲೆ ನಿಗಾ ಇಡುವ, ಆ ಕುರಿತು ನಡೆಸುವ ಸಂಶೋಧನೆಗೆ ಎಲ್ಲಾ ದೇಶಗಳು ಆರ್ಥಿಕ ನೆರವು ನೀಡಬೇಕು ಎಂದು ವೈದ್ಯಕೀಯ ತಜ್ಞರು (Medical experts) ಕರೆ ನೀಡಿದ್ದಾರೆ.
ಹೊಸ ಡೆಡ್ಲಿ ರೂಪಾಂತರಿ ಉಗಮದ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
3 ವರ್ಷಗಳ ಕಾಲ ಇಡೀ ಜಗತ್ತೇ ತಲ್ಲಣಪಡುವಂತೆ ಮಾಡಿದ ಕೋವಿಡ್ ಸಾಂಕ್ರಾಮಿಕ ಇನ್ನೇನು ಅಂತ್ಯದತ್ತ ಹೆಜ್ಜೆ ಇಟ್ಟಿದೆ ಎನ್ನುವ ಹೊತ್ತಿನಲ್ಲೇ, ‘ಕೋವಿಡ್‌ಗಿಂತಲೂ ಭೀಕರವಾಗಿರುವ ಮುಂದಿನ ಸಾಂಕ್ರಾಮಿಕ ಎದುರಿಸಲು ಇಡೀ ವಿಶ್ವ ಸನ್ನದ್ಧವಾಗಿರಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಕೆಲ ದಿನಗಳ ಹಿಂದೆ ಎಚ್ಚರಿಕೆ ನೀಡಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಟೆಡ್ರೋಸ್ ಅಧನೋಮ್ ಘೇಬ್ರೆಯೇಸಸ್, ‘ಕೋವಿಡ್ ಸಾಂಕ್ರಾಮಿಕ (Pandemic) ಅಂತ್ಯವು, ಜಾಗತಿಕ ಆರೋಗ್ಯ ಅಪಾಯದ ಅಂತ್ಯವಲ್ಲ. ಇನ್ನೊಂದು ರೂಪಾಂತರಿಯ (Variant) ಉಗಮ ಆಗಬಹುದು ಎಂದು ಎಚ್ಚರಿಸಿದ್ದರು.
ಮಾಸ್ಕ್‌ನಿಂದ ನಗೋದು ಹೇಗಂತ ಮರ್ತು ಹೋಯ್ತು, ನಗೋಕು ಟ್ರೈನಿಂಗ್ ಪಡೀತಿದ್ದಾರೆ ಈ ದೇಶದ ಜನ!
ಅದರಿಂದ ಹೊಸ ಕೇಸು ಮತ್ತು ಸಾವಿನ ಪ್ರಮಾಣದಲ್ಲಿ (Death rate) ಏರಿಕೆ ಸಾಧ್ಯತೆ ಇದೆ. ಜತೆಗೆ, ಹೊಸದೊಂದು ರೋಗಕಾರಕ ಅಂಶದ ಉಗಮವು ಹಿಂದಿನ ಸಾಂಕ್ರಾಮಿಕಕ್ಕಿಂತ ಭೀಕರವಾಗುವ ಅಪಾಯ ನಮ್ಮ ಮುಂದೆ ಸದಾ ಇದ್ದೇ ಇದೆ. ಹೀಗಾಗಿ ಇಂಥ ಪರಿಸ್ಥಿತಿ ಎದುರಿಸಲು ಜಗತ್ತು ಸದಾ ಕಾಲ ಸನ್ನದ್ಧವಾಗಿರಬೇಕು’ ಎಂದು ಹೇಳಿದ್ದರು. ಕೋವಿಡ್-19 ಸಾಂಕ್ರಾಮಿಕ ಆರೋಗ್ಯ ತುರ್ತು ವಿಭಾಗದಿಂದ ಹೊರಗಿಡಲಾಗಿರುವುದು, ಅಪಾಯ ದೂರವಿದೆ ಎಂಬುದು ಅರ್ಥವಲ್ಲ. ಏಕೆಂದರೆ ಮತ್ತೊಂದು ಹೊಸ ಮಾರಣಾಂತಿಕ ವೈರಸ್ ಹೊರಹೊಮ್ಮಬಹುದು, ಇದು ಹೆಚ್ಚಿನ ಪ್ರಮಾಣದಲ್ಲಿ ವಿನಾಶವನ್ನು ಉಂಟುಮಾಡುತ್ತದೆ. COVID-19 ಗಿಂತ ಮಾರಣಾಂತಿಕ ವೈರಸ್‌ಗೆ ಜಗತ್ತು ಸಿದ್ಧವಾಗಿರಬೇಕು. ಎಂದು WHO ಮುಖ್ಯಸ್ಥರು ಹೇಳಿದ್ದಾರೆ.
‘ಮುಂದಿನ ಸಾಂಕ್ರಾಮಿಕ ನಮ್ಮ ಮುಂದೆ ಎದುರಾದಾಗ ನಾವೆಲ್ಲಾ ಅದನ್ನು ಒಂದಾಗಿ, ಸಮಾನವಾಗಿ ಮತ್ತು ನಿರ್ಣಾಯಕ ರೀತಿಯಲ್ಲಿ ಎದುರಿಸಲು ಸಿದ್ಧರಾಗಿರಬೇಕು’ ಎಂದು ಕರೆ ಕೊಟ್ಟರು. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಪಟ್ಟಿಯಿಂದ ಕೊರೋನಾವನ್ನು ಕೈಬಿಟ್ಟಿತ್ತು. 4 ವರ್ಷದಲ್ಲಿ ಲಕ್ಷಾಂತರ ಜನರು ಸೋಂಕಿಗೆ ಬಲಿಯಾಗಿದ್ದರು.