Covid : ಬೆಂಬಿಡದ ಭೂತ ಕೊರೊನಾದಿಂದ ಕಾಡ್ತಿದೆ ಈ ಸಮಸ್ಯೆ

ಕೊರೊನಾ ನಮ್ಮನ್ನು ಬಿಡುವಂತೆ ಕಾಣ್ತಿಲ್ಲ. ಈಗಿನ ದಿನಗಳಲ್ಲಿ ಮತ್ತೆ ಕೊರೊನಾ ಸದ್ದು ಮಾಡ್ತಿರೋದು ಒಂದು ಕಡೆಯಾದ್ರೆ ಇನ್ನೊಂದು ಕಡೆ ಕೊರೊನಾದಿಂದ ಚೇತರಿಸಿಕೊಂಡವರಿಗೂ ನೆಮ್ಮದಿ ಸಿಗ್ತಿಲ್ಲ. ಒಂದಾದ್ಮೇಲೆ ಒಂದು ಖಾಯಿಲೆ ಬೆನ್ನು ಬಿಡದೆ ಕಾಡ್ತಿದೆ.
 

After Being Corona Now These Diseases Are Easily Taking In Their Grip

ಕೊರೊನಾ ಬಂದಿತ್ತು, ಹೇಗೋ ಬದುಕಿ ಬಂದ್ವಿ. ಈಗೆಲ್ಲ ಅರಾಂ ಅಂತ ಹೇಳೋ ಸ್ಥಿತಿ ನಮ್ಮದಲ್ಲ. ಕೊರೊನಾ ನಮ್ಮ ದೇಹದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೊರೊನಾ ಬರೀ ತನ್ನ ಅಬ್ಬರವನ್ನು ಮಾತ್ರ ತೋರಿಸಿಲ್ಲ. ನಮ್ಮ ದೇಹವನ್ನು ಅಪಾಯಕ್ಕೆ ತಳ್ಳಿ ಹೋಗಿದೆ. ಕೊರೊನಾ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಎರಡನ್ನೂ ಹಾಳು ಮಾಡಿದೆ. ಕೊರೊನಾ ವೈರಸ್‌ನಿಂದಾಗಿ ಹೃದಯ, ಶ್ವಾಸಕೋಶ, ಮೂತ್ರಪಿಂಡ ಮತ್ತು ಇತರ ಅಂಗಾಂಗಳ ಆರೋಗ್ಯ ಹದಗೆಟ್ಟಿದೆ.  

ಕೊರೊನಾ (Corona) ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬದುಕಿ ಬಂದಿದ್ದಿದ್ದೇವೆ ಎನ್ನುವವರು ನೀವಾಗಿದ್ದರೆ, ನಿಮ್ಮ ಜೀವನಶೈಲಿ ಮೇಲೆ ಹಿಡಿತ ಸಾಧಿಸಿ. ತಪ್ಪಾದ ಜೀವನಶೈಲಿ (Lifestyle) ಹಾಗೂ ಅಜಾಗರೂಕತೆ ನಿಮ್ಮನ್ನು ಮತ್ತೆ ಅಪಾಯದ ಕೂಪಕ್ಕೆ ತಳ್ಳಬಹುದು. ಕೆಲ ಖಾಯಿಲೆ (Disease) ನಿಮ್ಮ ದೇಹವನ್ನು ಮುತ್ತಿಕೊಳ್ಳಬಹುದು. ಕೊರೊನಾ ಅಡ್ಡಪರಿಣಾಮದಿಂದಾಗಿ  ಅನೇಕ ರೋಗಗಳು ಕಾಡ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಾವಿಂದು ಕೊರೊನಾ ನಂತ್ರ ನಮ್ಮ ದೇಹವನ್ನು ಕಾಡುವ ರೋಗಗಳ ಯಾವುವು ಎಂಬುದನ್ನು ನಿಮಗೆ ಹೇಳ್ತೇವೆ.

ಸರಳವಾದ್ರೂ ಪರಿಣಾಮಕಾರಿ ಈ ಚಿಕಿತ್ಸಾ ವಿಧಾನಗಳು..

ಕೊರೊನಾ ನಂತ್ರ ಕಾಡ್ತಿದೆ ಈ ಎಲ್ಲ ಸಮಸ್ಯೆ :

ಮಾನಸಿಕ ಖಾಯಿಲೆ (Psychological Problem): ಕೊರೊನಾ ನಂತ್ರ ಖಿನ್ನತೆ (depression), ಆತಂಕ, ಜ್ಞಾಪಕ ಶಕ್ತಿ ಕೊರತೆ ಸೇರಿದಂತೆ ಕೆಲ ಮಾನಸಿಕ ಸಮಸ್ಯೆಗೆ ಜನರು ಒಳಗಾಗ್ತಿದ್ದಾರೆ. ಕೊರೊನಾದಲ್ಲಿ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದರೆ, ಅನೇಕ ದಿನಗಳ ಕಾಲ ಪ್ರತ್ಯೇಕವಾಗಿದ್ದರೆ ಅಥವಾ ಆರ್ಥಿಕ (Economic) ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅಂಥವರಿಗೆ ಮಾನಸಿಕ (Mental) ಖಾಯಿಲೆ ಕಾಡೋದು ಹೆಚ್ಚು ಎನ್ನುತ್ತಾರೆ ತಜ್ಞರು.

ಉಸಿರಾಟದ ಸಮಸ್ಯೆ (Breathing Problem): ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಕಫ ಹೆಚ್ಚಾಗ್ತಿದೆ. ಒಮ್ಮೆ ಕಾಣಿಸಿಕೊಳ್ಳುವ ಕೆಮ್ಮು ಮೂರು ತಿಂಗಳಾದ್ರೂ ಹೋಗ್ತಿಲ್ಲ. ಆಗಾಗ ಜ್ವರ, ನೆಗಡಿ, ಕಫದ ಸಮಸ್ಯೆಯಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಇದ್ರ ಜೊತೆ ಉಸಿರಾಡಲು ಸಮಸ್ಯೆ, ಎದೆಯಲ್ಲಿ ಬಿಗಿತದ ಅನುಭವವಾಗ್ತಿದೆ ಎಂಬ ದೂರುಗಳು ಕೂಡ ಕೇಳಿ ಬಂದಿವೆ. ಕೊರೊನಾಗಿಂತ ಮೊದಲೇ ಉಸಿರಾಟದ ಸಮಸ್ಯೆಯಿದ್ದವರು ಮತ್ತಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.

Health Tips: ಅಧಿಕ ಪ್ರೊಟೀನ್‌ನಿಂದ ಕಿಡ್ನಿಗೆ ಹಾನಿ, ಇದು ನಿಜವೇ?

ಅಧಿಕ ರಕ್ತದೊತ್ತಡ (High Blood Pressure) : ಕೊರೊನಾಕ್ಕೆ ಒಳಗಾಗಿದ್ದ ಜನರಲ್ಲಿ ಅಧಿಕ ರಕ್ತದೊತ್ತಡ ಕಾಣಿಸಿಕೊಂಡಿದೆ. ಇದನ್ನು ಕೊರೊನಾದ ಅಡ್ಡಪರಿಣಾಮ ಎನ್ನಲಾಗ್ತಿದೆ. ಸಾಂಕ್ರಾಮಿಕ ರೋಗದ ನಂತ್ರ ಬಿಪಿಗೆ ಒಳಗಾಗ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ಹೃದಯ ಸಮಸ್ಯೆ (Heart Issues) : ಕೊರೊನಾ ನಂತ್ರ ಹೃದಯದ ಆರೋಗ್ಯವೂ ಏರುಪೇರಾಗಿದೆ. ಹೃದಯ ಬಡಿತದಲ್ಲಿ ಏರಿಳಿತ, ರಕ್ತಹೆಪ್ಪುಗಟ್ಟುವಿಕೆ, ಹೃದಯಾಘಾತದ ಪ್ರಕರಣ ಹೆಚ್ಚಾಗ್ತಿದೆ. ಸಣ್ಣ ವಯಸ್ಸಿವರಿಗೇ ಹೃದಯಾಘಾತವಾಗ್ತಿದೆ. 

ಕ್ಯಾನ್ಸರ್ (Cancer) : ಕೊರೊನಾ ನಮ್ಮ ದೇಹದ ಎಲ್ಲ ಭಾಗಕ್ಕೂ ಹಾನಿಯುಂಟು ಮಾಡಿದೆ. ದೀರ್ಘಕಾಲ ಕೊರೊನಾ ವಿರುದ್ಧ ಹೋರಾಡಿದ ಜನರಲ್ಲಿ ರೋಗ ನಿರೋಧಕ ಶಕ್ತಿ ಮಾತ್ರ ಕಡಿಮೆಯಾಗಿಲ್ಲ. ಪ್ರೋಟೀನ್ ಕೂಡ ಹಾನಿಗೊಳಗಾಗಿದೆ. ಇದ್ರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗಿದೆ. 

ಹೆಚ್ಚಿದೆ ಈ ಖಾಯಿಲೆ : ಬರೀ ಹೃದಯ ಸಮಸ್ಯೆ, ಕ್ಯಾನ್ಸರ್ ಮಾತ್ರವಲ್ಲ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕೂಡ ಜನರನ್ನು ಬೆಂಬಿಡದೆ ಕಾಡ್ತಿದೆ. ಕೊರೊನಾಗಿಂತ ಮೊದಲು ಆರೋಗ್ಯವಾಗಿದ್ದ ವ್ಯಕ್ತಿಗಳು ಈಗ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗ್ತಿರೋದಾಗಿ ದೂರಿದ್ದಾರೆ.

ಈ ಸಮಸ್ಯೆಯಿಂದ ರಕ್ಷಣೆ ಹೇಗೆ? : ಕೊರೊನಾ ನಂತ್ರ ಕಾಡುವ ಅಡ್ಡಪರಿಣಾಮದಿಂದ ರಕ್ಷಣೆಬೇಕೆಂದ್ರೆ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿರುವ ಆಹಾರ ಸೇವನೆ ಮಾಡ್ಬೇಕು. ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಬೇಕು. ನಿಯಮಿತ ವ್ಯಾಯಾಮ, ಯೋಗ, ಪ್ರಾಣಾಯಾಮದ ಜೊತೆಗೆ ಆರೋಗ್ಯಕರ ಆಹಾರ ತಿನ್ನಬೇಕು. 
 

Latest Videos
Follow Us:
Download App:
  • android
  • ios