Nuclear Family: ವಿಭಕ್ತ ಕುಟುಂಬದಲ್ಲಿ ನೀವಿದ್ರೆ ಆರೋಗ್ಯದ ಬಗ್ಗೆ ಕಾಳಜಿವಹಿಸಿ
ಮನೆಯಲ್ಲಿ ಒಬ್ಬರು ಖಾಯಿಲೆ ಬಿದ್ರೂ ನಿತ್ಯದ ಕೆಲಸದಲ್ಲಿ ಏರುಪೇರಾಗುತ್ತದೆ. ಅದ್ರಲ್ಲೂ ಮನೆಯ ಮಹಿಳೆ ಹಾಸಿಗೆ ಹಿಡಿದ್ರೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಸಣ್ಣ ಕುಟುಂಬದಲ್ಲಿ ಜನರಿಗೆ ರೋಗ ಕಾಡಿದ್ರೆ ಹೇಗೆ ಚೇತರಿಸಿಕೊಳ್ಳಬೇಕು, ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದು ಕೂಡ ತಿಳಿದಿರಬೇಕಾಗುತ್ತದೆ.
ಹಿಂದೆ ಒಂದೇ ಮನೆಯಲ್ಲಿ ಹತ್ತರಿಂದ ಹದಿನೈದು ಜನರು ವಾಸ ಮಾಡ್ತಿದ್ದರು. ಆದ್ರೀಗ ಅಂಥ ಮನೆಗಳು ಕಣ್ಣಿಗೂ ಕಾಣೋದಿಲ್ಲ. ಅವಿಭಕ್ತ ಕುಟುಂಬ ವಿದೇಶದಲ್ಲಿ ಮಾತ್ರವಲ್ಲ ಭಾರತದಲ್ಲೂ ಕಣ್ಮರೆಯಾಗ್ತಿದೆ. ಜನರು ಚಿಕ್ಕ ಸಂಸಾರಕ್ಕೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. ವಿಭಕ್ತ ಕುಟುಂಬದ ವಾಸದಿಂದ ಲಾಭದ ಜೊತೆ ನಷ್ಟವೂ ಇದೆ. ವಿಭಕ್ತ (Nuclear) ಕುಟುಂಬ ಅಂದ್ರೆ ಕೇವಲ ಪತಿ – ಪತ್ನಿ ಜೊತೆ ಮಕ್ಕಳ ವಾಸವಾಗಿದೆ. ಇದ್ರಲ್ಲಿ ಕಡಿಮೆ ಜನರಿರುತ್ತಾರೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಓದಲು ಮನೆಯಿಂದ ಹೊರಗೆ ಬೀಳ್ತಾರೆ. ಆಗ ಉಳಿಯೋದು ಪತಿ – ಪತ್ನಿ ಮಾತ್ರ. ಚಿಕ್ಕ ಕುಟುಂಬ (Family ) ದಲ್ಲಿ ಒಬ್ಬರು ಖಾಯಿಲೆಗೆ ಬಿದ್ರೆ ಸಾಕಷ್ಟು ಸಮಸ್ಯೆಯಾಗುತ್ತದೆ.
ಅವಿಭಕ್ತ ಕುಟುಂಬದಲ್ಲಿ ಒಬ್ಬರು ಹಾಸಿಗೆ ಹಿಡಿದ್ರೆ ಇನ್ನೊಬ್ಬರು ಇರ್ತಾ ಇದ್ದರು. ಆದ್ರೆ ವಿಭಕ್ತ ಕುಟುಂಬದಲ್ಲಿ ಹಾಗಿರುವುದಿಲ್ಲ. ಇರುವ ಮೂರರಲ್ಲಿ ಮಾಡುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ಹಾಗಾಗಿ ವಿಭಕ್ತ ಕುಟುಂಬದಲ್ಲಿರುವ ಜನರು ಅನಾರೋಗ್ಯದಿಂದ ಬೇಗ ಹೇಗೆ ಚೇತರಿಸಿಕೊಳ್ಳಬೇಕು ಎಂಬುದನ್ನು ಅರಿತಿರಬೇಕು. ಹಾಗೆಯೇ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಟಿಪ್ಸ್ ಅನುಸರಿಸಬೇಕು. ವಿಭಕ್ತ ಕುಟುಂಬದಲ್ಲಿರುವವರು ಆರೋಗ್ಯಕ್ಕೆ ಸಂಬಂಧಿಸಿದಂತೆ ಏನೆಲ್ಲ ಮಾಡಬೇಕು ಎಂಬುದನ್ನು ನಾವಿಂದು ಹೇಳ್ತೆವೆ.
ಸಣ್ಣ ರೋಗ (Disease) ಬಂದರೂ ನೀವದನ್ನು ಅಲಕ್ಷ್ಯಿಸಬೇಡಿ : ಪ್ರತಿ ದಿನ ಒಂದೇ ರೀತಿ ಇರೋದಿಲ್ಲ. ಪ್ರತಿಯೊಬ್ಬರು ಒಂದಲ್ಲ ಒಂದು ಖಾಯಿಲೆಗೆ ತುತ್ತಾಗುತ್ತಾರೆ. ನಿತ್ಯದಂತೆ ನೀವು ಕೆಲಸ ಮಾಡಲು ಸಾಧ್ಯವಾಗ್ತಿಲ್ಲ, ದೇಹ ದುರ್ಬಲವಾಗ್ತಿದೆ ಎನ್ನಿಸಿದ್ರೆ, ಮೈ ಬಿಸಿಯಾದ್ರೆ ಅದನ್ನು ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಸಣ್ಣ ಸಮಸ್ಯೆ ಮುಂದೆ ದೊಡ್ಡ ಖಾಯಿಲೆಗೆ ಕಾರಣವಾಗಬಹುದು. ಹಾಗಾಗಿ ವೈದ್ಯರ ಜೊತೆ ಚರ್ಚೆ ನಡೆಸಿ. ಕುಟುಂಬಸ್ಥರಿಗೆ ಸಮಯವಿಲ್ಲವೆಂದ್ರೆ ನೀವೇ ವೈದ್ಯರನ್ನು ಸಂಪರ್ಕಿಸಿ.
ಯಾರೂ ಇಲ್ಲ ಅಂತ ಕೊರಗ್ತಿದ್ದೀರಾ? ಇದಕ್ಕೆ ಮೂಲ ಕಾರಣ ಎರಡೇ
ವೈದ್ಯರ ನೀಡುವ ಚೀಟಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ : ನಾವೊಂದು ಸಮಸ್ಯೆ ಅಂತ ವೈದ್ಯರ ಬಳಿ ಹೋಗಿರ್ತೇವೆ. ಆಗ ವೈದ್ಯರು ಔಷಧಿ ಚೀಟಿಯನ್ನು ನಮಗೆ ನೀಡ್ತಾರೆ. ನಿಮಗೆ ಸಮಸ್ಯೆ ಕಡಿಮೆಯಾದ್ರೂ ನೀವದನ್ನು ಇಟ್ಟುಕೊಂಡಿರಬೇಕು. ಇನ್ನೊಮ್ಮೆ ಇದೇ ಸಮಸ್ಯೆ ನಿಮಗೆ ಕಾಡಿದಾಗ ನೀವು ವೈದ್ಯರಿಗೆ ಇದನ್ನು ತೋರಿಸಬಹುದು. ಆಗ ಪದೇ ಪದೇ ಇದೇ ಸಮಸ್ಯೆ ಯಾಕೆ ಕಾಡ್ತಿದೆ ಎನ್ನುವುದನ್ನು ವೈದ್ಯರು ಪತ್ತೆ ಮಾಡುವ ಪ್ರಯತ್ನ ನಡೆಸುತ್ತಾರೆ. ಹಿಂದೆ ಕೊಟ್ಟ ಮಾತ್ರೆಯ ಬಗ್ಗೆಯೂ ಅವರಿಗೆ ನೆನಪಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಇಟ್ಟುಕೊಳ್ಳಿ : ನಿಮಗೆ ಯಾವುದೇ ಗಂಭೀರ ಕಾಯಿಲೆ ಇದ್ದರೆ ಅದಕ್ಕೆ ಸಂಬಂಧಿಸಿದ ಡೈರಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಅಪಘಾತವಾದಾಗ ಅಥವಾ ರಸ್ತೆಯಲ್ಲಿ ಹೋಗುವಾಗ ತಲೆಸುತ್ತಿ ನೀವು ಬಿದ್ದರೆ ನಿಮ್ಮ ಸಮಸ್ಯೆ ಏನು ಎಂಬುದು ಡೈರಿಯಿಂದ ತಿಳಿಯುತ್ತದೆ. ಹಾಗಾಗಿ ನೀವು ಯಾವಾಗ್ಲೂ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಡೈರಿ ಇಟ್ಟುಕೊಳ್ಳಿ. ಅದ್ರಲ್ಲಿ ವೈದ್ಯರ ಹೆಸರು, ನಂಬರ್, ನಿಮ್ಮ ಆಪ್ತರ ವಿಳಾಸ, ನಿಮ್ಮ ಮನೆ ವಿಳಾಸ ಎಲ್ಲವನ್ನೂ ಬರೆದಿಡಿ.
ಸ್ಮಾರ್ಟ್ಫೋನ್ ಸೇರಿದಂತೆ ಅಪ್ಲಿಕೇಷನ್ ಬಗ್ಗೆ ತಿಳಿದಿರಿ : ಈಗ ನಮ್ಮ ಕೈನಲ್ಲಿ ಮೊಬೈಲ್ ಇದ್ರೆ ಇಡೀ ಪ್ರಪಂಚ ನಮ್ಮ ಜೊತೆಗಿದ್ದಂತೆ. ಹಾಗಾಗಿ ಪ್ರತಿಯೊಬ್ಬರೂ ವಿಶೇಷವಾಗಿ ವಿಭಕ್ತ ಕುಟುಂಬದಲ್ಲಿ ವಾಸಿಸುವ ಜನರು ಸ್ಮಾರ್ಟ್ಫೋನ್ ಬಳಸಬೇಕು. ಸ್ಮಾರ್ಟ್ಫೋನ್ ಜೊತೆ ಅಪ್ಲಿಕೇಷನ್ ಬಳಕೆ ತಿಳಿದಿರಬೇಕು.
ಮೆದುಳು ತಿನ್ನುವ ಅಮೀಬಾ: ಅಪಾಯಕಾರಿ ಸೋಂಕಿಗೆ ದಕ್ಷಿಣ ಕೊರಿಯಾದಲ್ಲಿ ಮೊದಲ ಬಲಿ
ಎಲ್ಲ ಕುಟುಂಬದವರು ತಿಳಿದಿರಬೇಕು ಈ ಸಂಗತಿ : ಕುಟುಂಬದಲ್ಲಿ ಪರಸ್ಪರ ನೆರವು ಅಗತ್ಯವಾಗುತ್ತದೆ. ಯಾವುದೇ ವ್ಯಕ್ತಿ ಖಾಯಿಲೆಗೆ ಒಳಗಾದ್ರೂ ಕುಟುಂಬದ ಇನ್ನೊಬ್ಬ ವ್ಯಕ್ತಿ ಅವರಿಗೆ ಬೆಂಬಲ ನೀಡಬೇಕು. ರೋಗಿಗೆ ಮಾನಸಿಕ ಮತ್ತು ದೈಹಿಕ ಬೆಂಬಲ ನೀಡಬೇಕಾಗುತ್ತದೆ. ಅವರ ಆರೋಗ್ಯವನ್ನು ವಿಚಾರಿಸುತ್ತಿರಬೇಕಾಗುತ್ತದೆ.