ಶವಸಂಭೋಗ ಅತ್ಯಾಚಾರ ಅಲ್ವಂತೆ, ಹಾಗಾದ್ರೆ ಮತ್ತೇನು?

ಹೆಣ್ಣಿನ ಶವದ ಮೇಲೆ ಸಂಭೋಗ ನಡೆಸುವುದು ಅತ್ಯಾಚಾರವಲ್ಲ ಎಂದು ಛತ್ತೀಸ್‍ಗಢ ಹೈಕೋರ್ಟ್ ತೀರ್ಪು ನೀಡಿದೆ. ಮೃತದೇಹದ ಮೇಲಿನ  ಸುಪ್ರೀಂ ಕೋರ್ಟ್ ಕೂಡ ಶವಸಂಭೋಗಕ್ಕೆ ಕಾನೂನು ರಚಿಸುವಂತೆ ಸೂಚಿಸಿತ್ತು, ಆದರೆ ಅದಿನ್ನೂ ಆಗಿಲ್ಲ. ಇದೇನು ವಿಕೃತಿ? ಇಂಥ ಪಾತಕಕ್ಕೆ ಶಿಕ್ಷೆ ಇಲ್ಲವೇ? 

What is necrophilia and why court says it is not physical abuse bni

ಹೆಣ್ಣಿನ ಶವದ ಮೇಲೆ ಸಂಭೋಗ ನಡೆಸುವುದು ಭಾರತದ ಅಪರಾಧ ಕಾನೂನುಗಳ ಪ್ರಕಾರ ಅತ್ಯಾಚಾರ ಎನಿಸುವುದಿಲ್ಲ ಎಂದು ಛತ್ತೀಸ್‍ಗಢ ಹೈಕೋರ್ಟ್ ತೀರ್ಪು ನೀಡಿದೆ. ಇದೊಂದು ವಿಚಿತ್ರ ತೀರ್ಪು ಅನ್ನಬಹುದು. ಆದರೆ ಕಾನೂನು ಪ್ರಕಾರ ಇದು ಸರಿ. ಪಾತಕಿ ನೀಲಕಾಂತ ಎಂಬವನು ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ, ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದ. ಆಕೆಯನ್ನು ಕೊಂದ ಬಳಿಕವೂ ಅತ್ಯಾಚಾರ ನಡೆಸಿದ್ದ. ಇದಕ್ಕೆ ಸಾಕ್ಷಿಗಳು ಲಭ್ಯ ಇವೆ. ಅತ್ಯಾಚಾರ, ಕೊಲೆಗೆ ಈತನಿಗೆ ಶಿಕ್ಷೆ ಆಗಿದೆ. ಆದರೆ ಕೊಲೆಯ ನಂತರದ ಈ ಪಾತಕಕ್ಕಾಗಿ ಆತನ ಮೇಲೆ ಅತ್ಯಾಚಾರದ ಶಿಕ್ಷೆ ವಿಧಿಸುವಂತಿಲ್ಲ. ಯಾಕೆಂದರೆ ಅತ್ಯಾಚಾರ ಎನ್ನಬೇಕಿದ್ದರೆ ಸಂತ್ರಸ್ತೆ ಬದುಕಿರಬೇಕು. ಮೃತದೇಹದ ಮೇಲೆ ಅತ್ಯಾಚಾರ ಎಸಗಿರುವುದು ನಿಸ್ಸಂದೇಹವಾಗಿ ಭಯಾನಕ ಅಪರಾಧ. ಆದರೆ ರೇಪ್‌ ಕಾನೂನು, ಪೋಕ್ಸೋ ಕಾನೂನಿನಡಿ ಶಿಕ್ಷೆ ವಿಧಿಸುವಂತಿಲ್ಲ. ಮತ್ತೆ ಯಾವುದರಡಿ ಶಿಕ್ಷೆ? ಅದಕ್ಕೆ ಕಾನೂನಿನಲ್ಲಿ ಏನು ಅವಕಾಶವಿದೆ ಎಂದು ನೋಡಬೇಕಷ್ಟೆ. ಇದೆಂಥಾ ವಿಚಿತ್ರ ಪರಿಸ್ಥಿತಿ!

ಈ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯವೂ ಇಂಥದೇ ತೀರ್ಪು ನೀಡಿತ್ತು. ಅಲ್ಲೂ ಅತ್ಯಾಚಾರ ಹಾಗೂ ಕೊಲೆಗೆ ಆ ಪಾಪಿಗೆ ಶಿಕ್ಷೆಯಾಗತ್ತು. ಅದನ್ನು ಸುಪ್ರೀಂ ಕೋರ್ಟೂ ಎತ್ತಿ ಹಿಡಿದಿತ್ತು. ಆದರೆ ಶವಸಂಭೋಗಕ್ಕೆ ಶಿಕ್ಷೆಯಾಗಲಿಲ್ಲ. ಆಗ ಸುಪ್ರೀ ಕೋರ್ಟ್‌ ಕೂಡ, "ಶವಸಂಭೋಗವೂ ಗಂಭೀರ ಸ್ವರೂಪದ ಅಪರಾಧ, ವಿಕೃತಿ. ಅದಕ್ಕೂ ಶಿಕ್ಷೆಯಾಗಬೇಕು. ಅದಕ್ಕೆ ಕಾನೂನು ಮಾಡಬೇಕು" ಎಂದಿತ್ತು. ಅದಿನ್ನೂ ಆಗಿಲ್ಲ. 

ಶವಸಂಭೋಗ ಅತ್ಯಾಚಾರ ಅಲ್ಲವೆಂದಾದರೆ, ಮತ್ತೇನು? ಇಂಗ್ಲಿಷ್‌ನಲ್ಲಿ ಇದಕ್ಕೆ ಹೆಸರು ನೆಕ್ರೋಫೀಲಿಯಾ. ಇದೊಂದು ಗುಣಪಡಿಸಲಾಗದ ಸೈಕೋ ಗುಣ. ಇವರು ಮಾನಸಿಕ ಸಮಸ್ಯೆಯ ತುತ್ತ ತುದಿಯಲ್ಲಿ ಇರುತ್ತಾರೆ. ಇವರನ್ನು ಯಾವ ಔಷಧವೂ, ಯಾವ ಕೌನ್ಸೆಲಿಂಗೂ ಗುಣಪಡಿಸಲಾರದು. ಇವರಿಗೆ ಎರಡು ಬಗೆ- ಶವವೊಂದು ಸಿಕ್ಕಿದರೆ ಅದರ ಜೊತೆ ಸಂಭೋಗ ನಡೆಸುವವರು. ಇನ್ನೊಂದು ಬಗೆ- ಹೆಣ್ಣನ್ನು ಕೊಂದು ಅತ್ಯಾಚಾರ ನಡೆಸುವವರು. ಇವರು ಅತ್ಯಂತ ಅಪಾಯಕಾರಿ. ಮೇಲ್ನೋಟಕ್ಕೆ ಇಂಥ ಪಾತಕಿಗಳಲ್ಲಿ ಈ ವಿಕೃತಿ ಇರುವುದು ಗಮನಕ್ಕೇ ಬರುವುದಿಲ್ಲ. ಸ್ತ್ರೀ ಒಂಟಿಯಾಗಿ ಸಿಕ್ಕಿದಾಗ ಅವರಲ್ಲಿರುವ ರಾಕ್ಷಸ ಎಚ್ಚೆತ್ತುಕೊಳ್ಳುತ್ತಾನೆ. 

ಮೊದಲ ಬಗೆಯ ಶಂವಸಂಭೋಗಿಗಳಲ್ಲಿ ಹಲವು ಬಗೆಯವರು ಇರಬಹುದು. ಕೆಲವರು ನಿರಂತರವಾಗಿ ಶವಸಂಭೋಗವನ್ನೇ ರೂಢಿಯಾಗಿ ಮಾಡಿಕೊಂಡಿರಬಹುದು. ಇಂತವರು ಸಾಮಾನ್ಯವಾಗಿ ಸ್ಮಶಾನದಲ್ಲಿ, ಮಾರ್ಚುರಿಗಳಲ್ಲಿ ಇರುತ್ತಾರೆ. ಶವದ ಮನೆಯಲ್ಲಿ ಇರುವ ಹಲವರು ಯಾವಾಗಲೂ ಶವಗಳನ್ನು ನೋಡೀ ನೋಡಿ ಇಂಥ ಆಕರ್ಷಣೆ ಬೆಳೆಸಿಕೊಂಡಿರಬಹುದು. ಅವರು ಹೀಗೆ ಮಾಡಬಹುದು. ಇವರಿಗೆ ಸಾಮಾನ್ಯವಾಗಿ ಸ್ತ್ರೀಯರನ್ನು ಬೆತ್ತಲೆಯಾಗಿ ನೋಡಿದರೂ ಉದ್ರೇಕ ಉಂಟಾಗಲಾರದು. ಆದರೆ ಶವ ಕಂಡಾಗ ಉದ್ರೇಕವಾಗುತ್ತದೆ.

ಇನ್ನು ಕೆಲವರು ಸಿಟ್ಟಿನಿಂದ ರೊಚ್ಚಿಗೆದ್ದು ವ್ಯಕ್ತಿಯನ್ನು ಕೊಂದು ಶವಸಂಭೋಗ ನಡೆಸುವವರು. ಇವರಿಗೆ ಸೆಕ್ಸ್ ಹಾಗೂ ಅಪರಾಧ ಎರಡೂ ಸೇರಿದಾಗ ಉಂಟಾಗುವ ಒಂದು ಬಗೆಯ ಥ್ರಿಲ್‌ನಿಂಧ ಸುಖ ಸಿಗುತ್ತದೆ. ಕೊಲೆ ಮಾಡಿದ ನಂತರ ದೇಹದ ಮೇಲೆ ಲೈಂಗಿಕ ಕ್ರಿಯೆ ಎಸಗುವಾಗ ಇನ್ನೂ ದೇಹದ ಶಾಖ ಪೂರ್ತಿ ಆರಿರುವುದಿಲ್ಲವಾದ್ದರಿಂದ, ಜೀವಂತ ವ್ಯಕ್ತಿಯನ್ನೇ ಭೋಗಿಸಿದ್ದೇವೆ ಎಂದು ಇವರು ಅಂದುಕೊಳ್ಳುತ್ತಾರೆ. 

ಇನ್ನು ಹಲವರು ತಂತ್ರ, ವಾಮಾಚಾರ ಸಾಧನೆ ಮಾಡುವವರು ಕೂಡ ಶವಸಂಭೋಗ ಮಾಡುತ್ತಾರೆ. ಇಂಥವರು ಅಪರೂಪ. ಇವರಿಗೆ ಶವಸಂಭೋಗ ಗೀಳಲ್ಲ; ಇವರು ಸಾಧನೆಯ ಹುಚ್ಚಿನಿಂದ, ಅಪರೂಪಕ್ಕೊಮ್ಮೆ ಹಾಗೆ ಮಾಡುವವರು. ಇವರಲ್ಲಿ ನಿಜವಾದ ಸಾಧಕರೂ ಇರುತ್ತಾರೆ, ಬೋಗಸ್‌ ವ್ಯಕ್ತಿಗಳೂ ಇರುತ್ತಾರೆ. ತಂತ್ರದಲ್ಲಿ, ಶವಕ್ಕೂ ನಿಜ ಜೀವಕ್ಕೂ ವ್ಯತ್ಯಾಸ ಹಾಗೂ ಜಿಗುಪ್ಸೆಯ ಭಾವನೆಯನ್ನು ಹೊಡೆದೋಡಿಸಲು ಹೀಗೆ ಮಾಡಲಾಗುತ್ತದೆ. 

ಕುಡಿಯೋದು ಒಳ್ಳೇದಲ್ಲ, ಆದ್ರೂ ಕುಡಿದ ಹ್ಯಾಂಗೋವರ್ ಗೆ ಇದು ಮದ್ದು

ಶವಸಂಭೋಗದ ಮನಸ್ಥಿತಿಗೆ ಕಾರಣವಾಗುವುದು ಏನು? ಇದೊಂದು ಮನೋರೋಗ, ಮನೋವಿಕೃತಿ ಅಷ್ಟೇ. ಯಾವುದ್ಯಾವುದೋ ಕಾರಣಗಳಿಂದಾಗಿ ಇವರಿಗೆ ಶವವೇ ಜೀವಂತ ಮನುಷ್ಯರಿಗಿಂತ ಹೆಚ್ಚು ಉದ್ರೇಕಕಾರಿಯಾಗಿ ಕಾಣುತ್ತದೆ. ಇಂಥವರನ್ನು ಔಷಧ ಹಾಗೂ ಕೌನ್ಸೆಲಿಂಗ್‌ನಿಂಧ ಸರಿಪಡಿಸಬಹುದು. ಆದರೆ ಇವರು ಮನೋರೋಗದ ತುರೀಯ ಅವಸ್ಥೆಗೆ ಮುಟ್ಟಿರುವುದರಿಂದ ಗುಣಮುಖರಾಗುವುದು ಕಷ್ಟಸಾಧ್ಯ. ಕೆಲವರಿಗೆ ಶವದ ಬದಲು ನಿಶ್ಚೇತನ ಸೆಕ್ಸ್ ಗೊಂಬೆಯನ್ನು ನೀಡಿ ಸರಿಪಡಿಸುವ ಯತ್ನವನ್ನೂ ತಜ್ಞರು ನಡೆಸಿದ್ದಾರೆ.  ಸಂಭೋಗಕ್ಕಾಗಿ ಶವವನ್ನು ಪಡೆಯಲೆಂದೇ ಕೊಲೆ ಮಾಡುವವರು ಮಾತ್ರ ತೀರಾ ಅಪಾಯಕಾರಿ. ಇವರು ಸಮಾಜಘಾತುಕರು. ಇಂತವರು ಯಾವುದೇ ಕ್ಷಮೆಯಿಲ್ಲದೆ ಗಲ್ಲಿಗೇರಲು ಸೇರಲು ಲಾಯಕ್ಕು. 

ವಿಪರೀತವಾಗ್ತಿದೆ ಹೃದಯಾಘಾತ ಕೇಸ್, ಹಾರ್ಟ್ ಅಟ್ಯಾಕ್ ಲಕ್ಷಣ ಗೊತ್ತಾಗ್ತಿದ್ದ ಹಾಗೆ ಹೀಗೆ ಮಾಡಿ..
 

Latest Videos
Follow Us:
Download App:
  • android
  • ios