ಕುಡಿಯೋದು ಒಳ್ಳೇದಲ್ಲ, ಆದ್ರೂ ಕುಡಿದ ಹ್ಯಾಂಗೋವರ್ ಗೆ ಇದು ಮದ್ದು
ಹೊಸ ವರ್ಷದಲ್ಲಿ ಪಾರ್ಟಿಗಳ ಸಂಖ್ಯೆ ಹೆಚ್ಚಿರುತ್ತೆ. ಜನರು ವರ್ಷಾಚರಣೆ ನೆಪದಲ್ಲಿ ಹೆಚ್ಚು ಮದ್ಯಪಾನ ಮಾಡ್ತಾರೆ. ಅದ್ರ ಹ್ಯಾಂಗೊವರ್ ನಿಂದ ತಪ್ಪಿಸಿಕೊಳ್ಳಲು ಏನು ಮಾಡ್ಬೇಕು ಎಂಬ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.
ಹೊಸ ವರ್ಷ (New Year)ಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ನ್ಯೂ ಇಯರ್ ಪಾರ್ಟಿಗೆ ಇಡೀ ಜಗತ್ತು ಸಿದ್ಧವಾಗಿದೆ. ಆಲ್ಕೋಹಾಲ್ (alcohol) ಸೇವನೆ ಆರೋಗ್ಯಕ್ಕೆ ಹಾನಿಕರ. ಇದು ಗೊತ್ತಿದ್ರೂ ಜನರು ನ್ಯೂ ಇಯರ್ ಪಾರ್ಟಿ (party)ಯಲ್ಲಿ ಆಲ್ಕೋಹಾಲ್ ಸೇವನೆ ಮಾಡ್ತಾರೆ. ಇದ್ರಿಂದ ನಾನಾ ಸಮಸ್ಯೆಗಳು ಅವರನ್ನು ಕಾಡುತ್ತವೆ. ವರ್ಷದ ಮೊದಲ ದಿನವನ್ನು ಅದ್ಧೂರಿಯಾಗಿ ಸ್ವಾಗತಿಸಬೇಕು ಅಂದ್ಕೊಂಡವರಿಗೆ ರಾತ್ರಿಯ ಪಾರ್ಟಿ ಹ್ಯಾಂಗೊವರ್ ಕಡಿಮೆ ಆಗಿರೋದಿಲ್ಲ. ತಲೆ ಭಾರ, ವಾಕರಿಕೆ, ಸುಸ್ತು, ತಲೆ ನೋವು ಕಾಣಿಸಿಕೊಳ್ಳುತ್ತದೆ. ಪಾರ್ಟಿ ಹ್ಯಾಂಗೊವರ್ (hangover) ನಿಮಗೆ ಇರಬಾರದು ಅಂದ್ರೆ ಏನು ಮಾಡ್ಬೇಕು ಎಂಬುದನ್ನು ತಜ್ಞರು ಹೇಳಿದ್ದಾರೆ.
ವೈದ್ಯರು ಹೇಳೋದೇನು? : ಆಲ್ಕೋಹಾಲ್ ಸೇವನೆ ಮಾಡ್ಬೇಡಿ ಎಂದು ವೈದ್ಯರು ಎಷ್ಟೇ ಹೇಳಿದ್ರೂ ಕೇಳದ ಜನರ ಸಂಖ್ಯೆ ಹೆಚ್ಚಿದೆ. ಈ ಸಮಯದಲ್ಲಿ ವೈದ್ಯರು ಮದ್ಯಪಾನಿಗಳಿಗೆ ಕಿವಿ ಮಾತೊಂದನ್ನು ಹೇಳಿದ್ದಾರೆ. ಮದ್ಯಪಾನ ಮಾಡಿಯೇ ಮಾಡ್ತೇವೆ ಎನ್ನುವವರು ಪಾರ್ಟಿ ಮೊದಲು ಏನು ಮಾಡ್ಬೇಕು ಎಂಬುದನ್ನು ವೈದ್ಯರು ಹೇಳಿದ್ದಾರೆ. ಡೇಲಿ ಮೇಲ್ ವರದಿ ಪ್ರಕಾರ, ಡಾ. ನೀನಾ ಚಂದ್ರಶೇಖರನ್, ಆಲ್ಕೋಹಾಲ್ ಸೇವನೆ ಮಾಡುವ ಮೊದಲು ಚೀಸ್ ತಿನ್ನುವಂತೆ ಸಲಹೆ ನೀಡಿದ್ದಾರೆ. ಟಿಕ್ ಟಾಕ್ ನಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದು, ಹ್ಯಾಂಗ್ ಓವರ್ ಕಾಡ್ಬಾರದು ಅಂದ್ರೆ ಮದ್ಯಪಾನಕ್ಕಿಂತ ಮೊದಲು ಚೀಸ್ ಸೇವನೆ ಮಾಡ್ಬೇಕು ಎಂದವರು ಹೇಳಿದ್ದಾರೆ.
ಚಳಿಗಾಲದಲ್ಲಿಯೇ ಅತಿಹೆಚ್ಚು ಹೃದಯಾಘಾತ; ನಿಮ್ಮ ಹೃದಯ ಕಾಪಾಡಲು ಈ ಸಲಹೆ ಪಾಲಿಸಿ
ಚೀಸ್ ಹೆಚ್ಚಿನ ಪ್ರಮಾಣದ ಪ್ರೋಟೀನ್, ಕೊಬ್ಬು ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಡೈರಿ ಉತ್ಪನ್ನವಾಗಿದೆ. ಇದು ಹೊಟ್ಟೆಗೆ ಹೋದ ನಂತ್ರ ಆಲ್ಕೋಹಾಲ್ ಹೀರಿಕೊಳ್ಳುವಿಕೆಯನ್ನು ಇದು ಕಡಿಮೆ ಮಾಡುತ್ತದೆ. ಆಲ್ಕೋಹಾಲ್ ಹೊಟ್ಟೆಗ ಹೋದಾಗ ಅದು ಚಯಾಪಚಯ ಕ್ರಿಯೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಚೀಸ್ ವಿಟಮಿನ್ ಬಿ ಮತ್ತು ಕ್ಯಾಲ್ಸಿಯಂ ಹೊಂದಿದೆ. ಆದ್ದರಿಂದ, ಆಲ್ಕೋಹಾಲ್ ಕುಡಿಯುವ ಮೊದಲು ಚೀಸ್ ತಿಂದ್ರೆ ಪ್ರಯೋಜನಕಾರಿ ಎಂದು ವೈದ್ಯರು ಹೇಳಿದ್ದಾರೆ. ಡೈರಿ ಉತ್ಪನ್ನಗಳು ಮಾದಕ ವಸ್ತುಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಗುವಿನಂತೆ ಗಾಢ ನಿದ್ದೆ ಮಾಡಲು 10-3-2-1-0 ನಿಯಮ ಫಾಲೋ ಮಾಡಿದ್ರೆ ಸಾಕು!
ಹ್ಯಾಂಗೊವರ್ ತಪ್ಪಿಸಲು ಈ ಸಲಹೆ ಪಾಲಿಸಿ :
* ಪಾರ್ಟಿಗೆ ಮೊದಲು ಚೀಸ್ ಜೊತೆಗೆ ಡ್ರೈ ಫ್ರೂಟ್ಸ್ ಮತ್ತು ಹಣ್ಣುಗಳನ್ನು ನೀವು ತಿನ್ನಬೇಕು.
* ಪ್ರತಿ ಡ್ರಿಂಕ್ ಮೊದಲು ನೀವು ನೀರು ಕುಡಿಯಬೇಕು. ಅಂದ್ರೆ ಒಂದು ಗ್ಲಾಸ್ ಆಲ್ಕೋಹಾಲ್ ಕುಡಿದ ನಂತ್ರ ಸ್ವಲ್ಪ ನೀರನ್ನು ಸೇವನೆ ಮಾಡ್ಬೇಕು. ಹೀಗೆ ಮಾಡಿದ್ರೆ ಮದ್ಯದ ಪರಿಣಾಮ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
* ಸ್ವೀಟ್ ಪಾನೀಯ ಅಥವಾ ಕಾಕ್ಟೇಲ್ ಗಳನ್ನು ಸೇವನೆ ಮಾಡಬೇಡಿ.
* ಪಾರ್ಟಿಯಲ್ಲಿ ಆಲ್ಕೋಹಾಲ್ ಕುಡಿಯುವ ಸಂದರ್ಭದಲ್ಲಿ ಆಗಾಗ ನಿಂಬು ಪಾನಕವನ್ನು ಕೂಡ ನೀವು ಕುಡಿಯಬಹುದು.
* ಪಾರ್ಟಿ ಅಬ್ಬರದಲ್ಲಿ ಅತಿಯಾದ ಆಲ್ಕೋಹಾಲ್ ಸೇವನೆ ಒಳ್ಳೆಯದಲ್ಲ. ನಿಮ್ಮ ಮಿತಿಯ ಬಗ್ಗೆ ಗಮನ ಇರಲಿ. ಹಾಗೆಯೇ ಪಾರ್ಟಿ ಮುಗಿದ ನಂತ್ರ ಎಳೆ ನೀರಿನ ಸೇವನೆ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಆಲ್ಕೋಹಾಲ್ ನಿರಂತರ ಸೇವನೆ ಹಾಗೂ ಅತಿಯಾದ ಸೇವನೆ ನಿಮ್ಮ ದೇಹದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಹೊಸ ವರ್ಷಾಚರಣೆಯಲ್ಲಿ ಆಲ್ಕೋಹಾಲ್ ರಹಿತ ಪಾರ್ಟಿ ಉತ್ತಮ ಮಾರ್ಗವಾಗಿದೆ.