ಜಸ್ಟ್ 2 ವಾರ ಇಂಟರ್ನೆಟ್ ಆಫ್ ಮಾಡಿದ್ರೆ ಇಷ್ಟೆಲ್ಲಾ ಲಾಭಗಳಿವೆ...ಸಂಶೋಧನೆಯಿಂದ ಬಹಿರಂಗ!

Synopsis
ಎರಡು ವಾರಗಳ ಕಾಲ ಇಂಟರ್ನೆಟ್ ಬಳಕೆಯಿಂದ ದೂರವಿರುವುದರಿಂದ ಮಾನಸಿಕ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿರುವುದನ್ನು ಅಧ್ಯಯನಗಳು ತೋರಿಸಿವೆ.
ನಾವೀಗ ಎಲ್ಲದಕ್ಕೂ ಗೂಗಲ್ (Google) ಅನ್ನೇ ಅವಲಂಬಿಸಿದ್ದೇವೆ. ನಮ್ಮ ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವ ಗೂಗಲ್ ಬಹುತೇಕರ ಮಿತ್ರನೂ ಹೌದು. ಗೂಗಲ್ ಓಕೆ, ಆದರೆ ಇಂಟರ್ನೆಟ್ ನಮ್ಮ ಮೆದುಳಿಗೆ ಅಷ್ಟು ಒಳ್ಳೆಯದಲ್ಲವಂತೆ. ಇತ್ತೀಚಿನ ಸಂಶೋಧನೆಯು ಇಂಟರ್ನೆಟ್ ಅನ್ನು ಅತಿಯಾಗಿ ಬಳಸುವುದರಿಂದ ಅರಿವಿನ ಕಾರ್ಯದ ಮೇಲೆ, ವಿಶೇಷವಾಗಿ ಗಮನ ಮತ್ತು ಸ್ಮರಣ ಭಾಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ. ಅಷ್ಟೇ ಅಲ್ಲ, ದೀರ್ಘಕಾಲದ ಇಂಟರ್ನೆಟ್ ಬಳಕೆಯಿಂದ ಆತಂಕ, ಖಿನ್ನತೆ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರುವುದನ್ನು ಅಧ್ಯಯನಗಳು ಸೂಚಿಸಿವೆ. ಹಾಗೆಯೇ ಆನ್ಲೈನ್ನಲ್ಲಿ ಮಾಹಿತಿ ನಿರಂತರವಾಗಿ ಲಭಿಸುವುದರಿಂದ ವಿಷಯಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನೆನಪಿನ ಕೌಶಲಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈಗ್ಯಾಕೆ ಈ ವಿಷಯಗಳ ಪ್ರಸ್ತಾಪ ಎಂದು ನಿಮಗನಿಸಿದರೂ ಶೀರ್ಷಿಕೆ ನೋಡಿ ನಾವಿಲ್ಲಿ ಹೇಳಲು ಹೊರಟಿರುವ ವಿಷಯಗಳ ಬಗ್ಗೆ ನಿಮಗೆ ಈಗಾಗಲೇ ಗೊತ್ತಿರುತ್ತದೆ. ಹೌದು, ಸತತ ಎರಡು ವಾರಗಳ ಕಾಲ ಇಂಟರ್ನೆಟ್ ಆಫ್ ಮಾಡುವುದರಿಂದ ನಿಮ್ಮ ಮೆದುಳು 10 ವರ್ಷದವರಷ್ಟು ಕಿರಿಯದಾಗುವುದು ಎಂದು ಸಂಶೋಧನೆ ಬಹಿರಂಗಪಡಿಸಿದೆ!
ಅಧ್ಯಯನ ಹೇಳುವುದೇನು?
ಜನರು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಇಂಟರ್ನೆಟ್ ಬಳಸುವುದನ್ನು ಕೇವಲ ಎರಡು ವಾರಗಳ ಕಾಲ ನಿಲ್ಲಿಸಿದಾಗ ಏನಾಯಿತು ಎಂಬುದನ್ನು ಸಂಶೋಧಕರು ಅಧ್ಯಯನ ಮಾಡಿದರು. ಈ ಅಧ್ಯಯನವು 18 ರಿಂದ 74 ವರ್ಷ ವಯಸ್ಸಿನ 467 ಜನರನ್ನು ಒಳಗೊಂಡಿತ್ತು. ನಿರಂತರ ಇಂಟರ್ನೆಟ್ ಬಳಕೆ ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡುವ ಗುರಿಯನ್ನು ಹೊಂದಿತ್ತು. ಇಂದು, 90% ಕ್ಕಿಂತ ಹೆಚ್ಚು ಅಮೆರಿಕನ್ನರು ಸ್ಮಾರ್ಟ್ಫೋನ್ ಹೊಂದಿದ್ದು, ಇಂಟರ್ನೆಟ್ ಯಾವಾಗಲೂ ಲಭ್ಯವಿರುವುದು ಇತ್ತೀಚಿನ ಬದಲಾವಣೆಯಾಗಿದೆ. ಭಾಗವಹಿಸುವವರ ಆರೋಗ್ಯದ ಮಾಹಿತಿ ಪಡೆಯಲು ಸಂಶೋಧಕರು ಅಧ್ಯಯನದ ಆರಂಭದಲ್ಲಿ, ಮಧ್ಯದಲ್ಲಿ ಮತ್ತು ಕೊನೆಯಲ್ಲಿ ಮನಸ್ಥಿತಿ ಮತ್ತು ಗಮನವನ್ನು ಅಳೆಯುತ್ತಾರೆ. ಕನಿಷ್ಠ ಒಂದು ಪ್ರದೇಶದಲ್ಲಿ ಸುಮಾರು 91% ಜನರು ಸುಧಾರಿಸಿದ್ದಾರೆ ಎಂದು ವರದಿ ಮಾಡಲಾಗಿದೆ. ಇವರಲ್ಲಿ 71% ಜನರು ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿರುವುದು ವರದಿಯಾಗಿದೆ ಮತ್ತು 73% ಜನರು ಇಂಟರ್ನೆಟ್ ವಿರಾಮದ ನಂತರ ಒಟ್ಟಾರೆಯಾಗಿ ಹೆಚ್ಚು ಸಕಾರಾತ್ಮಕ ಭಾವನೆ ಹೊಂದಿದ್ದಾರೆ.
ಈ ಇಂಟರ್ನೆಟ್ ವಿರಾಮದ ನಂತರ 91% ಭಾಗವಹಿಸುವವರು ಮಾನಸಿಕವಾಗಿ ಉತ್ತಮವಾಗಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾಲಯದ ಮನಶ್ಶಾಸ್ತ್ರಜ್ಞ ಆಡ್ರಿಯನ್ ಎಫ್ ವಾರ್ಡ್, ಇಂಟರ್ ನೆಟ್ ಸಂಪರ್ಕ ಕಡಿತಗೊಂಡ ನಂತರ ಭಾಗವಹಿಸುವವರ ಮಾನಸಿಕ ಆರೋಗ್ಯ ಸುಧಾರಿಸಿರುವುದಲ್ಲದೆ, ತಮ್ಮ ಗಮನವನ್ನು ಕೇಂದ್ರಿಕರಿಸಿದ್ದಾರೆ ಎಂದು ಹಂಚಿಕೊಂಡರು. ಅಧ್ಯಯನದ ಒಂದು ಆಶ್ಚರ್ಯಕರ ಸಂಶೋಧನೆಯೆಂದರೆ ಖಿನ್ನತೆಯ ಲಕ್ಷಣಗಳಲ್ಲಿನ ಇಳಿಕೆ. ಕೆನಡಾದ ಆಲ್ಬರ್ಟಾ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ನೋಹ್ ಕ್ಯಾಸ್ಟೆಲೊ ಈ ವಿಚಾರದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಫಲಿತಾಂಶ ದೊರೆತಿದೆ ಎಂದರು.
ಲಿವರ್ ಡ್ಯಾಮೇಜ್ ನಿಂದ-ಕ್ಯಾನ್ಸರ್ ತನಕ: ವೈರಲ್ ಆಗಿರುವ ದುಬೈ ಚಾಕೊಲೇಟ್ ತಿನ್ನೋ ಮುನ್ನ ಎಚ್ಚರ!
ಕೆಲವು ಜನರಿಗೆ ಮಾತ್ರ ಇಂಟರ್ನೆಟ್ ನಿಂದ ದೂರವಿದ್ದರೆ ಅವರನ್ನು ಬದಲಾಯಿಸಬಹುದು ಎಂದು ಸಂಶೋಧಕರು ಸೂಚಿಸಲಿಲ್ಲ. ಈ ಇಂಟರ್ ನೆಟ್ ವಿರಾಮವು ಭಾಗವಹಿಸುವವರ ಗಮನ ವ್ಯಾಪ್ತಿಯನ್ನು ಸುಧಾರಿಸಿದೆ. ಪರ್ವತಗಳು ಮತ್ತು ನಗರಗಳ ಚಿತ್ರಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಅವರು ಪೂರ್ಣಗೊಳಿಸಿದರು. ಹಿಂದಿನ ಅಧ್ಯಯನಗಳು ಸಾಮಾನ್ಯವಾಗಿ ವಯಸ್ಸಿನೊಂದಿಗೆ ಗಮನ ಕಡಿಮೆಯಾಗುತ್ತದೆ ಎಂದು ತೋರಿಸಿದೆ, ಆದರೆ ಆಶ್ಚರ್ಯಕರವೆಂಬಂತೆ ಇಂಟರ್ನೆಟ್ ವಿರಾಮದ ನಂತರ, ಅಂಕಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಈ ಪ್ರಯೋಜನಗಳು ಎಷ್ಟು ಕಾಲ ಉಳಿಯುತ್ತವೆ ಎಂಬುದು ಖಚಿತವಿಲ್ಲದಿದ್ದರೂ, ಕಡಿಮೆ ಪರದೆಯ ಸಮಯವು ಪ್ರಯೋಜನಕಾರಿ ಎಂದು ತೋರಿಸುವ ಹಿಂದಿನ ಸಂಶೋಧನೆಯನ್ನು ಈ ಅಧ್ಯಯನವು ಬೆಂಬಲಿಸುತ್ತದೆ. ಕ್ಯಾಸ್ಟೆಲೊ, "ನಿಮ್ಮ ಫೋನ್ನಲ್ಲಿ ಕಡಿಮೆ ಸಮಯ ಕಳೆಯುವುದರಿಂದ ಗಮನಾರ್ಹ ಪ್ರಯೋಜನಗಳಿವೆ ಎಂಬುದಕ್ಕೆ ಸಾಂದರ್ಭಿಕ ಪುರಾವೆಗಳನ್ನು ಒದಗಿಸುವ ಮೊದಲ ಪ್ರಯೋಗಗಳಲ್ಲಿ ಇದು ಒಂದಾಗಿದೆ" ಎಂದು ಹೇಳಿದರು. ಎರಡು ವಾರಗಳ ಕಾಲ ಭಾಗವಹಿಸುವವರಿಗೆ ಲ್ಯಾಪ್ಟಾಪ್ಗಳು ಮತ್ತು ಐಪ್ಯಾಡ್ಗಳನ್ನು ಬಳಸಲು ಮತ್ತು ಅವರ ಫೋನ್ಗಳಲ್ಲಿ ಮಾತನಾಡಲು ಅಥವಾ ಸಂದೇಶ ಕಳುಹಿಸಲು ಅವಕಾಶವಿತ್ತು. ಜನರು ಪರದೆಯ ಸಮಯ ಇತರ ವಿಷಯಗಳಿಗೆ ಬದಲಾಯಿಸುತ್ತಾರೆಯೇ ಎಂದು ಸಂಶೋಧಕರಿಗೆ ಖಚಿತವಿರಲಿಲ್ಲ. ಆದರೆ ತಕ್ಕ ಮಟ್ಟಿಗೆ ಸ್ಕ್ರೋಲಿಂಗ್ ಅಭ್ಯಾಸವನ್ನು ಬ್ರೇಕ್ ಮಾಡುವುದರಿಂದ ಭಾಗವಹಿಸುವವರು ತಮ್ಮ ಸಮಯವನ್ನು ಹೇಗೆ ಬಳಸುತ್ತಾರೆ ಎಂಬುದರಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಅವರು ಕಂಡುಕೊಂಡರು.
ಒಟ್ಟಾರೆ ಭಾಗವಹಿಸುವವರು ತಮ್ಮ ಫೋನ್ಗಳಿಂದ ಹೆಚ್ಚು ಸಮಯ ದೂರವಿದ್ದಾಗ ಅವರು ಹೆಚ್ಚು ಪ್ರಯೋಜನಗಳನ್ನು ಕಂಡುಕೊಂಡಿದ್ದಾರೆ. ಪಾಸಿಟಿವ್ ಸಕರ್ಲ್ ಕ್ರಿಯೇಟ್ ಆಗಿದೆ. "ನೀವು ಇಂಟರ್ನೆಟ್ ಬಳಸುವುದನ್ನು ನಿಲ್ಲಿಸಿ ಮಾಂತ್ರಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುತ್ತೀರಿ" ಎಂದಲ್ಲ. ಬದಲಾಗಿ ಜನರು ಆರೋಗ್ಯಕರ ಚಟುವಟಿಕೆಗಳತ್ತ ಹೆಚ್ಚು ಸಮಯವನ್ನು ಕಳೆದರು. ಹೊರಾಂಗಣದಲ್ಲಿ ಹೆಚ್ಚು ಸಮಯ ಇರುವುದು, ಹೆಚ್ಚು ಹೆಚ್ಚು ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು, ಉತ್ತಮ ನಿದ್ರೆ ಮಾಡುವುದು ಮತ್ತು ಇತರರೊಂದಿಗೆ ಹೆಚ್ಚು ಸಂಪರ್ಕ ಹೊಂದಿರುವುದಾಗಿ ವರದಿಯಾಗಿದೆ.
ಲಸಿಕೆ ಹಾಕಿಸಿಕೊಂಡರೂ ರೇಬೀಸ್ ಸೋಂಕು; ಮಲಪ್ಪುರಂನಲ್ಲಿ ಐದು ವರ್ಷದ ಬಾಲಕಿ ದಾರುಣ ಸಾವು
ಇಂಟರ್ನೆಟ್ನಿಂದ ದೂರವಿದ್ದರೆ ಸಿಗುವ ಪ್ರಯೋಜನಗಳು
ಇಂಟರ್ನೆಟ್ ಅನ್ನು ಆಫ್ ಮಾಡುವುದರಿಂದ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮನಸ್ಸಿಗೆ ವಿಶ್ರಾಂತಿಗೆ ಸಿಗುತ್ತದೆ. ಆನ್ಲೈನ್ ಮಾಹಿತಿಯ ನಿರಂತರ ಸುರಿಮಳೆಯಿಂದ ದೂರವಿರಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಮೆದುಳು "ರೀ ಚಾರ್ಜ್" ಆದ ನಂತರ, ನಿಮ್ಮ ಏಕಾಗ್ರತೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸೃಜನಶೀಲ ಚಿಂತನೆ ಸುಧಾರಿಸಬಹುದು. ಸ್ವಲ್ಪ ಸಮಯದವರೆಗೆ ಇಂಟರ್ ನೆಟ್ ಸಂಪರ್ಕ ಕಡಿತಗೊಳ್ಳುವುದರಿಂದಾಗುವ ಸಿಗುವ ಕೆಲವು ಪ್ರಯೋಜನಗಳು ಇಲ್ಲಿವೆ ಓದಿ..
10 ವರ್ಷದವರಂತೆ ಬದಲಾವಣೆ
ಅಧ್ಯಯನವು ತೋರಿಸಿದಂತೆ, ಮೊಬೈಲ್ ಇಂಟರ್ನೆಟ್ ನಿಂದ ದೂರವಿದ್ದವರು ಕೆಲಸಗಳ ಮೇಲೆ ಕೇಂದ್ರೀಕರಿಸುವ ಮತ್ತು ಗಮನಹರಿಸುವ ಸಾಮರ್ಥ್ಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ತೋರಿಸಿದರು. ನಿರಂತರ ಗಮನದಲ್ಲಿನ ಈ ಸುಧಾರಣೆಯು 10 ವರ್ಷ ವಯಸ್ಸಿನವರಲ್ಲಿ ಅರಿವಿನ ಕಾರ್ಯ ಹೇಗಿರುತ್ತದೆಯೋ ಅದಕ್ಕೆ ಸಮನಾಗಿರುವಂತೆ ಕಂಡರು.
ಮಾನಸಿಕ ಯೋಗಕ್ಷೇಮ
ಅಧ್ಯಯನದಲ್ಲಿ ಭಾಗವಹಿಸುವವರಲ್ಲಿ ಶೇಕಡಾವಾರು ಜನರು ಎರಡು ವಾರಗಳ ವಿರಾಮದ ನಂತರ ಮಾನಸಿಕವಾಗಿ ಉತ್ತಮವಾಗಿದ್ದಾರೆಂದು ವರದಿಯಾಗಿದ್ದಾರೆ.ಕೆಲವರಲ್ಲಂತೂ ಖಿನ್ನತೆ-ಶಮನಕಾರಿ ಔಷಧಿಗಳ ಪರಿಣಾಮಗಳನ್ನು ಮೀರಿದ ಸುಧಾರಣೆಗಳು ಕಂಡುಬಂದಿವೆ.
ಆಫ್ಲೈನ್ ಚಟುವಟಿಕೆಗಳತ್ತ ಗಮನ
ಅಧ್ಯಯನದಲ್ಲಿ ಭಾಗವಹಿಸುವವರು ಅರ್ಥಪೂರ್ಣ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದನ್ನು ನೀವು ನೋಡಿರಬಹುದು.
ಕಡಿಮೆಯಾದ ಪರದೆಯ ಸಮಯ
ಎರಡು ವಾರಗಳ ಇಂಟರ್ನೆಟ್ ಮುಕ್ತ ಅವಧಿಯಲ್ಲಿ ಪರದೆಯ ಸಮಯದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
ಡಿಜಿಟಲ್ ಆತಂಕ
FOMO (Fear of missing out) ಹೊಂದಿರುವವರು ತಮ್ಮ ಮಾನಸಿಕ ಆರೋಗ್ಯದಲ್ಲಿ ಅತ್ಯಂತ ಗಮನಾರ್ಹ ಸುಧಾರಣೆಗಳನ್ನು ಕಂಡುಕೊಂಡಿದ್ದಾರೆ.