ದುಬೈ ಚಾಕೊಲೇಟ್‌ನ ಜನಪ್ರಿಯತೆ ಹೆಚ್ಚುತ್ತಿದ್ದಂತೆ, ನಕಲಿ ಉತ್ಪನ್ನಗಳ ಭೀತಿಯೂ ಹೆಚ್ಚಿದೆ.
ಇತ್ತೀಚಿನ ದಿನಗಳಲ್ಲಿ ಬರೀ ಪಿಸ್ತಾದಿಂದಲೇ ಅಲಂಕರಿಸಿದ ದುಬೈ ಚಾಕೊಲೇಟ್ (Dubai chocolate)ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಶಾಪ್ ಗಳಿಗೆ ತೆರಳುತ್ತಿದ್ದ ಜನರು ಈ ಚಾಕೊಲೇಟ್ ಅನ್ನು ಕೇಳಿ ಕೇಳಿ ಖರೀದಿಸುತ್ತಿದ್ದರು. ಭಾರತದಲ್ಲಿ ಈ ಚಾಕೊಲೇಟ್‌ಗೆ ಬೇಡಿಕೆ ಹೆಚ್ಚುತ್ತಿರುವಂತೆ ಅದರ ಬೆಲೆಯೂ ನಿರಂತರವಾಗಿ ಹೆಚ್ಚುತ್ತಿತ್ತು. ಆದರೆ ಹೀಗೆ ಸಿಕ್ಕಾಪಟ್ಟೆ ವೈರಲ್ ಆದ ದುಬೈ ಚಾಕೊಲೇಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
ದುಬೈ ಚಾಕೊಲೇಟ್ ಅನ್ನು ಮೊದಲ ಬಾರಿಗೆ 2022 ರಲ್ಲಿ ಯುಎಇ ಮೂಲದ Fix Dessert Chocolatier ಮಾರಾಟ ಮಾಡಿತು. ದುಬೈ ಚಾಕೊಲೇಟ್‌ಗಳನ್ನು ಮೂಲತಃ ಕುನಾಫಾ ಮತ್ತು ಪಿಸ್ತಾದಿಂದ ತಯಾರಿಸಲಾಗುತ್ತದೆ. ಈ ಚಾಕೊಲೇಟ್ ತಿಳಿ ಹಸಿರು ಬಣ್ಣದ ಹೂರಣವನ್ನು ಹೊಂದಿದ್ದು, ಇದು ಇತರ ಚಾಕೊಲೇಟ್‌ಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ತಜ್ಞರ ಪ್ರಕಾರ, ಈ ಚಾಕೊಲೇಟ್ ಟ್ರೆಂಡ್ ಆದಾಗಿನಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಹಲವಾರು ಚಾಕೊಲೇಟ್ ತಯಾರಕರು ಇದರ ನಕಲಿಗಳನ್ನು ತಯಾರಿಸುತ್ತಿದ್ದು, ಈ ನಕಲಿ ಚಾಕೊಲೇಟ್ ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು ಎಂದು ತಿಳಿಸಿದ್ದಾರೆ.
ತ್ವಚೆಯ ಮೇಲೆ ಈ 5 ಚಿಹ್ನೆಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಅಪಾಯದಲ್ಲಿದೆ ಎಂದರ್ಥ!
ದುಬೈ ಚಾಕೊಲೇಟ್ ಸೈಡ್ ಎಫೆಕ್ಟ್ಸ್
ತಜ್ಞರ ಪ್ರಕಾರ, ಈ ಸೆನ್ಸೇಶನ್ ಚಾಕೊಲೇಟ್ ಬಗ್ಗೆ ಕೆಲವು ಆರೋಗ್ಯ ತಜ್ಞರು ಎತ್ತಿರುವ ಪ್ರಮುಖ ವಿಷಯವೆಂದರೆ ಅಫ್ಲಾಟಾಕ್ಸಿನ್. ಧೀರ್ಘಕಾಲದವರೆಗೆ ಇದನ್ನು ಸೇವಿಸುವುದರಿಂದ ಪಿಸ್ತಾದಲ್ಲಿ ಕಂಡುಬರುವ ಅಫ್ಲಾಟಾಕ್ಸಿನ್ ಯಕೃತ್ತಿಗೆ ಹಾನಿ ಉಂಟು ಮಾಡುವುದಲ್ಲದೆ, ಕ್ಯಾನ್ಸರ್ ಸೇರಿದಂತೆ ಇತರ ಮಾರಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ. ಇನ್ನು ವಿಶೇಷವೆಂದರೆ ಜನರು ಯಾವ ಫ್ಲೇವರ್ ಇಷ್ಟಪಡುತ್ತಾರೆ ಎಂಬುದನ್ನು ಅವಲಂಬಿಸಿ ವಿವಿಧ ಸ್ಥಳಗಳಲ್ಲಿ ಚಾಕೊಲೇಟ್ ತಯಾರಿಸುವ ವಿಧಾನ ಸಹ ಬದಲಾಯಿಸಲಾಗುತ್ತದೆ. ಅನೇಕ ತಯಾರಕರು ಈಗ ಎಳ್ಳನ್ನು ಸೇರಿಸುತ್ತಿದ್ದಾರೆ. ಒಂದು ವೇಳೆ ಗ್ರಾಹಕರು ಎಳ್ಳು ಅಲರ್ಜಿ ಹೊಂದಿದ್ದರೆ ಕಥೆ ಮುಗಿಯಿತು. ಅಲರ್ಜಿಯನ್ನು ಹೊಂದಿರುವ ಗ್ರಾಹಕರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ದದ್ದುಗಳು ಮತ್ತು ಇತರ ಅಪಾಯಕಾರಿ ಪ್ರತಿಕ್ರಿಯೆಯನ್ನು ಅನುಭವಿಸುತ್ತಾರೆ.
ಲಸಿಕೆ ಹಾಕಿಸಿಕೊಂಡರೂ ರೇಬೀಸ್ ಸೋಂಕು; ಮಲಪ್ಪುರಂನಲ್ಲಿ ಐದು ವರ್ಷದ ಬಾಲಕಿ ದಾರುಣ ಸಾವು
ದುಬೈ ಚಾಕೊಲೇಟ್ ನಿಂದ ಕ್ಯಾನ್ಸರ್?
ಈ ತಿಂಗಳ ಆರಂಭದಲ್ಲಿ ಜರ್ಮನಿಯಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ದುಬೈ ಚಾಕೊಲೇಟ್ ಮಾಲಿನ್ಯಕಾರಕಗಳಿಂದ ತುಂಬಿ ತುಳುಕುತ್ತಿದೆ. ಅವುಗಳಲ್ಲಿ ಹೆಚ್ಚು ವಿಷಕಾರಿ ತಾಳೆ ಎಣ್ಣೆ, ಗ್ರೀನ್ ಫುಡ್ ಕಲರ್ ಮತ್ತು ಕೆಮಿಕಲ್ ಕಾಂಪೌಂಡ್ಸ್ ನಿಂದ ಕೂಡಿರುತ್ತವೆ. ಸ್ಪಟ್‌ಗಾರ್ಟ್‌ನಲ್ಲಿರುವ ರಾಸಾಯನಿಕ ಮತ್ತು ಪಶುವೈದ್ಯಕೀಯ ತನಿಖಾ ಕಚೇರಿ ನಡೆಸಿದ ಸಂಶೋಧನೆಯಲ್ಲಿ, ಅಗ್ಗದ ಮತ್ತು ಸುಲಭವಾಗಿ ಲಭ್ಯವಾಗುವ ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಎಣ್ಣೆಯಾದ ಪಾಮ್ ಎಣ್ಣೆಯ ಕುರುಹುಗಳು ಕಂಡುಬಂದಿವೆ. ಇದು ಬಹಳ ಹಿಂದಿನಿಂದಲೂ ಹೃದಯ ಕಾಯಿಲೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಚಾಕೊಲೇಟ್‌ನಲ್ಲಿ ಕಲುಷಿತ ಪಾಮ್ ಎಣ್ಣೆಯ ಉಪಸ್ಥಿತಿಯು 3-MCPD ಯ ರಚನೆಗೆ ಕಾರಣವಾಯಿತು. ಇದು ಕ್ಯಾನ್ಸರ್ ಕಾರಕ ಎಂದು ಭಾವಿಸಲಾದ ಅಪಾಯಕಾರಿ ಕಾಂಪೌಂಡ್ ಆಗಿದೆ.
ಸಂಭಾವ್ಯ ಸಮಸ್ಯೆಗಳು
ಈಗಾಗಲೇ ವಿಶ್ವದ ವಿವಿಧ ಭಾಗಗಳಲ್ಲಿ ದುಬೈ ಚಾಕೊಲೇಟ್ ಉತ್ಪನ್ನಗಳಲ್ಲಿ ಮಲಿನಕಾರಿ ಅಂಶಗಳು ಕಂಡುಬಂದ್ದರಿಂದ ಹಲವಾರು ಬಾರಿ ಅವುಗಳನ್ನು ಹಿಂಪಡೆಯಲಾಗಿದೆ. ಅತಿಸಾರ, ಜ್ವರ ಮತ್ತು ಹೊಟ್ಟೆ ನೋವನ್ನು ಉಂಟುಮಾಡುವ ಸಾಲ್ಮನೆಲ್ಲಾ ಬ್ಯಾಕ್ಟೀರಿಯಾದ ಸೋಂಕು ಉಂಟಾಗಿದೆ. ಈ ಸೋಂಕು ಸಾಮಾನ್ಯವಾಗಿ ಕೆಲವು ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ಹೋಗುತ್ತದೆ. ಆಗ ನಿರ್ಜಲೀಕರಣವನ್ನು ತಡೆಗಟ್ಟಲು ನೀವು ಸಾಕಷ್ಟು ನೀರು ಕುಡಿಯಬೇಕಾಗುತ್ತದೆ. ಅಷ್ಟೇ ಅಲ್ಲ, ಈ ಚಾಕೊಲೇಟ್ ಸೇವಿಸಿದ ನಂತರ ಅನೇಕ ಜನರು ಮಲಬದ್ಧತೆ ಮತ್ತು ವಾಕರಿಕೆ ಸೇರಿದಂತೆ ಜೀರ್ಣಕಾರಿ ಅಸ್ವಸ್ಥತೆಯನ್ನು ಅನುಭವಿಸಿದ್ದಾರೆ.
ಯಾರು ಈ ಸಾರಾ ಹಮೌದಾ?
ಕಾಂಟ್ ಗೆಟ್ ಕ್ಯಾಫ್ನೆ ಆಫ್ ಇಟ್' ಎಂದೂ ಕರೆಯಲ್ಪಡುವ ಇದರ ತಯಾರಕಿ ಸಾರಾ ಹಮೌದಾ. ಈಕೆ ಬ್ರಿಟಿಷ್-ಈಜಿಪ್ಟ್ ದುಬೈ ಮೂಲದ ಚಾಕೊಲೇಟ್ ತಯಾರಕಿ, ತಮ್ಮ ಪ್ರೆಗ್ನೆನ್ಸಿ ಸಮಯದಲ್ಲಿ ಬಯಕೆಯನ್ನು ಪೂರೈಸಿಕೊಳ್ಳಲು ಒಂದು ಹೊಸ ಮಾರ್ಗವಾಗಿ ಕ್ರಿಯೇಟ್ ಆದ ಚಾಕೊಲೇಟ್ ಅಂದಿನಿಂದ ಜಗತ್ತಿನಲ್ಲಿ ಬಿರುಗಾಳಿಯಂತೆ ಎಲ್ಲೆಡೆ ಹವಾ ಎಬ್ಬಿಸಿದೆ. ಇದೇ ಕಾರಣಕ್ಕೆ ಎಲ್ಲರೂ ಒರಿಜಿನಲ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.
