Sleeplessness : ವಯಸ್ಸಾದವರಿಗೆ ನಿದ್ರೆ ಯಾಕೆ ಬರಲ್ಲ?
ಚಿಕ್ಕ ವಯಸ್ಸಿನವರು ಹಾಸಿಗೆಗೆ ಬಿದ್ದ ಕೂಡಲೇ ನಿದ್ರೆಗೆ (Sleep) ಜಾರಿದರೆ, ವಯಸ್ಸಾದವರು ಆಕಳಿಸುತ್ತಾ, ಕೆಮ್ಮುತ್ತಾ, ನರಳುತ್ತಾ ರಾತ್ರಿ (Night) ಕಳೆಯೋದು ನೋಡಿರುತ್ತೇವೆ. ವೃದ್ದಾಪ್ಯದ ನಿದ್ರಾಹೀನತೆಗೆ (Sleeplessness) ಏನು ಕಾರಣ?
ಇತ್ತೀಚೆಗೆ ಒಂದು ಕೇಸುcase) ಕೌಟುಂಬಿಕ ಆಪ್ತ ಸಲಹೆಗಾರರ (Counsellor) ಬಳಿ ಬಂತು. ಅವರಿಬ್ಬರದು ಹಿರಿಯರು ನೋಡಿ ಒಪ್ಪಿದ ಅರೇಂಜ್ಡ್ ಮ್ಯಾರೇಜೇ(Arranged marriage). ಗಂಡ, ಹೆಂಡತಿ ಇಬ್ಬರ ನಡುವೆ ಹೇಳಿಕೊಳ್ಳುವಂಥಾ ಜಗಳ, ಮನಸ್ತಾಪಗಳಿಲ್ಲ. ಪತ್ನಿ ಪತಿ ಇಬ್ಬರೂ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಗಳು(Employees). ಮಧ್ಯಮ ವರ್ಗದ ಕುಟುಂಬ ಅವರದು. ಮನೆಯಲ್ಲಿ ಅತ್ತೆ, ಮಾವ ಎಲ್ಲರೂ ಇದ್ದಾರೆ. ಇತ್ತೀಚೆಗೆ ಕೆಲವು ದಿನಗಳಿಂದ ಪತ್ನಿ ಯಾರಿಗೂ ಹೇಳದೇ ತನ್ನ ಅಪ್ಪ ಅಮ್ಮ ಇರುವ ಮನೆಗೆ ಬಂದಿದ್ದಾಳೆ. ಹುಡುಗ ಹಾಗೂ ಮನೆಯವರು ಅಲ್ಲಿಗೆ ಬಂದು ಹೇಳದೇ ಬಂದದ್ದಕ್ಕೆ ಹುಡುಗಿಯನ್ನು ತರಾಟೆಗೆ ತೆಗೆದುಕೊಂಡು ವಾಪಾಸ್ ಕರೆದುಕೊಂಡು ಹೋಗಿದ್ದಾರೆ.
ಹುಡುಗಿಯ ಅಪ್ಪ ಅಮ್ಮ ಅವಳ ಬಳಿ ಸಮಸ್ಯೆ ಏನು ಅಂತ ಸಾಕಷ್ಟು ವಿಚಾರಿಸಿದರೂ ಸರಿಯಾದ ಕಾರಣ ಸಿಕ್ಕಿಲ್ಲ. ಇತ್ತೀಚೆಗೆ ಮತ್ತೆ ಆ ಹುಡುಗಿ ಮನೆ ಬಿಟ್ಟು ಬಂದು ತನ್ನ ಗೆಳತಿಯ ಜೊತೆಗೆ ರೂಮ್ ಶೇರ್(share) ಮಾಡಿಕೊಂಡಿದ್ದಾಳೆ. ಪತಿ ಹಾಗೂ ಮನೆಯವರು ಎಷ್ಟು ಗೋಗರೆದರೂ ವಾಪಾಸ್ ಹೋಗಲು ಒಪ್ಪಿಲ್ಲ. ಕಟ್ಟ ಕಡೆಯ ಅಸ್ತ್ರವಾಗಿ ಜಾಸ್ತಿ ಬಲವಂತ ಮಾಡಿದರೆ ಪೊಲೀಸ್ ಕಂಪ್ಲೇಂಟ್(Police complaint) ನೀಡುತ್ತೇನೆ ಎಂದಿದ್ದಾಳೆ. ಸಿಟ್ಟಾದ ಅವರು ವಾಪಾಸ್ ಹೋಗಿದ್ದಾರೆ. ಡಿವೋರ್ಸ್ ಗೆ(Divorce) ಅಪ್ಲೈ ಮಾಡಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿಗೆ ಕೌನ್ಸಿಲಿಂಗ್ ಮಾಡಲು ಹೇಳಿದ್ದಾರೆ. ಈ ವೇಳೆ ಆಪ್ತ ಸಲಹೆಗಾರರು ಆ ಹುಡುಗಿ ಒಬ್ಬಳನ್ನೇ ಕೂರಿಸಿ ಸಾಕಷ್ಟು ವಿಚಾರಿಸಿದಾಗ ಕಾರಣ ಹೊರಬಂದಿದೆ.
World Hypertension Day 2022: ಅಧಿಕ ರಕ್ತದೊತ್ತಡ ನಿಯಂತ್ರಿಸುವುದು ಹೇಗೆ ?
ದಿನವಿಡೀ ಹೊರಗೆ ದುಡಿದು ಮನೆಯಲ್ಲೂ ಕೆಲಸ ಮಾಡಿ ನಿದ್ದೆಗೆ ಜಾರುವ ಈಕೆಗೆ ಇನ್ನೇನು ನಿದ್ದೆ ಬಂತು ಎನ್ನುವಾಗ ಮಾವನ ಆಕಳಿಕೆ ಶುರುವಾಗುತ್ತೆ. ರಾತ್ರಿಯಿಡೀ ಏನೇನೋ ಗೊಣಗುತ್ತಾ, ಸುಮ್ಮ ಸುಮ್ಮನೇ ಜೋರಾಗಿ ಕೆಮ್ಮುತ್ತಾ ಸಮಯ ಕಳೆಯುತ್ತಾರೆ. ಆಗಾಗ ಎದ್ದು ರೂಮಿನ ಲೈಟ್ ಹಾಕಿ ಮಾವನ ರೂಮಿನ ಪಕ್ಕದಲ್ಲೇ ಇವರ ರೂಮ್ ಇರುವ ಕಾರಣ ಈಕೆಗೆ ರಾತ್ರಿಯಿಡೀ ನಿದ್ದೆ ಇಲ್ಲ. ಇನ್ನೇನು ಕಣ್ಣಿಗೆ ನಿದ್ದೆ ಹತ್ತಿತು ಅನ್ನುವಾಗ ಅಲರಾಂ(Alaram) ಹೊಡಕೊಳ್ಳುತ್ತೆ. ಇಲ್ಲವೇ ಅತ್ತೆ ಎಬ್ಬಿಸುತ್ತಾರೆ. ಮತ್ತೆ ಎದ್ದು ತಿಂಡಿ ಮಾಡಬೇಕು. ದಿನವಿಡೀ ದುಡಿತ. ಒಂದೆರಡು ದಿನ ಆದರೆ ಹೇಗೋ ಸಹಿಸಬಹುದು.
ಪ್ರತೀ ದಿನ ಇದೇ ಸಮಸ್ಯೆ. ಗಂಡನ ಬಳಿ ತನ್ನ ಸಮಸ್ಯೆ ಹೇಳಿಕೊಂಡರೆ ಆತ ಎಲ್ಲಿ ತಪ್ಪು ತಿಳಿದಾನೋ ಎಂಬ ಆತಂಕ. ತನ್ನ ಅಪ್ಪ ಅಮ್ಮನ ಬಳಿ ಹೇಳಿದರೆ ಅವರು ಇಷ್ಟು ಸಣ್ಣ ಕಾರಣಕ್ಕೆ ಯಾಕೆ ಇಷ್ಟು ತಲೆ ಕೆಡಿಸಿಕೊಂಡಿದ್ದೀಯ, ಅಡ್ಜೆಸ್ಟ್(Adjest) ಮಾಡಿಕೊಂಡು ಹೋಗು ಅಂತಾರೆ. ಸರಿಯಾದ ನಿದ್ದೆಯಿಲ್ಲದೇ ಈಕೆಗೆ ಏನೇನೋ ಸಮಸ್ಯೆಗಳು ಶುರುವಾಗಿದೆ. ಇದು ನಿತ್ಯ ನರಕ ಅನಿಸಿ ಇದರಿಂದ ಹೊರಬರಲು ಆಕೆ ತೀರ್ಮಾನಿಸಿದ್ದಳು.
ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಆತ್ಮಹತ್ಯೆ ಯೋಚನೆ ಹೆಚ್ಚಳ : ಅಧ್ಯಯನ
ಕೊನೆಗೆ ಆಪ್ತಸಲಹೆಗಾರರು ಇದನ್ನು ಇಡೀ ಕುಟುಂಬದವರಿಗೆ ಕನ್ವಿನ್ಸ್ ಮಾಡಿಸಿ ಮಾವನಿಗೆ ಚಿಕಿತ್ಸೆ ನೀಡುವಂತೆ, ಅಲ್ಲಿಯವರೆಗೆ ದಂಪತಿ ಬೇರೆ ಕಡೆ ಇರುವ ಹಾಗೆ ಮಾಡಿದ್ದಾರೆ. ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ಹೇಗೋ ಹೇಳಿದ್ದಾರೆ.
ಆದರೆ ಎಷ್ಟೋ ಫ್ಯಾಮಿಲಿಗಳಲ್ಲಿ ಈ ಸಮಸ್ಯೆ ಹೊರಗೇ ಬರೋದಿಲ್ಲ. ವಯಸ್ಸಾದಾಗ ನಿದ್ರೆ ಬರದೇ ಇರೋದು ಕಾಮನ್ ಅಂದುಕೊಂಡು ಉಳಿದವರು ಹಿರಿಯರ ಸಮಸ್ಯೆ ಕೇಳದೇ ಸುಮ್ಮನಾಗುತ್ತಾರೆ. ಹಿರಿಯರ ಈ ಸಮಸ್ಯೆ ಉಳಿದವರ ನಡುವೆ ಕಚ್ಚಾಟ, ಮನಸ್ತಾಪ, ವಿಚ್ಛೇದನ ಎಲ್ಲ ತರೋದುಂಟು.
ನಿದ್ರಾಹೀನತೆಗೆ ಕಾರಣವೇನು ?
ಮಿದುಳಿನಲ್ಲಿ ಹೈಪೋಥಲಮಸ್ (Hypothalamus)ಎಂಬ ಭಾಗ ಇರೋದು ನಮಗೆಲ್ಲ ಗೊತ್ತು. ಇದರ ಕೆಲಸ ಮನುಷ್ಯರ ದೈನಂದಿನ ಚಟುವಟಿಕೆಗಳನ್ನ ಸರಿಯಾಗಿ ಆಗುವ ಹಾಗೆ ಮಾಡೋದು. ಅಂದರೆ ಟೈಮ್ ಟೈಮ್ ಗೆ ಹಸಿವು, ನಿದ್ರೆ ಇತ್ಯಾದಿ ಸಂವೇದನೆಗಳುಂಟಾಗುವಂತೆ ಮಾಡೋದು. ಈ ಭಾಗ ಕರೆಕ್ಟಾಗಿ ಕೆಲಸ ಮಾಡಬೇಕು ಅಂದರೆ ಮೆಲಟೋನಿನ್ melatonin)ಹಾಗೂ ಕಾರ್ಟಿಸೋಲ್(Cartisol) ಹಾರ್ಮೋನುಗಳ ಬಿಡುಗಡೆ ಸರಿಯಾಗಿ ಆಗಬೇಕು.
ಅದಾಗದೇ ಇದ್ದಾಗ ನಿದ್ರಾಹೀನತೆ, ಹಸಿವಾಗದೇ ಇರೋದು ಇತ್ಯಾದಿ ಸಮಸ್ಯೆ ಶುರುವಾಗುತ್ತೆ. ವಯಸ್ಸಾದಾಗ ಈ ಕಾರ್ಟಿಸೋಲ್ ಹಾಗೂ ಮೆಲಟೋನಿನ್ ಹಾರ್ಮೋನುಗಳು ಸರಿಯಾಗಿ ಬಿಡುಗಡೆ ಆಗೋದಿಲ್ಲ. ಹೀಗಾಗಿ ನಿದ್ರಾಹೀನತೆ ಕಾಡುತ್ತೆ. ಜೊತೆಗೆ ವಯಸ್ಸಾಗುತ್ತಾ ಬಂದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅವು ವೃದ್ಧರಲ್ಲಿ ನಿದ್ರೆ ಬರದ ಹಾಗೆ ಮಾಡುತ್ತವೆ.
ಮಾನಸಿಕ ಆರೋಗ್ಯ ನಿಯಂತ್ರಿಸಲು ನಿದ್ರೆ ನಮ್ಮ ಮೆದುಳಿಗೆ ಹೇಗೆ ಸಹಾಯ ಮಾಡುತ್ತದೆ ಗೊತ್ತಾ?
ಈ ವಯಸ್ಸಲ್ಲಿ ಇನ್‌ಸೆಕ್ಯುರಿಟಿ(insecurity), ಭಯ, ಆತಂಕಗಳು ಕಾಡಬಹುದು. ಇಂಥಾ ಚಿಂತೆಗಳು ಆವರಿಸಿದಾಗ ನಿದ್ರೆ ಮರೀಚಿಕೆ ಆಗುತ್ತೆ. ಇತ್ತೀಚಿನ ಜೀವನ ಶೈಲಿಯೂ ಇದಕ್ಕೆ ಕಾರಣ ಇರಬಹುದು. ಜೊತೆಗೆ ವಯಸ್ಸಾದ ಮೇಲೆ ಬರುವ ಮೈ ಕೈ ನೋವಿನ ಸಮಸ್ಯೆಯೂ ನಿದ್ರಾಹೀನತೆಗೆ ಕಾರಣ ಆಗಬಹುದು. ಕೆಲವರು ರಾತ್ರಿ ನಿದ್ರೆ ಬಂದಿಲ್ಲ ಅಂತ ಹಗಲಲ್ಲಿ ನಿದ್ರಿಸುತ್ತಾರೆ. ಹೀಗಾಗಿ ರಾತ್ರಿ ನಿದ್ರೆ ಬರದೇ ಇರಬಹುದು. ಸಮಸ್ಯೆ ಏನು ಅಂತ ನೋಡಿ ಅದಕ್ಕೆ ತಕ್ಕ ಚಿಕಿತ್ಸೆ(Treatment) ನೀಡಿದರೆ ವೃದ್ಧರೂ ಮಲಗಬಹುದು, ಉಳಿದವರೂ ನೆಮ್ಮದಿಯಿಂದ ನಿದ್ದೆ ಹೋಗಬಹುದು.