Asianet Suvarna News Asianet Suvarna News

ವಾಕಿಂಗ್ ಮಾಡ್ತಿರೇನೋ ನಿಜ, ಆದ್ರೆ ಸರಿಯಾದ ರೀತಿಯಲ್ಲಿ ಮಾಡ್ತಿದ್ದೀರಾ ? ಇಲ್ಲಾಂದ್ರೆ ನೋ ಯೂಸ್ !

ನಡಿಗೆ (Walking) ಅತ್ಯಂತ ಸುಲಭವಾದ ಮತ್ತು ಪ್ರಯೋಜನಕಾರಿ ವ್ಯಾಯಾಮವಾಗಿದೆ. ನಡಿಗೆಗೆ ಯಾವುದೇ ಸಲಕರಣೆಗಳ ಅಗತ್ಯವಿರುವುದಿಲ್ಲ, ಎದ್ದು ಕ್ರಮಬದ್ಧವಾಗಿ ನಡೆದರಾಯಿತು ಅಷ್ಟೆ. ಆದ್ರೆ ಡೈಲಿ ವಾಕಿಂಗ್ ಮಾಡ್ತಿದ್ರೂ ಆರೋಗ್ಯ (Health)ಕ್ಕೇನೂ ಪ್ರಯೋಜನವಾಗಿಲ್ಲ ಅಂತೀರಾ ? ಹಾಗಿದ್ರೆ ನೀವು ಈ ತಪ್ಪು (Mistake) ಮಾಡ್ತಿರ್ಬೋದು.

Walking For Health, Common Mistakes People Make And The Right Way To Do It Vin
Author
Bengaluru, First Published May 19, 2022, 10:48 AM IST

ವರ್ಕ್‌ ಫ್ರಂ ಹೋಮ್, ಆನ್‌ಲೈನ್‌ ಕ್ಲಾಸ್ ಶುರುವಾದಾಗಿನಿಂದ ಜನರು ಕೋಣೆಯೊಳಗೇ ಬಂಧಿಯಾಗಿಬಿಟ್ಟಿದ್ದಾರೆ. ಮನೆಯಿಂದ ಹೊರಗೆ ಹೋಗೋದು ಬಿಡಿ. ರೂಮಿನಿಂದ ನಾಲ್ಕು ಹೆಜ್ಜೆ ನಡೆಯೋದು ಸಹ ಕಡಿಮೆಯೇ. ಇದರಿಂದಾಗಿ ಅನಾವಶ್ಯಕ ಕೊಬ್ಬು, ಮಾನಸಿಕ ಒತ್ತಡ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ ನಡೆಯುವುದು (Walking) ಹಲವು ಆರೋಗ್ಯ ಸಮಸ್ಯೆಗಳು (Health Problem) ಬರದಂತೆ ನೋಡಿಕೊಳ್ಳಬಹುದು. 

ನಿಯಮಿತ ನಡಿಗೆಯೊಂದಿಗೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ವಾಕಿಂಗ್ ಹೃದಯರಕ್ತನಾಳದ ಫಿಟ್‌ನೆಸ್ ಅನ್ನು ಸುಧಾರಿಸುತ್ತದೆ, ಇದು ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು- ಸಂಭವಿಸದಂತೆ ವಿವಿಧ ಆರೋಗ್ಯ ತೊಂದರೆಗಳನ್ನು ತಡೆಯುತ್ತದೆ. ದೇಹದ ಮೂಳೆಗಳನ್ನು ಬಲಪಡಿಸುತ್ತದೆ, ಸ್ನಾಯುವಿನ ಸಹಿಷ್ಣುತೆಯನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಆದರೆ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಕೆಲವೊಬ್ಬರಿಗೆ ವಾಕಿಂಗ್ ಮಾಡೋದ್ರಿಂದ ಏನೇನೂ ಪ್ರಯೋಜನವಾಗುವುದಿಲ್ಲ. ಯಾಕೆ ಗೊತ್ತಾ ? ಇದಕ್ಕೆ ವಾಕಿಂಗ್‌ ಮಾಡುವಾಗ ಅನುಸರಿಸುವ ಕೆಲವೊಂದು ತಪ್ಪುಗಳೇ (Mistake) ಕಾರಣ. ಅದೇನೆಂದು ತಿಳಿಯೋಣ.

Walking Health Benefits: ನಡೆದಷ್ಟೂ ಆಯಸ್ಸು ಹೆಚ್ಚುತ್ತೆ

ಅಸಮರ್ಪಕ ನಡಿಗೆ: ಗುಂಪಿನಲ್ಲಿ ನಡೆಯುವುದು, ನಡೆಯುವಾಗ ಸಂಗೀತವನ್ನು (Music) ಆಲಿಸುವುದು, ಮೊಬೈಲ್ ಫೋನ್ ಅಪ್ಲಿಕೇಶನ್‌ಗಳ ಮೂಲಕ ಬ್ರೌಸ್ (Browse) ಮಾಡುವುದು, ಫೋನ್ ಮೂಲಕ ಅಥವಾ ವೈಯಕ್ತಿಕವಾಗಿ ಯಾರೊಂದಿಗಾದರೂ ಮಾತನಾಡುವುದು, ವೇಗವಾಗಿ ನಡೆಯದೆ ಇರುವುದು, ನಡೆಯುವಾಗ ಅಲ್ಲಿ ಇಲ್ಲಿ ನೋಡುವುದು ಮುಂತಾದ ಕಾರಣಗಳಿಂದ ನೀವು ವಾಕಿಂಗ್ ಮಾಡುತ್ತಿದ್ದರೂ ಅದರ ಪ್ರಯೋಜನ ನಿಮಗೆ ಸಿಗದೇ ಇರಬಹುದು. ಯಾಕೆಂದರೆ ಇದು ಅಸಮರ್ಪಕ ನಡಿಗೆಯ ರೀತಿಯಾಗಿದೆ.

ಸರಿಯಾದ ಉಡುಪನ್ನು ಧರಿಸಿ: ಸರಿಯಾದ ಉಡುಪನ್ನು (Dress) ಧರಿಸದಿರುವುದು ಸಹ ವ್ಯಕ್ತಿಯ ನಡಿಗೆಯ ವೇಗದ ಮೇಲೆ ಪರಿಣಾಮ ಬೀರುತ್ತದೆ. ತುಂಬಾ ಬಿಗಿಯಾದ ಬಟ್ಟೆಗಳನ್ನು ಅಥವಾ ತುಂಬಾ ಸಡಿಲವಾದ ಬಟ್ಟೆಗಳನ್ನು ಧರಿಸುವುದರಿಂದ ವ್ಯಕ್ತಿಯು ಸರಿಯಾಗಿ ನಡೆಯಲು ಸಾಧ್ಯವಾಗುವುದಿಲ್ಲ. ಶೂಗಳು ಸಹ ವಾಕಿಂಗ್ ವೇಗದ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಬಹುದು. ಸರಿಯಾದ ಫಿಟ್ ಬೂಟುಗಳನ್ನು ಧರಿಸದಿರುವುದು ನಡಿಗೆಯ ವೇಗವನ್ನು ನಿಧಾನಗೊಳಿಸುತ್ದೆ. ಮಾತ್ರವಲ್ಲ ಇದು ಕಾಲಿನ ಮೂಳೆಗಳು ಮತ್ತು ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ.

ನಡಿಗೆಯ ವೇಗ: ನಡಿಗೆ ಎಂದರೆ ಸುಮ್ಮನೆ ಹೆಜ್ಜೆಗಳನ್ನು ಎಣಿಸುವುದಲ್ಲ. ವಾಕಿಂಗ್‌ನ ಆರೋಗ್ಯ ಪ್ರಯೋಜನಗಳು ನೀವು ಎಷ್ಟು ಕ್ಯಾಲೊರಿಗಳನ್ನು ಸುಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ, ಅದು ಮತ್ತೆ ನಿಮ್ಮ ನಡಿಗೆಯ ವೇಗವನ್ನು (Speed) ಅವಲಂಬಿಸಿರುತ್ತದೆ. ಒಂದು ನಿರ್ದಿಷ್ಟ ಸಮಯದಲ್ಲಿ ಎಷ್ಟು ಕಿಲೋಮೀಟರ್‌ಗಳನ್ನು ಕ್ರಮಿಸುತ್ತದೆ ಎಂಬುದು ನಡಿಗೆಯ ವೇಗವಾಗಿದೆ. ಉದಾಹರಣೆಗೆ, ಪ್ರತಿ ಕಿಲೋಮೀಟರ್‌ಗೆ 9 ನಿಮಿಷಗಳ ವಾಕಿಂಗ್ ವೇಗವು ಪ್ರತಿ ಕಿಲೋಮೀಟರ್‌ಗೆ 10 ರಿಂದ 14 ನಿಮಿಷಗಳ ನಡಿಗೆ ವೇಗಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಖಂಡಿತವಾಗಿಯೂ ಸುಡುತ್ತದೆ.

Health Tips : ವಾಕಿಂಗ್ ಬೋರ್ ಆಗಿದ್ರೆ ಹಿಮ್ಮುಖ ನಡಿಗೆ ಶುರು ಮಾಡಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ

ನಡೆಯುವಾಗ ಹೀಗೆ ಮಾಡಲೇಬೇಡಿ
ತಲೆ ತಗ್ಗಿಸಿ ನಡೆಯಬೇಡಿ. ನಿಮ್ಮ ತಲೆಯನ್ನು ನೇರವಾಗಿ ಇರಿಸಿ ಮತ್ತು ನಿಮ್ಮ ಕುತ್ತಿಗೆ, ಬೆನ್ನು ಮತ್ತು ಭುಜಗಳೊಂದಿಗೆ ನೇರವಾದ ಭಂಗಿಯನ್ನು ಕಾಪಾಡಿಕೊಳ್ಳಿ ಇದರಿಂದ ನೀವು ಸರಿಯಾಗಿ ಉಸಿರಾಡಬಹುದು.

-ಗಾಸಿಪ್ ಮಾಡುವುದು, ಫೋನ್ ಮೂಲಕ ಬ್ರೌಸ್ ಮಾಡುವುದು ಅಥವಾ ವಾಕಿಂಗ್ ಮಾಡುವಾಗ ಸಂಗೀತವನ್ನು ಕೇಳುವುದು ಮುಂತಾದ ಇತರ ಚಟುವಟಿಕೆಗಳಲ್ಲಿ ತೊಡಗಬೇಡಿ

-ನಡೆಯುವಾಗ ನಿಮ್ಮ ಕೈಗಳನ್ನು ಕ್ರಿಯೆಯಲ್ಲಿ ಇರಿಸಿ. ಅವುಗಳನ್ನು ಗಟ್ಟಿಯಾಗಿ ಇರಿಸಬೇಡಿ. ನಿಮ್ಮ ದೇಹದಂತೆಯೇ ಅದೇ ವೇಗದಲ್ಲಿ ನಿಮ್ಮ ತೋಳುಗಳನ್ನು ಸ್ವಿಂಗ್ ಮಾಡಿ.

-ಮಾರ್ಗವನ್ನು ಬದಲಾಯಿಸಿ. ಪ್ರತಿದಿನ ಒಂದೇ ಮಾರ್ಗದಲ್ಲಿ ನಡೆಯಬೇಡಿ.

-ಪ್ರತಿ ನಡಿಗೆಯ ನಂತರ ನಿಮ್ಮ ಕಾಲಿನ ಸ್ನಾಯುಗಳನ್ನು ಸ್ವಲ್ಪ ಹಿಗ್ಗಿಸಿ. ಇದು ನಿಮಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ

Follow Us:
Download App:
  • android
  • ios