Health Tips: ಮೈಕ್ರೋವೇವ್‌ನಲ್ಲಿ ಪ್ಲಾಸ್ಟಿಕ್ ಬೌಲ್ ಬಳಕೆ ಹೆಚ್ಚುತ್ತೆ ಈ ರೋಗ
ಕೆಲಸ ಸುಲಭವಾಗ್ಲಿ ಅಂತಾ ನಾವು ಅಡುಗೆ ಮನೆಯಲ್ಲಿ ಇಲೆಕ್ಟ್ರಿಕ್ ವಸ್ತುಗಳ ಬಳಕೆ ಮಾಡ್ತೇವೆ. ಅದ್ರ ಜೊತೆ ಪ್ಲಾಸ್ಟಿಕ್ ಪಾತ್ರೆಗಳನ್ನು ಹೆಚ್ಚಾಗಿ ಉಪಯೋಗಿಸ್ತೇವೆ. ಎಷ್ಟೇ ಸುರಕ್ಷಿತ ಅಂದ್ರೂ ಓವನ್ ನಲ್ಲಿ ನೀವಿಡುವ ಪ್ಲಾಸ್ಟಿಕ್ ನಿಮ್ಮ ಆರೋಗ್ಯ ಹಾಳ್ಮಾಡುತ್ತದೆ.
ಪ್ಲಾಸ್ಟಿಕ್ ಈಗಾಗಲೇ ವಿಶ್ವವ್ಯಾಪಿಯಾಗಿ ತನ್ನ ಕಬಂಧಬಾಹುಗಳನ್ನು ಎಲ್ಲೆಡೆ ಚಾಚಿದೆ. ಮನುಷ್ಯನ ಆರೋಗ್ಯಕ್ಕೆ ಮಾರಕ ಎಂಬ ಸತ್ಯ ಈಗಾಗಲೇ ಎಲ್ಲರಿಗೂ ತಿಳಿದಿದ್ದರೂ ಕೂಡ ನಾವು ಅದರ ಬಳಕೆಯನ್ನು ನಿಲ್ಲಿಸದೇ ಅನೇಕ ರೋಗಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ಪ್ಲಾಸ್ಟಿಕ್ ಕಾರಣದಿಂದಾಗಿ ಪ್ರತಿ ನಿತ್ಯ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.
ಪ್ಲಾಸ್ಟಿಕ್ (Plastic) ಬಾಟಲಿ ಹಾಗೂ ಕವರ್ ನಮ್ಮ ನಿತ್ಯದ ಬಳಕೆ ವಸ್ತುಗಳಾಗಿವೆ. ಅದ್ರಲ್ಲಿಯೇ ನೀರು, ಆಹಾರ (Food) ಪ್ಯಾಕಿಂಗ್ ಮಾಮೂಲಿಯಾಗಿದೆ. ಹಾಗೆಯೇ ಮನೆಯಲ್ಲಿ ಇಲೆಕ್ಟ್ರಿಕ್ ವಸ್ತುಗಳನ್ನು ನಾವು ಹೆಚ್ಚಾಗು ಬಳಸ್ತಿದ್ದೇವೆ. ಅದ್ರಲ್ಲಿ ಮೈಕ್ರೋವೇವ್ (Microwave) ಓವನ್ ಕೂಡ ಒಂದು. ಆರಾಮವಾಗಿ ಆಹಾರವನ್ನು ಇದ್ರಲ್ಲಿ ಬಿಸಿ ಮಾಡಲು ಸಾಧ್ಯವಾದ ಕಾರಣ, ವೆರೈಟಿ ಆಹಾರದ ಜೊತೆ ನಿತ್ಯದ ಆಹಾರ ಬಿಸಿ ಮಾಡಲು ಅನೇಕರು ಮೈಕ್ರೀವೇವ್ ಓವನ್ ಬಳಸ್ತಾರೆ. ಇದಕ್ಕಾಗಿಯೇ ಸಿದ್ಧವಾದ ಕೆಲ ಪ್ಲಾಸ್ಟಿಕ್ ಪಾತ್ರೆಗಳಿವೆ. ಜನರು ಅದು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಭ್ರಮೆಯಲ್ಲಿ ಅದನ್ನು ಕಣ್ಮುಚ್ಚಿ ಬಳಸ್ತಾರೆ. ಆದ್ರೆ ನಿಮ್ಮ ನಂಬಿಕೆ ತಪ್ಪು. ಓವನ್ ನಲ್ಲಿ ನೀವು ಪ್ಲಾಸ್ಟಿಕ್ ಡಬ್ಬಗಳನ್ನು ಇಡೋದ್ರಿಂದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (Polycystic Ovary Syndrome) ಲಕ್ಷಣ ಕಾಡುವ ಅಪಾಯ ಹೆಚ್ಚಿದೆ. ಇದು ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುತ್ತದೆ. ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಸಂತಾನೋತ್ಪತ್ತಿ, ಚಯಾಪಚಯ ಮತ್ತು ಅಂತಃಸ್ರಾವಕ ವ್ಯವಸ್ಥೆಯನ್ನು ಇದು ಅಸ್ವಸ್ಥಗೊಳಿಸುತ್ತೆ. ಪಾಲಿಕಾರ್ಬೋನೇಟ್ ಪ್ಲಾಸ್ಟಿಕ್ ನಲ್ಲಿ ಬಳಸಲಾಗುವ ಬಿಸ್ಫೆನಾಲ್-ಎ ಕೂಡ ಪಿಸಿಓಎಸ್ ಗೆ ಕಾರಣವಾಗುತ್ತದೆ.
ಹಾರ್ಟ್‌ಅಟ್ಯಾಕ್ ಆದ್ರೆ ಭಯ ಬೇಡ, ಈ ಬಯೋ ಜೆಲ್ ಹೃದಯ ಸರಿಪಡಿಸುತ್ತೆ
ಹಾರ್ಮೋನ್ ಅಸಮತೋಲನಕ್ಕೆ ಮುಖ್ಯ ಕಾರಣ ಪ್ಲಾಸ್ಟಿಕ್ : ಇತ್ತೀಚೆಗೆ ಮಹಿಳೆಯರಲ್ಲಿ ಪಿಸಿಓಎಸ್ ಸಮಸ್ಯೆ ಹೆಚ್ಚುತ್ತಿದೆ. ಇದು ಸಾಮಾನ್ಯವಾಗಿ ಹದಿಹರೆಯದ 10ರಲ್ಲಿ ಒಬ್ಬ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತೆ. ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಅನಿಯಮಿತ ಮುಟ್ಟು, ಕೂದಲು ಉದುರುವಿಕೆ, ಮುಖದ ಮೇಲೆ ಕೂದಲು ಮುಂತಾದ ಸಮಸ್ಯೆಗಳು ಕಾಣಿಸುತ್ತವೆ. ವೈದ್ಯರು ಹಾರ್ಮೋನ್ ವ್ಯತ್ಯಾಸಕ್ಕೆ ಪ್ರಮುಖ ಕಾರಣ ಪ್ಲಾಸ್ಟಿಕ್ ಎಂದು ಹೇಳುತ್ತಾರೆ.
ನಿತ್ಯಜೀವನದಲ್ಲಿ ಪ್ಲಾಸ್ಟಿಕ್ : ನಾವು ನಮ್ಮ ನಿತ್ಯ ಜೀವನದಲ್ಲಿ ಪಿಸಿಓಎಸ್ ಗೆ ಕಾರಣವಾಗುವ ಅನೇಕ ವಸ್ತುಗಳನ್ನು ಬಳಸುತ್ತಿದ್ದೇವೆ. ದಿನನಿತ್ಯ ನಾವು ಅಡುಗೆಮನೆ, ಬಾತ್ ರೂಮ್, ಬ್ಯಾಗ್ ಹೀಗೆ ಎಲ್ಲ ಕಡೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಈ ಕಾರಣದಿಂದಲೇ ಪಿಸಿಓಎಸ್ ನಂತಹ ಸಮಸ್ಯೆಗಳು ಹೆಚ್ಚುತ್ತಿರಬಹುದು ಎಂದು ಅನೇಕ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆಹಾರ ಮತ್ತು ನೀರಿನ ಮೂಲಕ ಮೈಕ್ರೊಪ್ಲಾಸ್ಟಿಕ್ ದೇಹವನ್ನು ಪ್ರವೇಶಿಸುತ್ತದೆ. ಪ್ಲಾಸ್ಟಿಕ್ ಅಂತಃಸ್ರಾವಕ ವ್ಯವಸ್ಥೆ ಅಥವಾ ಎಂಡೋಕ್ರೈನ್ ಸಂಯುಕ್ತಗಳನ್ನು ಹೊಂದಿದೆ. ಇದು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತೆ.
ಸದ್ಗುರು ಸಲಹೆ ಪಾಲಿಸಿದ್ರೆ 100% ತೂಕ ಕಡಿಮೆಯಾಗುತ್ತೆ
ಪಿಸಿಓಎಸ್ ಲಕ್ಷಣದಿಂದ ಹಾಗೂ ಪ್ಲಾಸ್ಟಿಕ್ ನಿಂದ ಮುಕ್ತಿ ಹೊಂದಲು ಹೀಗೆ ಮಾಡಿ :
ಪ್ಲಾಸ್ಟಿಕ್ ಬದಲು ಇವುಗಳನ್ನು ಬಳಸಿ : ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಲಕ್ಷಣದಿಂದ ಬಚಾವಾಗಲು ಪ್ಲಾಸ್ಟಿಕ್ ಅನ್ನು ತ್ಯಜಿಸಿ ಅದರ ಬದಲು ಗಾಜಿನ ಅಥವಾ ಸಿರಾಮಿಕ್ ಪಾತ್ರೆಗಳಲ್ಲಿ ಆಹಾರವನ್ನು ಸಂಗ್ರಹಿಸಿ. ಹಳೆಯ ಮತ್ತು ಸ್ಕ್ರ್ಯಾಚ್ ಆದ ಪ್ಲಾಸ್ಟಿಕ್ ಡಬ್ಬಗಳನ್ನು ಎಸೆಯಿರಿ. ಮೈಕ್ರೋವೇವ್ ಗಳಲ್ಲಿ ಕೂಡ ಪ್ಲಾಸ್ಟಿಕ್ ಪಾತ್ರೆಗಳನ್ನು ಇಡಬೇಡಿ. ಅದರ ಬದಲು ಟಿನ್ ಫೈಲ್ ಬಳಸಿ ಅಥವಾ ಮಣ್ಣಿನ ಪಾತ್ರೆ ಅಥವಾ ಬಿದಿರಿನ ಮಡಕೆಯನ್ನು ಕೂಡ ಬಳಸಬಹುದು.
ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಸಿಗುವ ಆಹಾರಗಳನ್ನು ಖರೀದಿಸಬೇಡಿ : ಸಾಮಾನ್ಯವಾಗಿ ಎಲ್ಲರ ಬ್ಯಾಗ್ ನಲ್ಲಿಯೂ ನಾವು ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕಾಣಬಹುದು. ಅದರ ಬದಲು ಸ್ಟೇನ್ ಲೆಸ್ ಸ್ಟೀಲ್ ಬಾಟಲಿಗಳನ್ನು ಬಳಸಿ. ಬಿಸ್ಫೆನಾಲ್-ಎ ನಿಂದ ಮುಕ್ತವಾಗಿರುವ ಎಳೆನೀರು ಅಥವಾ ಮುಚ್ಚಳ ಮುಚ್ಚಿದ ಹಿತ್ತಾಳೆ ಕಾಗದದ ಡಬ್ಬದಲ್ಲಿರುವ ಆಹಾರಗಳನ್ನು ಖರೀದಿಸಿ.
ಮರುಬಳಕೆಯಾಗುವ ಬ್ಯಾಗ್ ಬಳಸಿ : ಪ್ಲಾಸ್ಟಿಕ್ ಬ್ಯಾಗ್ ಗಳ ಬದಲು ಕಾಟನ್ ಅಥವಾ ಮರುಬಳಕೆ ಮಾಡುವಂತಹ ಬ್ಯಾಗ್ ಗಳನ್ನು ಬಳಸಲು ಆರಂಭಿಸಿ. ಇದರಿಂದ ಪ್ಲಾಸ್ಟಿಕ್ ಚೀಲದ ಉತ್ಪಾದನೆ ಮತ್ತು ವಿಲೇವಾರಿ ಸಂಪನ್ಮೂಲಗಳನ್ನು ಕೂಡ ಕಡಿಮೆಮಾಡಬಹುದು. ಪ್ಲಾಸ್ಟಿಕ್ ಬಳಕೆ ಕಡಿಮೆಯಾದರೆ ಪರಿಸರವನ್ನು ಕೂಡ ರಕ್ಷಿಸಬಹುದು. ಇದರಿಂದ ವಾತಾವರಣ ಶುದ್ಧವಾಗಿ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ.