ಮಲ ವಿಸರ್ಜನೆ ಮಾಡುವಾಗ ಹಾವು ದೇಹ ಹೊಕ್ಕಿದೆ ಎಂದ, ಅಷ್ಟಕ್ಕೂ ಏನಾಗಿದೆ ಅಂದ್ರು ಡಾಕ್ಟರ್?
ಹೊಟ್ಟೆನೋವು ಅಂತ ರೋಗಿಗಳು ಆಸ್ಪತ್ರೆಗೆ ಬರೋದು ಕಾಮನ್. ಆದ್ರೆ ಇಲ್ಲೊಬ್ಬ ಭೂಪ ಮಾತ್ರ ಹೊಟ್ಟೆನೋವು ಅಂತ ಹೇಳಿ ಆಸ್ಪತ್ರೆಗೆ ಬಂದು ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದ್ದಾನೆ. ಅಷ್ಟಕ್ಕೂ ಆತ ಹೇಳಿದ್ದೇನು?
ಉತ್ತರಪ್ರದೇಶ: ಮಲವಿಸರ್ಜನೆ ಮಾಡುವಾಗ ಹಾವು ತನ್ನ ದೇಹವನ್ನು ಪ್ರವೇಶಿಸಿತು ಎಂದು ಹೇಳಿ ವ್ಯಕ್ತಿಯೊಬ್ಬ ಗಾಬರಿಯಿಂದ ಆಸ್ಪತ್ರೆಗೆ ಓಡಿ ಬಂದ ಘಟನೆ ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ಹೋಗಿದ್ದಾನೆ. ವೈದ್ಯರು ಏನಾಯಿತೆಂದು ವಿಚಾರಿಸಿದಾಗ, ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿದ್ದಾಗ ತನ್ನ ಖಾಸಗಿ ಅಂಗದ ಮೂಲಕ ಹಾವು ದೇಹವನ್ನು ಪ್ರವೇಶಿಸಿದೆ ಎಂದು ಹೇಳಿದ್ದಾನೆ. ಮಹೇಂದ್ರ ಎಂದು ಗುರುತಿಸಲಾದ ವ್ಯಕ್ತಿ ಈ ರೀತಿ ಮಧ್ಯರಾತ್ರಿ ಹರ್ದೋಯ್ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಆಗಮಿಸಿದ್ದಾನೆ. ಮಹೇಂದ್ರನ ವಿಲಕ್ಷಣ ಪ್ರಕರಣವು ಕರ್ತವ್ಯದಲ್ಲಿದ್ದ ವೈದ್ಯಕೀಯ ಸಿಬ್ಬಂದಿಯ ಗಮನವನ್ನು ತ್ವರಿತವಾಗಿ ಸೆಳೆಯಿತು.
ದೇಹದೊಳಗೆ ಯಾವುದೇ ವಸ್ತು ಇಲ್ಲ ಎಂದ ವೈದ್ಯರು
ತಕ್ಷಣ ಅವನನ್ನು ಕೂಲಂಕುಷವಾಗಿ ಪರೀಕ್ಷಿಸಿದರು. ಆದರೆ ಆತನ ದೇಹದಲ್ಲಿ (Body) ಹಾವಿರುವ ಗುರುತಾಗಲೀ, ಹಾವು ಕಚ್ಚಿರುವ ಕುರುಹು ಆಗಲೀ ಅಥವಾ ದೇಹದೊಳಗೆ ಯಾವುದೇ ಇತರ ವಸ್ತು ಇರುವುದು ಕಂಡುಬರಲಿಲ್ಲ. ವೈದ್ಯಕೀಯ ಸಿಬ್ಬಂದಿ ಧೈರ್ಯ ತುಂಬಿದರೂ ಮಹೇಂದ್ರ ಅವರ ಕುಟುಂಬದ ಸದಸ್ಯರು ಎರಡನೇ ಅಭಿಪ್ರಾಯಕ್ಕಾಗಿ ಅವರನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವಂತೆ ಪಟ್ಟು ಹಿಡಿದರು.ಆತನನ್ನು ಪರೀಕ್ಷಿಸಿದ ವೈದ್ಯರು, ಆತ ಮಾದಕ ದ್ರವ್ಯದ ಅಮಲಿನಲ್ಲಿ ಈ ರೀತಿ ಹೇಳಿದ್ದಾಗಿ ಹೇಳಿದರು. ಮರುದಿನ ಬೆಳಿಗ್ಗೆ ವ್ಯಕ್ತಿಯನ್ನು ಆಸ್ಪತ್ರೆಯಿಂದ (Hospital) ಡಿಸ್ಚಾರ್ಜ್ ಮಾಡಲಾಯಿತು ಎಂದು ತಿಳಿಸಿದರು.
25 ವರ್ಷದ ಯುವಕನ ಹೊಟ್ಟೆಯಿಂದ 56 ಬ್ಲೇಡ್ ತುಂಡು ತೆಗೆದ ವೈದ್ಯರು
ಚಿಕಿತ್ಸೆ ನೀಡಿದ ವೈದ್ಯ ಡಾ.ಶೇರ್ ಸಿಂಗ್ ಪ್ರಕಾರ, 'ವ್ಯಕ್ತಿ ಮಾದಕದ್ರವ್ಯದ ಪ್ರಭಾವದಲ್ಲಿರುವಂತೆ ಕಾಣಿಸಿಕೊಂಡಿದ್ದ. ಆತ ಹೊಟ್ಟೆ ನೋವಾಗುತ್ತಿರುವುದಾಗಿ ಹೇಳಿಕೊಂಡಿದ್ದ. ಹೀಗೆ ಮಾದಕವಸ್ತು ಸೇವನೆಯಿಂದಲೂ ಉಂಟಾಗುತ್ತದೆ. ವ್ಯಕ್ತಿ ತನ್ನ ಕುಟುಂಬ ಸದಸ್ಯರೊಂದಿಗೆ ತನ್ನ ಆತಂಕವನ್ನು ಹಂಚಿಕೊಂಡಿದ್ದಾನೆ. ಅವರು ಗಾಬರಿಗೊಂಡರು ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಮರುದಿನ ಬೆಳಿಗ್ಗೆ, ಯುವಕನಿಗೆ CT ಸ್ಕ್ಯಾನ್ ಮಾಡಲಾಯಿತು, ಇದು ಯಾವುದೇ ಅಸಹಜತೆ ಇಲ್ಲ ಎಂಬುದನ್ನು ಬಹಿರಂಗಪಡಿಸಿತು. ಇದರ ನಂತರ, ಅವರ ಕುಟುಂಬ ಸದಸ್ಯರು ಅವರನ್ನು ಹೆಚ್ಚಿನ ಪರೀಕ್ಷೆಗೆ ಕರೆದೊಯ್ಯುವಂತೆ ಮನವಿ ಮಾಡಿದರು ಮತ್ತು ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು' ಎಂದಿದ್ದಾರೆ.
ಸರ್ಜರಿ ಮಾಡಿದ ವೈದ್ಯರಿಗೆ ಅಚ್ಚರಿ, ಹೊಟ್ಟೆಯೊಳಗಿತ್ತು ವೋಡ್ಕಾ ಮದ್ಯದ ಬಾಟಲಿ!
ಗುದನಾಳದಲ್ಲಿ ಸಿಲುಕಿತ್ತು ಸೌತೆಕಾಯಿ, ಬೀಜ ತಿಂದಿದ್ದೆ ಎಂದ ವ್ಯಕ್ತಿ, ದಂಗಾದ ವೈದ್ಯರು!
ಆಹಾರ ತಿನ್ನುವಾಗ ಸಾಮಾನ್ಯವಾಗಿ ಗಂಟಲಿನಲ್ಲಿ ಸಿಲುಕಿಕೊಳ್ಳುವುದು ಎಲ್ಲರನ್ನೂ ಕಾಡುವ ಸಮಸ್ಯೆ. ಆದರೆ ಈ ವ್ಯಕ್ತಿಯ ಗುದನಾಳದಲ್ಲಿಯೇ ತಿನ್ನೋ ಆಹಾರ ಸಿಲುಕಿಕೊಂಡಿತ್ತು. ಕೊಲಂಬಿಯಾದ ಬಾರಾನೋವಾದಿಂದ ಬಂದ 40 ವರ್ಷದ ವ್ಯಕ್ತಿಯೊಬ್ಬ ತಾನು ವಿಪರೀತ ಹಿಂಬದಿ ನೋವು ಅನುಭವಿಸುತ್ತಿದ್ದು, ನಡೆದಾಡಲು ಕಷ್ಟಪಡುತ್ತಿರುವುದಾಗಿ ಹೇಳಿದ್ದಾನೆ. ವೈದ್ಯರು ಈ ಬಗ್ಗೆ ಪರಿಶೀಲಿಸಿದಾಗ ಗುದನಾಳದಲ್ಲಿ ಸೌತೆಕಾಯಿ ಇರುವುದು ತಿಳಿದುಬಂದಿದೆ. ಈ ಬಗ್ಗೆ ಕೇಳಿದಾಗ ವ್ಯಕ್ತಿ ತಾನು ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿ ಸೇವಿಸುತ್ತೇನೆ. ಹೀಗಾಗಿ ಹೊಟ್ಟೆಯಲ್ಲಿ ಸೌತೆಕಾಯಿ ಬೆಳೆದು ಹೀಗಾಗಿರಬಹುದು ಎಂದಿದ್ದಾನೆ. ಆತನ ಮಾತಿಗೆ ವೈದ್ಯರು ದಂಗಾಗಿದ್ದಾರೆ.
ಘಟನೆಯ ವಿವರ ಹೀಗಿದೆ?
ಕೊಲಂಬಿಯಾದ ವ್ಯಕ್ತಿ ಹಲವು ವಾರಗಳಿಂದ ಕಾಲುಗಳಲ್ಲಿ ನೋವನ್ನು (Leg pain) ಅನುಭವಿಸುತ್ತಿದ್ದ. ಕೂರಲು, ಏಳಲು, ನಡೆಯಲು ಹೀಗೆ ಯಾವುದೇ ರೀತಿಯ ಚಟುವಟಿಕೆ ನಡೆಸಲು ಕಷ್ಟವಾಗುತ್ತಿತ್ತು. ಹೀಗಾಗಿ ಆತ ತಕ್ಷಣ ಚಿಕಿತ್ಸೆ (Treatment) ಪಡೆಯಲು ವೈದ್ಯರ ಬಳಿ ಹೋಗಿದ್ದಾನೆ. ವೈದ್ಯರು (Doctor) ಎಕ್ಸ್-ರೇ ಮೂಲಕ ಗುದನಾಳದಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಿದ್ದಾರೆ.
ಈ ಸಂದರ್ಭದಲ್ಲಿ ಸೌತೆಕಾಯಿ ಸಿಲುಕಿ ಹಾಕಿಕೊಂಡಿರುವುದು ಗೋಚರಿಸಿದೆ. ಶಸ್ತ್ರಚಿಕಿತ್ಸೆಯ (Operation) ನಂತರ, ಸೌತೆಕಾಯಿ ತನ್ನ ದೇಹದೊಳಗೆ ಹೇಗೆ ಸಿಲುಕಿಕೊಂಡಿದೆ ಎಂದು ತನಗೆ ತಿಳಿದಿಲ್ಲ ಎಂದು ವ್ಯಕ್ತಿ ಹೇಳಿದನು. ಮಾತ್ರವಲ್ಲ, ಬಹಳಷ್ಟು ಸೌತೆಕಾಯಿಗಳನ್ನು ತಿನ್ನುವ ಕಾರಣ ಸೌತೆಕಾಯಿ (Cucumber) ಬೀಜದಿಂದಾಗಿ ಜೀರ್ಣಾಂಗ ವ್ಯವಸ್ಥೆಯೊಳಗೆ ಸೌತೆಕಾಯಿ ಬೆಳೆದಿರಬಹುದು ಎಂದು ತಿಳಿಸಿದನು. ವೈದ್ಯರು ವ್ಯಕ್ತಿಯ ಬಾಲಿಶ ಹೇಳಿಕೆಗೆ ಪ್ರತಿಕ್ರಿಯಿಸದೆ ಆತನನ್ನು ಮನೆಗೆ ಕಳುಹಿಸಿದರು.